ಉಡುಪಿ : ದಕ್ಷಿಣ ಕನ್ನಡ , ಉಡುಪಿ ದೇವಭೂಮಿ ಎಂದು ಖ್ಯಾತಿಯಾಗಿದ್ದು, ಜನಸಂಘಕ್ಕಾಗಿ ಉಡುಪಿಯ ಕೊಡುಗೆ ಅಪಾರವಾಗಿದೆ. ಟಿಎಂಪಿ ಪೈ ಹಾಜೇ ಸಾಹೇಬ್ ಎ. ಬಿ, ಶೆಟ್ಟಿ ಅವರು ಈ ನೆಲದ ಕೊಡುಗೆಗಳಾಗಿದ್ದಾರೆ. ಇಲ್ಲಿನ ಮಗ ಗುರುರಾಜ್ ವೇಟ್ ಲಿಪ್ಟಿಂಗ್ ಲ್ಲಿ ಪದಕ ತಂದಿರುವುದು ಹೆಮ್ಮೆಯ ಸಂಗತಿ ಎಂದು ನರೇಂದ್ರ ಮೋದಿ ಹೇಳಿದರು ,
ಉಡುಪಿಯ ಎಂಜಿಎಂ ಕ್ರೀಡಾಂಗಣದಲ್ಲಿ ಮಂಗಳವಾರ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತುಳು ಭಾಷೆಯಲ್ಲಿ ಮಾತು ಪ್ರಾರಂಭಿಸಿ, ಮೊದಲಿಗೆ ನೆನೆದದ್ದು ಶ್ರೀಕೃಷ್ಣನನ್ನು, ಅದರ ನಂತರ ಕನಕದಾಸರನ್ನು. ಅದರ ನಂತರ ಪರಶುರಾಮನು ಸೃಷ್ಟಿಯ ಭೂಮಿ ಕರಾವಳಿ, ಅಷ್ಟಮಠದ ಯತಿ ಪರಂಪರೆಗೆ ಪ್ರಣಾಮಗಳು , ಮಧ್ವಾಚಾರ್ಯರಿಗೆ ನನ್ನ ಪ್ರಣಾಮಗಳು, ಅಷ್ಟಮಠದ ಗುರು ಪರಂಪರೆಗೆ ಭಕ್ತಿ ಪೂರ್ವಕ ನಮನ ಹೀಗೆ ಉಡುಪಿಯ ಧಾರ್ಮಿಕ ಐತಿಹ್ಯಕ್ಕೆ ಮೋದಿ ಶರಣು ಎಂದರು.
ಜನ್ ಧನ್ ಮೂಲಕ ಬಡವರನ್ನು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಕೈ ಜೋಡಿಸಲಾಗಿದೆ. ನಮ್ಮ ಸರ್ಕಾರ ಯುವ ಜನತೆಯ ಭವಿಷ್ಯ ರೂಪಿಸಲು ಪಣ ತೊಟ್ಟಿರುವುದಾಗಿ ಹೇಳಿದ ಮೋದಿ, ಕಾಂಗ್ರೆಸ್ ಬಡವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜಕೀಯ ಕಾರಣಕ್ಕಾಗಿ ಅಮಾಯಕರನ್ನು ಹತ್ಯೆ ಮಾಡಲಾಗಿದೆ ಎರಡು ಡಜನ್ ಗಳಿಗೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಜನರ ಹತ್ಯೆಯಾಗಿದೆ . ಹಾಗಾಗೀ ಕಾಂಗ್ರೆಸ್ ಸರ್ಕಾರ ಬದಲಾಯಿಸಬೇಕೋ ಬೇಡ್ವೋ ಎಂದು ಪ್ರಶ್ನಿಸಿದ ಪ್ರಧಾನಿ, ಕಾಂಗ್ರೆಸ್ ಮುಕ್ತ ಭಾರತಕ್ಕೆ ಜನ ನಿರ್ಧರಿಸಿದ್ದಾರೆ ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ದೇಶದ ವರಿಷ್ಠ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅಂತಹ ನಾಯಕರ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಗಿ ಮಾತನಾಡುವ ಮೂಲಕ ಅವಮಾನಿಸಿದ್ದಾರೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ದೇವೇಗೌಡರನ್ನು ಹಾಡಿ ಹೊಗಳಿದ್ದಾರೆ.
ಇಲ್ಲಿನ ಎಂಜಿಎಂ ಕ್ರೀಡಾಂಗಣದಲ್ಲಿ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಹುಲ್ ಗಾಂಧಿ ಜೀವನ ಈಗಷ್ಟೇ ಆರಂಭವಾಗಿದೆ. ಆದರೆ. ದೇವೇಗೌಡರು ಜೀವನವನ್ನು ಎಷ್ಟೊಂದು ಸವೆಸಿದ್ದಾರೆ,ಅವರು ದೆಹಲಿಯಲ್ಲಿನ ತಮ್ಮ ಮನೆಗೆ ಬಂದಾಗಲೆಲ್ಲಾ ಬಾಗಿಲವರೆಗೂ ಬಂದು ಸ್ವಾಗತ ಕೋರುತೇನೆ, ಮತ್ತೆ ಹೋಗುವಾಗಲು ಕಾರಿನ ಬಳಿ ಹೋಗಿ ಬೀಳ್ಕೂಡುತ್ತೇನೆ ಎಂದು ಅವರ ಬಗ್ಗೆ ಕೊಂಡಾಡಿದರು.
Click this button or press Ctrl+G to toggle between Kannada and English