- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಗ್ರಾಪಂ ಕಚೇರಿಯಲ್ಲೇ ಪಿಡಿಒನ ರಾಸಲೀಲೆ… ಕ್ಯಾಮರಾ ಕಣ್ಣಲ್ಲಿ ಸೆರೆ

udupi [1]ಉಡುಪಿ: ಪಂಚಾಯತ್ ಪಿಡಿಒವೊಬ್ಬನ ರಾಸಲೀಲೆ ಪ್ರಕರಣವೊಂದು ಬಯಲಾಗಿದೆ. ಕುಂದಾಪುರ ತಾಲೂಕಿನ ಗ್ರಾಮ ಪಂಚಾಯತ್‌ವೊಂದರ ಪಿಡಿಒವೊಬ್ಬ ಮಹಿಳಾ ಸಿಬ್ಬಂದಿಯ ಜೊತೆ ರಾಸಲೀಲೆ ನಡೆಸಿದ ದೃಶ್ಯಗಳು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿವೆ.

ಈತ ಒಂದು ವರ್ಷದಿಂದ ಆ ಗ್ರಾಮ ಪಂಚಾಯತ್‌ನಲ್ಲಿ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಕರ್ತವ್ಯದ ವೇಳೆ ಸರ್ಕಾರಿ ಕಚೇರಿಯಲ್ಲೇ ಕಾಮದಾಟ ನಡೆಸಿರುವುದು ಬೆಳಕಿಗೆ ಬಂದಿದೆ. ಗ್ರಾಮ ಪಂಚಾಯತ್‌ನಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವಿವಾಹಿತ ಯುವತಿಯನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿರುವುದು ಈಗ ಗುಟ್ಟಾಗಿ ಉಳಿದಿಲ್ಲ.

ಸರ್ಕಾರಿ ಕಚೇರಿಯಲ್ಲೇ ಅಸಹ್ಯಕರ ಕೃತ್ಯ ನಡೆಸಿರುವ ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಮತಾ ಸೈನಿಕ ದಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿದೆ. ಕೂಡಲೇ ಈತನನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಸಮತಾ ಸೈನಿಕ ದಳ ಒತ್ತಾಯಿಸಿದೆ.