- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬಿಜಪಿಯಿಂದ ಬೂತ್ ಮಟ್ಟದ ಪಕ್ಷದ ಕಾರ್ಯಕರ್ತರ ನವಶಕ್ತಿ ಸಮಾವೇಶ

Monappa Bhandary [1]ಮಂಗಳೂರು :  ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯ ಪ್ರಕಾರ ಚುನಾವಣಾ ಪೂರ್ವದಲ್ಲಿ ಬೂತ್ ಮಟ್ಟದಿಂದ ಕಾರ್ಯಕರ್ತರ ಸಂಘಟನೆ ನಡೆದಿದೆ. ಪ್ರತಿ ಬೂತ್‌ಗಳಲ್ಲಿ ಕನಿಷ್ಠ 12 ಕಾರ್ಯಕರ್ತರನ್ನು ಗುರುತಿಸಲಾಗಿದೆ ಎಂದು ಬಿಜಪಿಯ ಜಿಲ್ಲಾ ಚುನಾವಣಾ ವಕ್ತಾರ ಮೋನಪ್ಪ ಭಂಡಾರಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಬೂತ್ ಮಟ್ಟದ ಪಕ್ಷದ ಕಾರ್ಯಕರ್ತರ ನವಶಕ್ತಿ ಸಮಾವೇಶ ನಡೆಯಲಿದೆ. ಮಹಿಳಾ ವಿಭಾಗದ 83 ಶಕ್ತಿ ಕೇಂದ್ರಗಳ ಮೂಲಕ ಆರಂಭಗೊಂಡ ಒಂದು ಹಂತದ ಪ್ರಚಾರ ಕಾರ್ಯ ನಾಳೆಗೆ ಕೊನೆಗೊಳ್ಳಲಿದೆ .ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಒಂದರಂತೆ ಬಿಜೆಪಿ ಮಹಿಳಾ ಶಕ್ತಿ ಕೇಂದ್ರಗಳಿವೆ ನಗರದಲ್ಲಿ 7ರಿಂದ 8 ವಾರ್ಡ್‌ಗಳಿಗೆ ಒಂದರಂತೆ ಶಕ್ತಿ ಕೇಂದ್ರಗಳಿವೆ ಎಂದು ಮೋನಪ್ಪ ಭಂಡಾರಿ ತಿಳಿಸಿದ್ದಾರೆ.

ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ಅಧಿಕೃತ ನಿರ್ಧಾರದಂತೆ ಸೂಕ್ತ ಮಾರ್ಗದಲ್ಲಿ ಪಕ್ಷದ ಅಧ್ಯಕ್ಷರ ಮೂಲಕ ಪ್ರಕಟಿಸಲಾಗುವುದು ಈ ಬಗ್ಗೆ ವಿಪಕ್ಷಗಳ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಮೋನಪ್ಪ ಭಂಡಾರಿ ತಿಳಿಸಿದ್ದಾರೆ.

ಶ್ರೀಕರ ಪ್ರಭು ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಬಿಜೆಪಿಗೆ ಯಾವೂದೇ ಸಮಸ್ಯೆಯಾಗುವುದಿಲ್ಲ:- ಶ್ರೀಕರ ಪ್ರಭುವನ್ನು ಪಕ್ಷದಿಂದ ಆರು ವರ್ಷಗಳ ಕಾಲ ಅಮಾನತು ಮಾಡಲಾಗಿದೆ. ಚುನಾವಣೆಗೆ ನಿಲ್ಲುವ ವೈಯಕ್ತಿಕ ಹಕ್ಕು ಅವರಿಗಿದೆ. ಬಿಜೆಪಿಗೆ ಅವರು ಚುನಾವಣೆಗೆ ನಿಲ್ಲುವುದರಿಂದ ಯಾವೂದೇ ಸಮಸ್ಯೆಯಾಗುವುದಿಲ್ಲ. ಎಷ್ಟೇಷ್ಟೋ ದೊಡ್ಡ ವ್ಯಕ್ತಿಗಳು ಪಕ್ಷಕ್ಕೆ ಬರ್ತಾರೆ ಹೊಗ್ತಾರೆ. ಬಿಜೆಪಿ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಮೋನಪ್ಪ ಭಂಡಾರಿ ತಿಳಿಸಿದ್ದಾರೆ.

ಪಕ್ಷದ ವತಿಯಿಂದ ಅಂಬೇಡ್ಕರ್ ಅವರ ಜನ್ಮ ದಿನವನ್ನು ಎ.14ರಂದು ಆಚರಿಸಲಾಗುವುದು ಎಂದು ಮೋನಪ್ಪ ಭಂಡಾರಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ನಿತಿನ್ ಕುಮಾರ್, ಕಿಶೋರ್ ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.