ಮಸ್ಕತ್‌ನಲ್ಲಿ ಶನೀಶ್ವರ ಪೂಜಾ ತಾಳಮದ್ದಳೆ

10:56 AM, Monday, April 9th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

shanishwaraಮಂಗಳೂರು: ಒಮಾನ್ ರಾಷ್ಟ್ರದ ಮಸ್ಕತ್‌ನ ಬಿರುವ ಜವಣೆರ್ ವಾಟ್ಸ್‌ಆಪ್ ಗ್ರೂಪ್ ಆಯೋಜನೆಯಲ್ಲಿ ಶ್ರೀ ಶನೀಶ್ವರ ಮಹಾತ್ಮೆ ತಾಳಮದ್ದಳೆ ಪೂಜೆ ಮಸ್ಕತ್ ವಾರ್‌ಸೈಟ್ ಶ್ರೀ ಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು. ತುಳುನಾಡಿನ ಸುಮಾರು ಸಾವಿರದ ಇನ್ನೂರು ಮಂದಿ ಭಕ್ತರು, ಯಕ್ಷಗಾನಾಭಿಮಾನಿಗಳು ಒಮಾನ್ ರಾಷ್ಟ್ರದಲ್ಲಿ ಜರಗಿದ ಪ್ರಪ್ರಥಮ ಶನೀಶ್ವರ ಪೂಜೆಯಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.

ಬಿ.ಜೆ ಗ್ರೂಪ್ ಖ್ಯಾತಿಯ ಬಿರುವ ಜವಣೆರ್ ಸಂಘಟನ ಸಮಾನ ಮನಸ್ಕರ ವಾಟ್ಸ್‌ಆಪ್ ಕೂಟವಾಗಿದ್ದು ಸಾಮಾಜಿಕ, ಧಾರ್ಮಿಕ ಹಾಗೂ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಮಿತ್ರ ಬಳಗ, ಧಾರ್ಮಿಕ ಕಾರ್ಯಕ್ರಮದೊಂದಿಗೆ ಮನರಂಜನೆ ಒದಗಿಸುವ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಬೇಕೆನ್ನುವ ತುಡಿತದಿಂದ ಉದ್ಯಮಿ, ಸಂಘಟಕ ಗುರುಪ್ರಸಾದ್ ನಾನಿಲ್ ಮತ್ತು ವಿಜಯಕುಮಾರ್ ಪದ್ಮನೂರು ಅವರ ಪರಿಕಲ್ಪನೆಯಲ್ಲಿ ಸಾರ್ವಜನಿಕ ಶ್ರೀ ಶನೀಶ್ವರ ಪೂಜೆಯನ್ನು ಸಂಯೋಜಿಸಲಾಯಿತು.

ಊರು, ಪರವೂರು ಹಾಗೂ ದುಬಾ, ಅಬುದಾಬಿಯಲ್ಲಿ ಶನೀಶ್ವರ ಪೂಜಾ ತಾಳಮದ್ದಳೆ ಕಾರ್ಯಕ್ರಮ ನೀಡಿರುವ ಶ್ರೀ ಶನೀಶ್ವರ ಭಕ್ತಿವೃಂದ ಪಕ್ಷಿಕೆರೆ-ಕುಡ್ಲ ಮಂಡಳಿಯ ಸದಸ್ಯರನ್ನು ಮಸ್ಕತ್‌ಗೆ ಆಹ್ವಾನಿಸಿ ಶನಿಪೂಜೆ ನಡೆಸಲಾಯಿತು.

shanishwara-2ಕಲಾವಿದ ರವಿ ಭಟ್ ಪಡುಬಿದ್ರೆ ಪೌರೋಹಿತ್ಯದಲ್ಲಿ , ದಯಾನಂದ ಪೂಜಾರಿ ಹಾಗೂ ರಂಜನಿ ದಯಾನಂದ ದಂಪತಿಗಳ ಯಜಮಾನ್ಯದಲ್ಲಿ ಶನಿಪೂಜೆ ನಡೆಸಲಾಯಿತು. ಯಕ್ಷಗಾನ ಹಿಮ್ಮೇಳದಲ್ಲಿ ಸತೀಶ್ ಶೆಟ್ಟಿ ಬೋಂದೆಲ್, ಪದ್ಮನಾಭ ಶೆಟ್ಟಿಗಾರ್, ಭಾಸ್ಕರ್ ಭಟ್ ಕಟೀಲ್ ಹಾಗೂ ಮುಮ್ಮೇಳದಲ್ಲಿ ಕದ್ರಿ ನವನೀತ ಶೆಟ್ಟಿ, ಸೀತಾರಾಂ ಕುಮಾರ್ ಕಟೀಲ್, ದಿನೆಶ್ ಶೆಟ್ಟಿ ಕಾವಳಕಟ್ಟೆ, ವಿಜಯ ಕುಮಾರ ಶೆಟ್ಟಿ ಮೊಲೊಟ್ಟು, ಪ್ರಸನ್ನ ಶೆಟ್ಟಿ ಅತ್ತೂರು ಭಾಗವಹಿಸಿದ್ದರು. ದೀಪಕರಾಗ ಸನ್ನಿವೇಶದಲ್ಲಿ ಮಹಿಳೆಯರು ದೀಪಪ್ರಜ್ವಲನ ಸೇವೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಸಾಹಿತಿ ಮುದ್ದು ಮೂಡುಬೆಳ್ಳೆ ಹಾಗೂ ಆರ್.ಕೆ ಬಂಗೇರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಗುರುಪ್ರಸಾದ್ ನಾನಿಲ್ ಸ್ವಾಗತಿಸಿದರು. ಶಿವಾನಂದ, ಮಾಧುರಿ ರತನ್, ಶೋಭಾ ದಯಾನಂದ, ಗಂಗಾಧರ ಪೂಜಾರಿ, ಶ್ರೀಧರ ಪೂಜಾರಿ, ವಿಜಯಕುಮಾರ್ ಪದ್ಮನೂರು, ಶಮಿತ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

ಮಂಡಳಿಯ ಪ್ರಧಾನ ಸಂಚಾಲಕ ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ ಹಾಗೂ ಕಲಾವಿದರನ್ನು ಒಮಾನ್ ಲಾಂಛನ ಘಟಕ ನೀಡಿ ಸನ್ಮಾನಿಸಲಾಯಿತು.

ಕದ್ರಿ ನವನೀತ ಶೆಟ್ಟಿಯವರು ಶನಿಪೂಜಾ ವಿಶೇಷತೆಯ ಬಗ್ಗೆ ಮಾಹಿತಿ ನೀಡಿದರು. ನೂರಾರು ಭಕ್ತರು ಐದು ಗಂಟೆಗಳ ಕಾಲ ಚಾಪೆಯಲ್ಲಿ ಕುಳಿತು ಶನಿಪೂಜೆಯಲ್ಲಿ ಪಾಲ್ಗೊಂಡಿರುವುದು ಮಸ್ಕತ್‌ನಲ್ಲಿ ನೆಲೆಸಿರುವ ಧಾರ್ಮಿಕ ಕಾಳಜಿ ಹಾಗೂ ಶ್ರದ್ಧೆಯನ್ನು ಬಿಂಬಿಸುತ್ತದೆ. ಬಿ.ಜೆ ಗ್ರೂಪ್‌ನ ಕಾರ್ಯ ವೈಖರಿಯನ್ನು ಅಭಿನಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English