ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಪ್ಯಾರಾ ಮಿಲಿಟರಿ ಫೋರ್ಸ್ ಮೊಕ್ಕಾಂ ಹೂಡಿದೆ.
ಸುರತ್ಕಲ್ ಪ್ರದೇಶದಲ್ಲಿ ಕೇಂದ್ರೀಯ ಪ್ಯಾರಾ ಮಿಲಿಟರಿ ಪೋರ್ಸ್ನಿಂದ ಇಂದು ರೂಟ್ ಮಾರ್ಚ್ ನಡೆಯಿತು. ಸುರತ್ಕಲ್, ಕಾಟಿಪಳ್ಳ, ಕುಳಾಯಿ ಪ್ರದೇಶದಲ್ಲಿ ರೂಟ್ ಮಾರ್ಚ್ ನಡೆಸಲಾಯಿತು. ಸುರತ್ಕಲ್ ಪೊಲೀಸರ ಸಹಕಾರದೊಂದಿಗೆ ಪಥ ಸಂಚಲನ ನಡೆಯಿತು.
ಸುರತ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ರಾಮಕೃಷ್ಣ ಕೆ.ಜಿ. ಸೇರಿದಂತೆ ಮತ್ತಿತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಸೂಕ್ಷ್ಮ ಪ್ರದೇಶವಾಗಿರುವ ಸುರತ್ಕಲ್ ಭಾಗದಲ್ಲಿ ರೂಟ್ ಮಾರ್ಚ್ ಮಾಡುವ ಮೂಲಕ ಸಾರ್ವಜನಿಕರಲ್ಲಿ ಧೈರ್ಯ ತುಂಬುವ ಕೆಲಸವನ್ನು ಕೇಂದ್ರೀಯ ಪ್ಯಾರಾ ಮಿಲಿಟರಿ ತಂಡ ಮಾಡಿದೆ.
Click this button or press Ctrl+G to toggle between Kannada and English