ಮತಬೇಟೆಗೆ ಭರವಸೆಗಳ ಮಹಾಪೂರ…ಪ್ರದೇಶವಾರು ಮತ ಸೆಳೆಯಲು ‘ಕೈ’ ಮಾಸ್ಟರ್ ಪ್ಲಾನ್!

3:04 PM, Friday, April 27th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

congressಮಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್‌ ಪಕ್ಷ ಎದುರಾಳಿಗಳಿಗಿಂತಲೂ ಮುಂಚಿತವಾಗಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಮೂಲಕ ಮತದಾರರನ್ನ ಸೆಳೆಯಲು ಮಾಸ್ಟರ್‌ ಪ್ಲಾನ್‌ ರೂಪಿಸಿದೆ.

ಪ್ರಮುಖವಾಗಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿ ಯುವಕರಿಗೆ ಉದ್ಯೋಗ ನೀಡುವ ಭರವಸೆ ನೀಡಿದೆ. ಅಲ್ಲದೇ ಪ್ರತಿ ವರ್ಷ 15-20 ಲಕ್ಷ ಉದ್ಯೋಗ ಸೃಷ್ಠಿ ಮಾಡುವ ವಾಗ್ದಾನ ನೀಡಿದ್ದು, ಪ್ರತಿಯೊಂದು ಹಳ್ಳಿಗೂ ವಿದ್ಯುತ್‌ ನೀಡುವ ಭರವಸೆಯನ್ನ ಮತದಾರರಿಗೆ ನೀಡಿದೆ.

ಮಹಿಳಾ ಸಬಲೀಕರಣ, ಕೃಷಿಗೆ ವಿಶೇಷ ವಲಯ, ಪ್ರಮುಖವಾಗಿ ನೀರಾವರಿಗೆ 1ಲಕ್ಷ 25 ಸಾವಿರ ಕೋಟಿ ಹಣ ಉಪಯೋಗಿಸುವುದಾಗಿ ಅನ್ನದಾತರಿಗೆ ಭರವಸೆ ಮೂಡಿಸಿದೆ.

ಪ್ರಣಾಳಿಕೆಯ ಮುಖ್ಯಾಂಶಗಳು ಇಂತಿವೆ

ಮುಂದಿನ 5 ವರ್ಷದಲ್ಲಿ 10 ಲಕ್ಷ ಮನೆ ನಿರ್ಮಾಣ

2025ಕ್ಕೆ ನವ ಕರ್ನಾಟಕ ನಿರ್ಮಾಣದ ಆಶಯ

ರಾಜ್ಯದ ಪ್ರಮುಖ ರಸ್ತೆಗಳ ಅಭಿವೃದ್ಧಿ

ರೈತರ ಆದಾಯ ದ್ವಿಗುಣಗೊಳಿಸಲು ಒತ್ತು

ಒಂದು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ

ಪ್ರತಿ ವರ್ಷ 15ರಿಂದ 20 ಲಕ್ಷ ಉದ್ಯೋಗ ಸೃಷ್ಟಿ

20 ಸಾವಿರ ಐಟಿ ಸ್ಟಾರ್ಟಪ್ಸ್

ಪ್ರತಿ ಜಿಲ್ಲೆಗೆ 50 ಹಾಸಿಗೆಯ ಆಯುಷ್ ಆಸ್ಪತ್ರೆ

ಪ್ರತಿ 3 ಜಿಲ್ಲೆಗೆ 1 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

ತಳಮಟ್ಟದಲ್ಲಿ 5 ಸಾವಿರ ಸ್ತ್ರೀ ಶಕ್ತಿ ಸಂಘಗಳ ರಚನೆ

ನೀರಾವರಿ 1 ಲಕ್ಷ 25 ಸಾವಿರ ಕೋಟಿ ರೂ. ಮೀಸಲು

ನಗರ ಪ್ರದೇಶದಲ್ಲಿ ಒಂದು ಮನೆಗೆ ಒಂದು ನಲ್ಲಿ

ಕರ್ನಾಟಕಕ್ಕೆ ಕೃಷಿ ಕಾರಿಡಾರ್ ನಿರ್ಮಾಣ

ರಾಜ್ಯದ ಪ್ರತಿ ಹಳ್ಳಿಗಳಿಗೆ ದಿನ 24 ಗಂಟೆ ನೀರು

20 ಸಾವಿರ ಹೊಸ ಅಂಗನವಾಡಿ ನಿರ್ಮಾಣ

ಪ್ರವಾಸೋದ್ಯಮದ ಮೂಲಕ 65 ಲಕ್ಷ ಉದ್ಯೋಗ ಸೃಷ್ಟಿ

ಸೋಲಿಗರು, ಕೊರಗರು, ಪಂಬದ, ನಲಿಕೆ, ಪರವ, ಕುಡುಬಿ ಜನಾಂಗದ ಎಲ್ಲರಿಗೂ ವಸತಿ

ಮಂಗಳೂರು- ಹುಬ್ಬಳ್ಳಿ ನಡುವೆ ವಿಮಾನ ಸಂಪರ್ಕ

ಎಲ್ಲ ಹಳ್ಳಿಗಳು ಸರ್ವ ಋತು ರಸ್ತೆ

15 ಟಿಎಂಸಿ ಕಾವೇರಿ ನೀರು ಹೆಚ್ಚುವರಿ ಬಳಕೆಗೆ ನೀಲನಕ್ಷೆ

ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿಗೆ ಮುಂದಿನ ಬಜೆಟ್‌ನಲ್ಲಿ ಹೆಚ್ಚುವರಿ ಅನುದಾನ

ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಆದ್ಯತೆ

75 ಟಿಎಂಸಿ ನೀರು ಸದ್ಭಳಕೆಗೆ ನೀಲನಕ್ಷೆ

ಅಪೌಷ್ಠಿಕತೆ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಆದ್ಯತೆ

ಎಲ್ಲ ರಾಜ್ಯಗಳಲ್ಲೂ ಆನ್‌ಲೈನ್ ಯೋಜನೆ ಜಾರಿ

ನೀರಾವರಿ ಯೋಜನೆಗಳು
ಹುಬ್ಬಳ್ಳಿ-ಧಾರವಾಡ, ಹಾವೇರಿ- ಗದಗ ಒಳಗೊಂಡ ಮಧ್ಯ ಕರ್ನಾಟಕಕ್ಕೆ ಕುಡಿಯುವ ನೀರು

ಅಘನಾಶಿನಿ- ಬೇಡ್ತಿ ನದಿಗಳನ್ನು ವರದಾ ಅಣೆಕಟ್ಟಿಗೆ ಜೋಡಣೆ

ಕೃಷ್ಣಾ ಮೇಲ್ಡಂಡೆ 3ನೇ ಹಂತ ವಿಸ್ತರಣೆ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English