ಬೆಂಗಳೂರು: ಕರ್ನಾಟಕದ ಜನತೆ ನಮಗೆ ಹೆಚ್ಚಿನ ಸ್ಥಾನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿಯೇ ರಾಜ್ಯಪಾಲರು ಸಂವಿಧಾನಬದ್ಧ ಸ್ಥಾನ ನೀಡಿದ್ದಾರೆ ಎಂದು ಆರ್.ಅಶೋಕ್ ತಿಳಿಸಿದ್ದಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ಅಧಿಕಾರದ ದುರಾಸೆ ಇದೆ. ಈ ದುರಾಸೆಯಿಂದ ಆಡಳಿತ ಮಾಡಲು ಹೊರಟಿದ್ದಾರೆ. ಡಿಪಾಸಿಟ್ ಕಳೆದುಕೊಂಡ ಸಚಿವರು ಕಾಂಗ್ರೆಸ್ನಲ್ಲಿದ್ದಾರೆ ಎಂದು ಲೇವಡಿ ಮಾಡಿದರು.
38 ಸ್ಥಾನ ಗೆದ್ದವರಿಗೇ ಆಸೆ ಇದ್ದಾಗ ಇನ್ನು 104 ಸ್ಥಾನ ಗೆದ್ದ ನಮಗೆ ಆಸೆ ಇರಲ್ವಾ ಎಂದು ಪ್ರಶ್ನಿಸಿದರು. ಈ ಮೊದಲು ಅವರು ನಾಯಿ, ನರಿಗಳ ತರಹ ಕಿತ್ತಾಡ್ತಿದ್ರು. ಅಲ್ಲದೆ ಜೆಡಿಎಸ್, ಬಿಜೆಪಿಯ ಬಿ ಟೀಂ ಅಂತ್ತಿದ್ರು. ಈಗ ಅಕ್ಕ ಪಕ್ಕ ಕುಳ್ತಿದ್ದಾರೆ ಎಂದು ಹರಿಹಾಯ್ದರು.
ಕಾಂಗ್ರೆಸ್ – ಜೆಡಿಎಸ್ಗೆ ನಾಚಿಕೆ ಆಗ್ಬೇಕು. ಯಾವ ಮುಖ ಇಟ್ಕೊಂಡು ಪ್ರತಿಭಟನೆ ಮಾಡ್ತಾ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Click this button or press Ctrl+G to toggle between Kannada and English