ಮೈಸೂರು: ಇನ್ನು ಮುಂದೆ ಮನೆಗಳಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಇದೆ ಅಂತ ಬೋರ್ಡ್ ಹಾಕಬೇಕಿದೆ ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಕಟುವಾಗಿ ಟೀಕಿಸಿದ್ದಾರೆ.
ನಗರದ ಆಂದೋಲನ ವೃತ್ತದಲ್ಲಿ ರಾಮಕೃಷ್ಣ ಪರಮಹಂಸ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ, ಯತೀಂದ್ರ ಸಿದ್ದರಾಮಯ್ಯ ಪರ ಪ್ರಚಾರ ನಡೆಸುತ್ತಿರುವ ಪ್ರಗತಿಪರ ವೇದಿಕೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಜೆಡಿಎಸ್ ಹಾಗೂ ಬಿಜೆಪಿ ವಿರುದ್ಧ ಕಟುವಾಗಿ ಟೀಕಿಸಿದರು.
ಜೆಡಿಎಸ್ ಹಾಗೂ ಬಿಜೆಪಿಯಿಂದ ರಾಜ್ಯಕ್ಕೆ ಏನು ಕೊಡುಗೆ ಇಲ್ಲ. ಪರಸ್ಪರ ಕಚ್ಚಾಟದಿಂದಲೇ ಕಾಲ ಕಳೆಯುವ ಇವರು ಜನರಿಗೆ ಏನು ಅಭಿವೃದ್ಧಿ ಕೊಡುತ್ತಾರೆ. ಇಂತಹವರು ಮನೆ ಮುಂದೆ ಬಂದರೆ, ಮುಂದೆ ಕಳುಹಿಸಿ ಎಂದರು.
ಡಾ.ಮರಳಸಿದ್ದಪ್ಪ, ಡಾ. ಜಿ.ಎಸ್.ಸಿದ್ದರಾಮಯ್ಯ, ಪ್ರೊ.ಕೆ.ಎಸ್.ಭಗವಾನ್, ಪ್ರೊ. ಅರವಿಂದ ಮಾಲಗತ್ತಿ, ರಂಗಕರ್ಮಿ ಜನಾರ್ಧನ್, ಕೆ.ಎಸ್.ಶಿವರಾಂ, ಮಹೇಶ್ ಚಂದ್ರ ಗುರು ಮತ್ತಿತರ ಪ್ರಗತಿಪರರು ಇದ್ದರು.
Click this button or press Ctrl+G to toggle between Kannada and English