ಮಂಗಳೂರಿನಲ್ಲಿ ಟ್ರಯಂಫ್ ಮೋಟಾರ್ ಸೈಕಲ್ಸ್ ಡೀಲರ್‌ಶಿಪ್ ಆರಂಭ

5:23 PM, Thursday, April 26th, 2018
Share
1 Star2 Stars3 Stars4 Stars5 Stars
(No Ratings Yet)
Loading...

trayamph-motarಮಂಗಳೂರು: ಟ್ರಯಂಫ್ ಮೋಟಾರ್ ಸೈಕಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ನೂತನ ಡೀಲರ್‌ಶಿಪ್‌ಗೆ ನಗರದ ಪಡೀಲ್ ಬಳಿ ಚಾಲನೆ ನೀಡಲಾಗಿದ್ದು, ಐಷಾರಾಮಿ ಬ್ರಾಂಡ್‌ನ ಟ್ರಯಂಫ್ ಮೋಟಾರ್ ಸೈಕಲ್ಸ್ ಇದೇ ಮೊದಲ ಬಾರಿಗೆ ಮಂಗಳೂರು ಗ್ರಾಹಕರಿಗೆ ಲಭ್ಯವಾಗಲಿದೆ.

2,450 ಚದರ ಅಡಿ ವಿಸ್ತೀರ್ಣದ ಮಂಗಳೂರಿನ ಈ ಡೀಲರ್‌ಶಿಪ್ ಮಳಿಗೆಯನ್ನು ಟ್ರಯಂಫ್‌ನ ಈ ಎಕ್ಸ್‌ಪೀರಿಯೆನ್ಸ್ ಸೆಂಟರ್‌ನಲ್ಲಿ ಕನ್ಸಲ್ಟೇಶನ್, ಕಾಫಿ ಬ್ರೇಕ್, ಸಂವಹನಕ್ಕೆ ಲೌಂಜ್, ಕಸ್ಟಮೈಸೇಶನ್‌ಗೆ ಅನುಕೂಲ ಕಲ್ಪಿಸುವ ಬಿಲ್ಡ್ ಯುವರ್ ಓನ್ ಬೈಕ್ ರೆನ್, ಬೆಸ್ಟ್ ಗೇರ್ ಆಯ್ಕೆಗೆ ಮರ್ಕಂಡೈಸ್ ಪ್ರದೇಶ ಮತ್ತು ನಿರ್ವಹಣೆ ಹಾಗೂ ರಿಪೇರಿಗೆ ಸರ್ವಿಸ್ ಬೇ ಪ್ರದೇಶವನ್ನು ಹೊಂದಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಮಲ್ ಸಂಬ್ಲಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಮಂಗಳೂರಿನಲ್ಲಿ ಟ್ರಯಂಫ್‌ನ ಡೀಲರ್‌ಶಿಪ್ ಆರಂಭದ ಮೂಲಕ ದಕ್ಷಿಣ ಭಾರತದಲ್ಲಿ ಸಂಸ್ಥೆಯ ಮಾರುಕಟ್ಟೆಯನ್ನು ವಿಸ್ತರಿಸಿದಂತಾಗಿದೆ. ಸಂಸ್ಥೆಯ ಅಲ್ಟ್ರಾ ಮಾರ್ಡನ್ ಡೀಲರ್‌ಶಿಪ್ ಆರಂಭದ ಐದನೆ ವರ್ಷ ಇದಾಗಿದೆ. ಗ್ರಾಹಕರಿಗೆ ತಂತ್ರಜ್ಞಾನದಿಂದ ಕೂಡಿದ, ಸುರಕ್ಷಿತ ಹಾಗೂ ಅತ್ಯಾಧುನಿಕ ಶೈಲಿಯ ಬ್ರಿಟಿಷ್ ಮೋಟಾರ್ ಸೈಕಲ್‌ನ್ನು ಒದಗಿಸುವುದು ಸಂಸ್ಥೆಯ ಗುರಿಯಾಗಿದೆ.

150 ವರ್ಷಗಳ ಹಳೆಯ ಬ್ರಿಟಿಶ್ ಮೋಟಾರ್ ಸೈಕಲ್ ಬ್ರಾಂಡನ್ನು ಸಂಸ್ಥೆಯು ಹೊಂದಿದ್ದು, ವಿಶ್ವದರ್ಜೆಯ, ಲಕ್ಸುರಿ ಮೋಟಾರು ಸೈಕಲ್‌ಗಳ ವಿವಿಧ ಶ್ರೇಣಿಗಳು ಟ್ರಯಂಫ್‌ನಲ್ಲಿ ಲಭ್ಯ. 7.7 ಲಕ್ಷ ರೂ. ಆರಂಭಿಕ ಬೆಲೆಯೊಂದಿಗೆ ವಿವಿಧ ಮಾದರಿ, ಶ್ರೇಣಿ ಹಾಗೂ ತಂತ್ರಜ್ಞಾನದಿಂದ ಕೂಡಿದ ಮೋಟಾರು ಸೈಕಲ್‌ಗಳನ್ನು ಗ್ರಾಹಕರು ಮಂಗಳೂರಿನ ಡೀಲರ್‌ಶಿಪ್ ಮಳಿಗೆಯಲ್ಲಿ ಬುಕ್ ಮಾಡಿಕೊಂಡು ಖರೀದಿಸಬಹುದಾಗಿದೆ ಎಂದು ಅವರು ಹೇಳಿದರು.

ಟ್ರಯಂಫ್ ಸಂಸ್ಥೆಯು ತನ್ನ ಗ್ರಾಹಕರಿಗೆ ಮೋಟಾರು ಸೈಕಲ್‌ಗಳಿಗೆ ಎರಡು ವರ್ಷಗಳ ಅನಿಯಮಿತ ಕಿಲೋಮೀಟರ್‌ಗಳ ವಾರಂಟಿಯನ್ನು ಒದಗಿಸುತ್ತದೆ. ಜತೆಗೆ ಐದು ವರ್ಷಗಳ ಸಾಲ ಸೌಲಭ್ಯವನ್ನೂ ಒದಗಿಸುತ್ತಿದೆ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಮಂಗಳೂರು ಡೀಲರ್ ಮುಖ್ಯಸ್ಥ ಸಂಜಯ್ ಎಂ.ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English