ವಿಶ್ವಾಸಮತಯಾಚಿಸದೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟ ಬಿಎಸ್ ಯಡಿಯೂರಪ್ಪ

7:50 PM, Saturday, May 19th, 2018
Share
1 Star2 Stars3 Stars4 Stars5 Stars
(No Ratings Yet)
Loading...

politicsಬೆಂಗಳೂರು : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ವಿಶ್ವಾಸಮತಯಾಚಿಸದೇ ಸದನದಲ್ಲಿ ವಿದಾಯ ಭಾಷಣ ಮಾಡಿ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ರಾಜಿನಾಮೆ ನೀಡಿ ಹೊರ ನಡೆದಿದ್ದಾರೆ. ಯಡಿಯೂರಪ್ಪನವರಿಗೆ ಮೂರೇ ದಿನದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಂಥ ಮತ್ತು ಬಿಜೆಪಿಗೆ ಬಹುಮತ ಬರದಿರುವಂಥ ಪರಿಸ್ಥಿತಿ ಬರಲು ಕಾರಣಗಳೇನು? ಇದಕ್ಕೆ ಯಡಿಯೂರಪ್ಪನವರೇ ಸ್ವತಃ ಕಾರಣರಾದರೆ.

ಸದನದಲ್ಲಿ ಸುದೀರ್ಘ ಭಾಷಣ ಮಾಡಿದ ಯಡಿಯೂರಪ್ಪ, ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ನಮಗೆ ನೀರಾವರಿ ಯೋಜನೆ ಪೂರ್ಣ ಮಾಡಲು ಆಗಲಿಲ್ಲ. ಕುಡಿಯುವ ನೀರು ಕೊಡಲು ಆಗಲಿಲ್ಲ. ಸಂಕಷ್ಟ ಪರಿಸ್ಥಿತಿ ನಾಡಿನ ಉದ್ದಗಲಕ್ಕೆ ಇದೆ. ನಾನು ಜೀವನದ ಕಡೆಯ ಕ್ಷಣದ ವರೆಗೂ ರೈತರ ಪರವಾಗಿ ಕೆಲಸ ಮಾಡುತ್ತೇನೆ. ರೈತರಿಗೆ ನೀರು ಕೊಡಲು ನಮಗೆ ಸಾಧ್ಯವಾಗಿಲ್ಲ. ಸಂಕಷ್ಟದಲ್ಲಿ ಒದ್ದಾಡುತ್ತಿರುವ ಜನರಿಗೆ ನೆಮ್ಮದಿ ನೀಡಲು ಆಗಿಲ್ಲ ಎಂದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ₹1ಲಕ್ಷದವರೆಗಿನ ರೈತರ ಸಾಲ, ನೇಕಾರರ ಸಮುದಾಯದ ಸಾಲ ಮನ್ನಾ ಮಾಡಬೇಕು ಅಂತ ಅಂದುಕೊಂಡಿದ್ದೆ. ರೈತರಿಗೆ ಕುಡಿಯುವ ನೀರು, ಬೆಳೆಗೆ ನೀರು, ಕೆರೆಕಟ್ಟೆ ತುಂಬಿಸಲು ಆಗಿಲ್ಲ. ಈ ನಾಡಿನ ಅನ್ನದಾತ ರೈತ ಸಮಸ್ಯೆಯಲ್ಲಿದ್ದಾನೆ. ರೈತರಿಗೆ ಬೆಂಬಲ ಬೆಲೆ ಇಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್ ಸರ್ಕಾರದ ವೈಫಲ್ಯದ ವಿರುದ್ಧ ನಮಗೆ 104 ವಿಧಾನಸಭಾ ಕ್ಷೇತ್ರದಲ್ಲಿ ಜನರು ಆಶೀರ್ವಾದ ಮಾಡಿದರು. ಜನಾದೇಶ ಕಾಂಗ್ರೆಸ್ – ಜೆಡಿಎಸ್ಗಿಲ್ಲ, ಬಿಜೆಪಿಗಿದೆ. ರಾಜ್ಯದ ಜನರು ಕಾಂಗ್ರೆಸ್, ಜೆಡಿಎಸ್ನ್ನು ತಿರಸ್ಕರಿಸಿರುವುದು ಇಡೀ ರಾಜ್ಯದ ಜನರಿಗೆ ತಿಳಿದಿದೆ ಎಂದು ವಾಗ್ದಾಳಿ ನಡೆಸಿದರು.

ಅಪ್ಪನ ಆಣೆ ಮಾಡಿಕೊಂಡ ಎಚ್ ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಕೈ ಜೋಡಿಸಿರುವುದಕ್ಕೆ ನನ್ನ ವಿರೋಧ ಇದೆ. ಕೇವಲ 40 ಸೀಟುಗಳನ್ನು ಹೊಂದಿದ್ದ ನಮ್ಮನ್ನು ಜನ ಏಕೈಕ ದೊಡ್ಡ ಪಕ್ಷವಾಗಿ ಆರಿಸಿದ್ದಾರೆ. ಕಾಂಗ್ರೆಸ್ ಪಕ್ಷ ಕಳೆದ ಚುನಾವಣೆಗಿಂತ ಅತ್ಯಂತ ಕಡಿಮೆ ಕ್ಷೇತ್ರಗಳಲ್ಲಿ ಗೆದ್ದಿದೆ. ಪ್ರತಿ ತಾಲೂಕು, ವಿಧಾನಸಭಾ ಕ್ಷೇತ್ರದಲ್ಲೂ ಪರಿವರ್ತನಾ ಯಾತ್ರೆ ಮಾಡಿದ್ದೆವು. ಎರಡು ವರ್ಷ ನಿರಂತರವಾಗಿ ಜನರ ಸಮಸ್ಯೆ ಅರಿತೆ. ಪರಿವರ್ತನಾ ಯಾತ್ರೆಯಲ್ಲಿ ಸಿಕ್ಕ ಜನಬೆಂಬಲ್ಲಕ್ಕೆ ನಾನು ಋಣಿ ಎಂದರು.

ವಿದಾಯ ಭಾಷಣದ ಬಳಿಕ ನೇರವಾಗಿ ರಾಜಭವನಕ್ಕೆ ತೆರಳಿದೆ ಬಿಎಸ್ ಯಡಿಯೂರಪ್ಪ, ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English