- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಐದು ವರ್ಷದಿಂದಲೇ ನಡೆದಿತ್ತು ರಾಜೇಶ್ ನೈಕ್‌ ಚುನಾವಣಾ ತಯಾರಿ!

rajesh-naik [1]ಬಂಟ್ವಾಳ: ರಾಜೇಶ್ ನೈಕ್‌ಅವರಿಗೆ ಈ ಬಾರಿಗೆಲ್ಲುವ ಸಾಧ್ಯತೆ ನೂರಕ್ಕೆತೊಂಭತ್ತೊಂಭತ್ತರಷ್ಟುಇದೆಎನ್ನುವುದಕ್ಕೆಕಾರಣಅವರು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಗಳಿಸಿಕೊಂಡಿರುವ ಜನಬೆಂಬಲ. ಹಾಗಂತ ರಾಜೇಶ್ ನೈಕ್‌ಅವರಿಗೆ ಈ ಮಟ್ಟದಯಶಸ್ಸು ಸುಮ್ಮಸುಮ್ಮನೆ ಒಲಿದಿಲ್ಲ. ಅವರು ಕಳೆದ ಐದು ವರ‍್ಷಗಳಲ್ಲಿ ಎಡೆಬಿಡದೆ ಇದಕ್ಕಾಗಿ ಶ್ರಮಿಸಿದ್ದಾರೆ. ಕಳೆದ ಬಾರಿ 2003 ರಲ್ಲಿಚುನಾವಣೆ ನಡೆದಾಗರಾಜೇಶ್ ನೈಕ್ ಈ ಪರಿ ಜನ ಬೆಂಬಲವನ್ನು ಗಳಿಸಿರಲಿಲ್ಲ. ಯಾಕೆಂದರೆ ಅದು ಅವರ ಪ್ರಥಮ ಚುನಾವಣೆಯಾಗಿತ್ತು.

ಅದರೊಂದಿಗೆ ಅವರು ಎದುರಿಸಬೇಕಾಗಿರುವುದು ಕರ‍್ನಾಟಕದ ಘಟಾನುಘಟಿ ರಾಜಕಾರಣಿ ಎಂದೇ ಹೆಸರು ಮಾಡಿರುವ ಬಿ ರಮಾನಾಥ ರೈಅವರನ್ನು. ಅಷ್ಟೇ ಅಲ್ಲದೆ ಕಳೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ‍್ಟಿಗೆ ಕರ‍್ನಾಟಕದಲ್ಲಿ ಹೇಳಿಕೊಳ್ಳುವಂತಹ ಹೆಸರು ಉಳಿದಿರಲಿಲ್ಲ. ಆದರೆ ಈ ಬಾರಿ ಹಾಗೆ ಅಲ್ಲ.

ಅಮಿತ್ ಶಾ ಅವರು ಆಗಾಗ ಬಂದು ಹೋಗುತ್ತಿರುವುದರಿಂದ ಸಹಜವಾಗಿ ಬಿಜೆಪಿಯ ನಾಯಕರಲ್ಲಿ ನಮ್ಮನ್ನುಯಾರೋ ಕೇಳುತ್ತಿದ್ದಾರೆ ಎನ್ನುವ ಸಣ್ಣಮಟ್ಟಿನ ಹೆದರಿಕೆಇದೆ. ಆದ್ದರಿಂದಎಲ್ಲರೂ ಸರಿಯಾಗಿ ಕೆಲಸ ಮಾಡಿದರೆ ಬಿಜೆಪಿ ಬಂಟ್ವಾಳದಲ್ಲಿ ಈ ಬಾರಿಗೆಲ್ಲುವುದುಕಷ್ಟಕರವಲ್ಲ. ಹಾಗಾದರೆ ರಾಜೇಶ್ ನೈಕ್ ಗೆಲುವಿಗೆ ಇರುವ ಸೂತ್ರಗಳೇನು? ಮೊದಲನೇಯದಾಗಿ ಕಳೆದ ಚುನಾವಣೆಯಲ್ಲಿ ಸೋತ ನಂತರ ಮರುದಿನದಿಂದಲೇ ಮನೆಮನೆ ಭೇಟಿಗೆಒತ್ತುಕೊಟ್ಟಿರುವುದು.

ಯಾವರಾಜಕಾರಣಿಕೂಡ ಇಷ್ಟು ಬೇಗ ತನ್ನ ಮುಂದಿನ ಗುರಿಕಂಡಿರಲಿಕ್ಕಿಲ್ಲ. ಪ್ರತಿ ಮನೆಗೂ ಭೇಟಿಕೊಟ್ಟರಾಜೇಶ್ ನೈಕ್‌ಜನರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದಾರೆ. ಇದುಅವರಿಗೆಜನರ ನಾಡಿಮಿಡಿತ ಸರಿಯಾಗಿ ತಿಳಿದುಕೊಳ್ಳಲು ಸಹಾಯವಾಯಿತು. ಅಷ್ಟೇ ಅಲ್ಲರಾಜೇಶ್ ನೈಕ್‌ಯಾರೊಂದಿಗೂ ಹೆಸರು ಕೆಡಿಸಿಕೊಂಡವರಲ್ಲ. ಅವರಿಗೆ ಶತ್ರುಗಳೇ ಇಲ್ಲಎನ್ನಬಹುದು. ಅವರುತಾವಾಯಿತು, ತಮ್ಮಕ್ಷೇತ್ರತಿರುಗಾಟವಾಯಿತು ಎಂದುಕೊಳ್ಳುವವರು.

ಆದ್ದರಿಂದ ಮುಸ್ಲಿಮರು ಕೂಡ ಹಿಂದೂವಾದಿ ರಾಜೇಶ್ ನೈಕ್‌ಅವರೊಂದಿಗೆದ್ವೇಷಕಟ್ಟಿಕೊಂಡವರಲ್ಲ. ರಾಜೇಶ್ ನೈಕ್‌ಅವರಿಗೆದೊಡ್ಡ ಪ್ಲಸ್‌ಆಗಿರುವುದುಅವರು ಸ್ಪರ್ಧಿಸುತ್ತಿರುವಕ್ಷೇತ್ರರಾಷ್ಟ್ರೀಯ ಸ್ವಯಂ ಸೇವಕ ಸಂಘದಅಕ್ಷರಶ: ಗರಡಿ ಮನೆ. ಕಲ್ಲಡ್ಕ ಪ್ರಭಾಕರ ಭಟ್ಟರ ನೇರ ಮುತುವರ್ಜಿಯಲ್ಲಿ ಬಂಟ್ವಾಳ ವಿಧಾನಸಭೆಯ ಅಷ್ಟೂ ವ್ಯಾಪ್ತಿಯ ಕೆಲಸ ಕಾಮಗಾರಿಗಳು ನಡೆಯುತ್ತವೆ. ಅದರಿಂದಾಗಿಆರ್‌ಎಸ್‌ಎಸ್‌ಅಲ್ಲಿ ಸ್ಟ್ರಾಂಗ್ ಆಗಿ ಬೆಳೆಯುತ್ತಿದೆ ಮತ್ತು ಬೆಳೆದಿದೆ. ರಾಜೇಶ್ ನೈಕ್‌ಅವರ ಶಕ್ತಿ ಏನು? ಎಂದುಯಾರಾದರೂ ಕೇಳಿದರೆ ಅವರುಯಾವ ಹೊತ್ತಿಗೆಯಾರುಕರೆದರೂಅಗತ್ಯಇದ್ರೆ ಧಾವಿಸಿ ಹೋಗುತ್ತದೆ. ಆ ಉಮೇದುರಮಾನಾಥರೈಅವರಿಗೆ ಉಳಿದಿಲ್ಲ. ಇನ್ನುರಾಜೇಶ್ ನೈಕ್ ಸಹಾಯ ಮಾಡದ ಸಂಘ ಸಂಸ್ಥೆಗಳಿಲ್ಲ. ಇವರ ಬಳಿ ಡೋನೇಶನ್ ಕೇಳದ ಯುವಘಟಕಗಳಿಲ್ಲ.

ಅದೇರೀತಿಯಲ್ಲಿರಾಜೇಶ್ ನೈಕ್‌ಅವರಿಗೆ ಪರಿಸರ ಮತ್ತು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ. ಅವರುತಮ್ಮತೋಟಕ್ಕೆ ಆಗಾಗ ವಿವಿಧ ಶಾಲೆಗಳ ಮಕ್ಕಳನ್ನು ಕರೆಸಿ ಪಾಠ ಮಾಡುತ್ತಾರೆ. ಹಾಗಾದರೆಇದೇ ವಿಷಯಗಳು ರಾಜೇಶ್ ನೈಕ್‌ಅವರಿಗೆ ಶ್ರೀರಕ್ಷೆನಾ? ಈ ವಿಷಯಗಳು ಅವರಇಮೇಜ್ ಬಂಟ್ವಾಳದಲ್ಲಿ ಹೆಚ್ಚಿಸಿರಬಹುದು. ಹಾಗಂತರಾಜೇಶ್ ನೈಕ್‌ಅವರಿಗೆಇನ್ನೊಂದು ವರ್ಚಸ್ಸುಕೂಡಇದೆ. ಅವರು ಸಂಘ ಪರಿವಾರದಕಾರ‍್ಯಕರ್ತರಆಪತ್ಭಾಂದವ. ಶರತ್ ಮಡಿವಾಲರಇಡೀಕುಟುಂಬವನ್ನು ಮಗನ ಸಾವಿನ ನಂತರಕಣ್ರೆಪ್ಪೆಯಲ್ಲಿ ನೋಡಿಕೊಂಡು ಬಂದಿದ್ದಾರೆ. ಆದ್ದರಿಂದಅವರಿಗೆ ಸಂಘ ಪರಿವಾರದ ಸಂಪೂರ್ಣ ಬೆಂಬಲವಿದೆ. ವೃತ್ತಿಯಲ್ಲಿಕೃಷಿಕರಾಗಿರುವರಾಜೇಶ್ ನೈಕ್‌ಅಪ್ಪಟರಾಜಕಾರಣಿಯಲ್ಲ. ಹಾಗಂತರಾಜಕೀಯದಲ್ಲಿಜವಾಬ್ದಾರಿಕೊಟ್ಟರೆಅದನ್ನು ಸಮರ್ಥವಾಗಿ ನಿಭಾಯಿಸುವತಾಕತ್ತುಅವರಿಗೆಇದೆ.

ರಾಜೇಶ್ ನೈಕ್‌ಅವರೊಂದಿಗೆ ಈ ಬಾರಿ ಹಿಂದೂಯುವಕರು ಹೆಚ್ಚಿನ ಸಂಖ್ಯೆಯಲ್ಲಿಇದ್ದಾರೆ. ಅದಕ್ಕೆಕಾರಣಕಲ್ಲಡ್ಕ ಪ್ರಭಾಕರ ಭಟ್ಟರನ್ನು ಬಂಧಿಸಿ ಜೈಲಿಗೆಅಟ್ಟಿಎಂದುರಮಾನಾಥರೈಅವರು ಬಂಟ್ವಾಳ ಸಕ್ಯೂರ್ಟ್ ಹೌಸಿನಲ್ಲಿ ಕುಳಿತು ಸೂಚನೆ ನೀಡಿದ್ದು. ಒಟ್ಟಿನಲ್ಲಿ ಸಂಘ ಪರಿವಾರದ ಭದ್ರಕೋಟೆಯಲ್ಲಿರಮಾನಾಥರೈ ವಿರಾಜಮಾನರಾಗಿ ಕಾಲವೇ ಸರಿದು ಹೋಗಿದೆ. ಈ ಬಾರಿ ಬಂಟ್ವಾಳವನ್ನು ಯಾವುದೇಕಾರಣಕ್ಕೂ ಬಿಡುವ ಪ್ರಶ್ನೆನೆಇಲ್ಲಎಂದು ಸಂಘ ಪರಿವಾರ ಸಹಿತ ಬಿಜೆಪಿಯಉನ್ನತ ನಾಯಕರು ನಿರ್ಧರಿಸಿಯಾಗಿದೆ.

ಅದಕ್ಕಾಗಿರಾಷ್ಟ್ರಾಧ್ಯಕ್ಷಅಮಿತ್ ಶಾ ಅವರನ್ನು ಆಗಾಗ ಈ ಭಾಗಕ್ಕೆ ಕರೆಸಿಕೊಳ್ಳುತ್ತಿರುವ ನಾಯಕರುರಾಜೇಶ್ ನೈಕ್ ಬೆಂಬಲಕ್ಕೆ ನಿಂತಿದ್ದಾರೆ. ರಾಜೇಶ್ ನೈಕ್‌ಕೂಡರಮಾನಾಥರೈಅವರುಕಲ್ಲಡ್ಕದಎರಡು ಶಾಲೆಗಳಿಗೆ ನಿಲ್ಲಿಸಿದ ಬಿಸಿಯೂಟದ ಅನುದಾನದಿಂದ ಹಿಡಿದು ಬಂಟ್ವಾಳದಲ್ಲಿ ಹಿಂದೂಕಾರ‍್ಯಕರ್ತರಿಗೆ ಉಳಿಗಾಲವಿಲ್ಲ ಎನ್ನುವುದನ್ನು ಸಾರಿ ಹೇಳುತ್ತಿದ್ದಾರೆ. ರಾಜೇಶ್ ನೈಕ್‌ಕ್ಷೇತ್ರದಲ್ಲಿತಾವುಗೆದ್ದರೆತರುವ ಯೋಜನೆಗಳ ಬಗ್ಗೆನೂ ಹೇಳುತ್ತಾ ಬರುತ್ತಿದ್ದಾರೆ. ಅವರೊಂದಿಗೆ ಈ ಬಾರಿ ಹರಿಕೃಷ್ಣ ಬಂಟ್ವಾಳ್ ಜತೆಗೂಡಿದ್ದಾರೆ. ರಾಜೇಶ್ ನೈಕ್‌ಅವರ ಬಂಟ ಮತಗಳು, ಹರಿಕೃಷ್ಣರ ಬಿಲ್ಲವ ಮತಗಳು ಸೇರಿದರೆರಮಾನಾಥ್‌ರೈಅವರಿಗೆಗೆಲ್ಲುವು ಕಷ್ಟಕಷ್ಟ.