ಹಾಸ್ಯನಟ ಕೆ ಎಂ ರತ್ನಾಕರ್ ನಿಧನ

5:46 PM, Tuesday, September 21st, 2010
Share
1 Star2 Stars3 Stars4 Stars5 Stars
(No Ratings Yet)
Loading...

ಹಿರಿಯ ಕಲಾವಿದ ಕೆ ಎಂ ರತ್ನಾಕರ್ ಮೈಸೂರು : ಹಾಸ್ಯನಟನಾಗಿ 350ಕ್ಕೂ ಹೆಚ್ಚು  ಚಿತ್ರಗಳಲ್ಲಿ ಅಭಿನಯಿಸಿದ ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಕೆ ಎಂ ರತ್ನಾಕರ್  ಇಂದು ಮಧ್ಯಾಹ್ನ ಮೈಸೂರಿನ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.  ಅವರು ಮೂತ್ರ ಜನಕಾಂಗದ ವೈಫಲ್ಯದ ಅನಾರೋಗ್ಯದಿಂದ ಅಸ್ವಸ್ಥರಾಗಿದ್ದರು. ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ  ದಾಖಲಾಗಿದ್ದರು. ಇನ್ನು ಅಭಿಮಾನಿಗಳಿಗೆ ಅವರು ಬರಿ ನೆನಪಷ್ಟೆ.
ಹಾಸ್ಯನಟನಾಗಿ ಅವರದೇ ಆದ ಪ್ರೇಕ್ಷಕ ವರ್ಗವನ್ನು ನಿರ್ಮಿಸಿದ್ದಾರೆ.  ಗುರು ಶಿಷ್ಯರು, ಅಣ್ಣಯ್ಯ, ಗಡಿಬಿಡಿ ಗಂಡ, ಕೆಂಪಯ್ಯ ಐಪಿಎಸ್, ಭಕ್ತ ಕನಕದಾಸ, ಬಯಲು ದೀಪ ಸಾಹಸ ಸಿಂಹ ವಿಷ್ಣುವರ್ಧನ್  ಅವರ ಕೊನೆಯ ಚಿತ್ರ ‘ಆಪ್ತ ರಕ್ಷಕ’ ಚಿತ್ರದಲ್ಲೂ ಅಭಿನಯಿಸಿದ್ದರು.
ಅವರು ಅನಾರೋಗ್ಯದಿಂದ ಅಸ್ವಸ್ಥರಾಗಿದ್ದರೂ  ಅವರ ಚಿಕಿತ್ಸೆಗೆ ಕನ್ನಡ ಚಿತ್ರೋದ್ಯಮ ಸ್ಪಂದಿಸಲಿಲ್ಲ . ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದ ರತ್ನಾಕರ್  ಮನೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್  ಭೇಟಿ ನೀಡಿ ರು.25,000 ಸಹಾಯ ಮಾಡಿದ್ದರು. ಕೆಲವೇ ಕಲಾವಿದರು ಮಾತ್ರ ಅವರ ಆರೋಗ್ಯವನ್ನು ವಿಚಾರಿಸಿ ಸ್ವಲ್ಪ ಮಟ್ಟಿನ ಸಹಾಯ ಮಾಡಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English