- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ರಾಮನಗರ ಉಪ ಚುನಾವಣೆ, ಬಿಜೆಪಿ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್..!

yogishwar [1]ರಾಮನಗರ: ರಾಮನಗರ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರ ಎದುರು ಸೋತಿದ್ದ ಸಿಪಿ ಯೋಗೇಶ್ವರ್ ಅವರನ್ನೇ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಿದ್ದು ಸಿಪಿ ಯೋಗೀಶ್ವರನ್ನು ಕಳೆದುಕೊಳ್ಳುವುದು ಬೇಡ ಎಂಬ ಉದ್ದೇಶದಿಂದ ಯೋಗೇಶ್ವರ್‌ಗೆ ಮತ್ತೊಂದು ಅವಕಾಶವನ್ನು ಬಿಜೆಪಿ ನೀಡಿದೆ. ಯೋಗೇಶ್ವರ್ ಅವರು ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಎದುರು ಸೋಲನ್ನನುಭವಿಸಿದ್ದರು.

ರಾಮನಗರದಲ್ಲೂ ಚುನಾವಣೆಗೆ ಸ್ಪರ್ಧಿಸಿದ್ದ ಕುಮಾರಸ್ವಾಮಿ ಅವರು ಅಲ್ಲಿ ಗೆದ್ದ ನಂತರ ಚನ್ನಪಟ್ಟಣದ ಸ್ಥಾನ ಉಳಿಸಿಕೊಂಡು ರಾಮನಗರ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು ಹಾಗಾಗಿ ಅಲ್ಲಿ ಉಪ ಚುನಾವಣೆ ನಡೆಯಲಿದೆ.ರಾಮನಗರದಲ್ಲಿ ಜೆಡಿಎಸ್ ಅತ್ಯಂತ ಪ್ರಾಬಲ್ಯ ಹೊಂದಿದ್ದು, ಬಿಜೆಪಿಯ ಸಿಪಿ ಯೋಗೇಶ್ವರ್‌ಗೆ ಇಲ್ಲೂ ಕೂಡ ಗೆಲುವು ಕಷ್ಟ ಎನ್ನಲಾಗುತ್ತಿದೆ. ಆದರೆ ಚನ್ನಪಟ್ಟಣದಲ್ಲಿ ಸೋತಿರುವ ಕಾರಣ ಕರುಣೆಯ ಮತಗಳು ಬೀಳಬಹುದು ಎಂಬ ಲೆಕ್ಕಾಚಾರವನನ್ನು ಬಿಜೆಪಿ ಹಾಕಿದಂತಿದೆ.

ರಾಮನಗರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವುದು ಬಹುತೇಕ ಖಚಿತಗೊಂಡಿದೆ. ಕಳೆದ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಇದೇ ಯೋಗೇಶ್ವರ್ ಅವರು ಅನಿತಾ ಕುಮಾರಸ್ವಾಮಿ ಅವರನ್ನು ಸೋಲಿಸಿ ಶಾಸಕರಾಗಿದ್ದರು. ಈಗ ಮತ್ತೆ ಇವರಿಬ್ಬರು ಎದುರು-ಬದುರಾಗಲಿದ್ದಾರೆ.

ಹಳೆ ಮೈಸೂರು ಭಾಗದ ಬಿಜೆಪಿಯ ಏಕೈಕ ಒಕ್ಕಲಿಗ ನಾಯಕ ಸಿಪಿ ಯೋಗೇಶ್ವರ್ ಅವರಾಗಿದ್ದು, ಅವರನ್ನು ಕಳೆದುಕೊಳ್ಳಲು ಬಿಜೆಪಿ ತಯಾರಿಲ್ಲ, ಹಾಗಾಗಿ ಒಂದು ವೇಳೆ ರಾಮನಗರದಲ್ಲಿಯೂ ಸೋತರೆ ಅವರನ್ನು ಕೆ.ಎಸ್.ಈಶ್ವರಪ್ಪ ಹಾಗೂ ವಿ.ಸೋಮಣ್ಣ ಅವರಿಂದ ತೆರವಾಗಿರುವ ವಿಧಾನಪರಿಷತ್‌ ಸ್ಥಾನಕ್ಕೆ ಅವಕಾಶ ನೀಡುವ ಸಾಧ್ಯತೆಯೂ ಇದೆ.