[1]ಬೆಂಗಳೂರು: ಕರ್ನಾಟಕದ ಅಭಿವೃದ್ಧಿ ಬಗ್ಗೆ 15 ನಿಮಿಷ ಮಾತನಾಡಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ಇತ್ತೀಚೆಗಷ್ಟೇ ಸವಾಲು ಹಾಕಿದ್ದರು. ಈ ಬೆನ್ನಲ್ಲೇ ‘ಆನ್ಸರ್ ಮಾಡಿ ಮೋದಿ’ ಎಂಬ ಹ್ಯಾಸ್ಟ್ಯಾಗ್ ಮೂಲಕ ಟ್ವಿಟರ್ನಲ್ಲಿ ಪ್ರಧಾನಿಗೆ ಕಾಂಗ್ರೆಸ್ ಭರ್ಜರಿಯಾಗೇ ತಿರುಗೇಟು ನೀಡಿದೆ.
ಮೋದಿ ಅವರೇ ನೀವು ತುಂಬಾ ಮಾತಾಡ್ತಿರಿ. ಆದ್ರೆ ನಿಮ್ಮ ಮಾತಿಗೂ ಕ್ರಿಯೆಯೂ ಹೊಂದಾಣಿಕೆ ಆಗಲ್ಲ. ಕರ್ನಾಟಕದಲ್ಲಿ ಎಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೀರಿ ಎಂಬುದಕ್ಕೆ ಇಲ್ಲಿದೆ ಚಿಕ್ಕ ವಿಡಿಯೋ ತುಣಕು. ಇದು ‘ಕರ್ನಾಟಕ ಮೋಸ್ಟ್ ವಾಂಟೆಡ್’ ಎಪಿಸೋಡ್ನಂತೆ ಬಿತ್ತರವಾಗುತ್ತದೆ ಎಂದು ಮೋದಿಗೆ ಕಾಂಗ್ರೆಸ್ ಪ್ರತ್ಯುತ್ತರ ನೀಡಿದೆ.