- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಭಕ್ತಿ ಭಾವೈಕತೆಯ ಆಯುಧ ಪೂಜೆ

Viajaya Dashami [1]

ದಸರಾ ಹಬ್ಬದ ಕೊನೆಯ ದಿನ ವಿಜಯದಶಮಿಯಾದರೆ. ಒಂಭತ್ತನೆ ದಿನ ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮವನ್ನು ಆಚರಿಸಲಾಗುತ್ತದೆ, ಎಲ್ಲೆಡೆ ವಾಹನಗಳಿಗೆ ಹಾಗೂ ಆಯುಧಗಳಿಗೆ ಪೂಜೆ ನಡೆಸಲಾಗುತ್ತದೆ

ಅಂಗಡಿ, ಕಚೇರಿ, ಮಳಿಗೆಗಳಲ್ಲಿ ವಾಹನ ಸೇರಿದಂತೆ ಉಪಯೋಗಿಸುವ ಎಲ್ಲಾ ಆಯುಧಗಳನ್ನು ಹೂ ತೋರಣಗಳಿಂದ ಶೃಂಗಾರಗೊಳಿಸಿ ಭಕ್ತಿ ಭಾವೈಕತೆಯಿಂದ ಪೂಜೆ ಸಲ್ಲಿಸಲಾಗುತ್ತಿದೆ.

ಜಾತಿ ಭೇಧವಿಲ್ಲದೆ ಆಯುಧ ಪೂಜೆಯನ್ನು ನಾಡಿನೆಲ್ಲೆಡೆ ಆಚರಿಸುತ್ತಾರೆ. ವಾಹನಗಳಿಗೆ ಪೂಜೆ ಸಲ್ಲಿಸುವುದರಿಂದ ದೀರ್ಘ ಬಾಳ್ವಿಕೆ ಸಹಿತ ಅಪಘಾತವನ್ನು ತಪ್ಪಿಸಬಹುದಾಗಿದೆ ಎಂಬುದು ನಂಬಿಕೆಯಾಗಿದೆ. ಇದರಂತೆ ತಮ್ಮ ತಮ್ಮ ಊರುಗಳಲ್ಲಿ ದೇವಾಲಯಗಳಿಗೆ ತೆರಳಿ ವಾಹನ ಮಾಲಿಕರು ವಾಹನಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಯುಧ ಪೂಜೆಯನ್ನು ರಾಜರ ಆಳ್ವಿಕೆಯ ಕಾಲದಿಂದಲೇ ಆಚರಿಸಲಾಗುತ್ತಿತ್ತು. ಸಾಂಸ್ಕೃತಿಕ ವೈಭವ ಹಾಗೂ ಇತಿಹಾಸ ನೆನಪಿಸುವಂತೆಯೇ ಅರಮನೆ ನಗರಿಯಲ್ಲಿ ಪೂಜೆಯ ಈಗಲೂ ಸಂಭ್ರಮ ಕಂಡುಬರುತ್ತಿದೆ.

ಬೆಲೆ ಏರಿಕೆ ಮಧ್ಯದಲ್ಲಿಯೇ ಮಾರುಕಟ್ಟೆಯಲ್ಲಿ ಭಾರಿ ಜನದಟ್ಟಣೆ ಇತ್ತು.