- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಎಸ್‌ಎಸ್‌‌ಎಲ್‌ಸಿ ಫಲಿತಾಂಶ ಪ್ರಕಟ…ರಾಜ್ಯಕ್ಕೆ ಇಬ್ಬರು ವಿದ್ಯಾರ್ಥಿಗಳು ಟಾಪರ್ಸ್‌!

topers [1]ಬೆಂಗಳೂರು: ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಈ ಸಾಲಿನ ಎಸ್‌‌ಎಸ್‌ಎಲ್‌ಸಿಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಈ ಸಲ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್ಸ್‌ ಆಗಿ ಹೊರಹೊಮ್ಮಿದ್ದಾರೆ.

ಮೈಸೂರು ದಕ್ಷಿಣ ತಾಲೂಕಿನ ಸದ್ವಿದ್ಯಾ ಹೈಸ್ಕೂಲ್‌ನ ವಿದ್ಯಾರ್ಥಿ ಯಶಸ್‌ ಎಂ.ಎಸ್‌. ಮತ್ತು ಬೆಂಗಳೂರು ದಕ್ಷಿಣ-1 ತಾಲೂಕಿನ ಹೋಲಿ ಚೈಲ್ಡ್‌ ಇಂಗ್ಲಿಷ್‌ ಹೈಸ್ಕೂಲಿನ ಸುದರ್ಶನ್‌ ಕೆ.ಎಸ್‌ 625/625 ಅಂಕ ಪಡೆದು ರಾಜ್ಯಕ್ಕೆ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ.

8 ವಿದ್ಯಾರ್ಥಿಗಳು 624 ಅಂಕಗಳನ್ನು ಪಡೆದು ಎರಡನೇ ಸ್ಥಾನ ಪಡೆದಿದ್ದಾರೆ. 12 ವಿದ್ಯಾರ್ಥಿಗಳು 623 ಅಂಕಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ.

ಎಸ್‌‌ಎಸ್‌ಎಲ್‌ಸಿ ದ್ವಿತೀಯ ಸ್ಥಾನ 625ಕ್ಕೆ 624ಪಡೆದ ವಿದ್ಯಾರ್ಥಿಗಳ ಲಿಸ್ಟ್ ಇಂತಿದೆ.
ಮೊಹಮ್ಮದ್ ಕೈಫ್ ಮುಲ್ಲಾ, ಬೆಳಗಾವಿ ಸೇಂಟ್ ಕ್ಸೇವಿಯರ್ ಹೈಸ್ಕೂಲ್ 624 ಅಂಕ
ಅದಿತಿ ಎಂ. ರಾವ್, ಸದ್ವಿದ್ಯಾ ಹೈಸ್ಕೂಲ್ 624 ಅಂಕ
ಮೇಘಾ ಎಂ. ಭಟ್, ಮರಿಮಲ್ಲಪ್ಪ ಹೈಸ್ಕೂಲ್ ಮೈಸೂರು 624 ಅಂಕ
ಮೇಧಾ ಎನ್. ಭಟ್, ಟಿ.ಎ ಪೈ ಇಂಗ್ಲಿಷ್ ಮೀಡಿಯಂ ಸ್ಕೂಲ್ ಉಡುಪಿ 624 ಅಂಕ
ಶ್ರೀನಿವಾಸ್ ಎಂ.ಎ. ಥಾಮಸ್, ಮೆಮೋ ಇಂಗ್ಲಿಷ್ ಹೈಸ್ಕೂಲ್ ನೆಲಮಂಗಲ 624 ಅಂಕ
ಕೀರ್ತನಾ, ಸದ್ವಿದ್ಯಾ ಹೈ ಸ್ಕೂಲ್ ಮೈಸೂರು 624 ಅಂಕ
ಪ್ರಾಂಶುಲಾ ಪ್ರಶಾಂತ್, ಆಳ್ವಾಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮಂಗಳೂರು 624 ಅಂಕ
ಶ್ರೀಹರಿ ಅಡಿಗ, ಶ್ರೀ ಸರಸ್ವತಿ ವಿದ್ಯಾ ಮಂದಿರ ಸ್ಕೂಲ್ ಬೆಂಗಳೂರು 624 ಅಂಕ

ಎಂದಿನಂತೆ ಈ ಬಾರಿಯೂ ಹೆಣ್ಣುಮಕ್ಕಳೇ ಮೇಲುಗೈ ಪಡೆದಿದ್ದು, ಶೇ. 78.01ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಭಾಗದ ಶೇ. 74 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶದ ಶೇ . 69.38 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.