ಮ್ಯಾಗ್ನೆಟ್‌‌‌‌‌‌ ನುಂಗಿದ ಬಾಲಕಿ… ಕೆಎಂಸಿ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಚಿಕಿತ್ಸೆ

9:29 AM, Tuesday, May 29th, 2018
Share
1 Star2 Stars3 Stars4 Stars5 Stars
(No Ratings Yet)
Loading...

magnetಮಂಗಳೂರು: ಒಂಭತ್ತು ವರ್ಷ ವಯಸ್ಸಿನ ಬಾಲಕಿಯ ಶ್ವಾಸನಾಳದಲ್ಲಿ ಸಿಲುಕಿಕೊಂಡಿದ್ದ ಮ್ಯಾಗ್ನೆಟ್(ಆಯಸ್ಕಾಂತ)ವೊಂದನ್ನು ಹೊರತೆಗೆಯುವ ಮೂಲಕ ಇಲ್ಲಿನ ಕೆಎಂಸಿ ಆಸ್ಪತ್ರೆ ಬಾಲಕಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದೆ.

ಬಾಲಕಿ ಮನೆಯಲ್ಲಿ ಆಟವಾಡುವಾಗ ಸಣ್ಣ ಮ್ಯಾಗ್ನೆಟ್‌ವೊಂದನ್ನು ನುಂಗಿದ್ದ ಕಾರಣ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಳು. ಬಲ ಶ್ವಾಸಕೋಶದ ನಾಳದಲ್ಲಿ ಮ್ಯಾಗ್ನೆಟ್ ಇರುವುದನ್ನು ಎಕ್ಸ್-ರೇ ತೋರಿಸಿತ್ತು. ಕೆಎಂಸಿ ಆಸ್ಪತ್ರೆಯ ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಜಯತೀರ್ಥ ಜೋಷಿ ಅವರು ತಕ್ಷಣ ಮಗುವನ್ನು ಶಸ್ತ್ರಚಿಕಿತ್ಸಾ ಕೊಠಡಿಗೆ ವರ್ಗಾಯಿಸಿ ಬ್ರಾಂಕೊಸ್ಕೋಪ್‌ನಿಂದ ಮ್ಯಾಗ್ನೆಟ್ ಹೊರತೆಗೆಯುವ ಚಿಕಿತ್ಸಾ ಪ್ರಕ್ರಿಯೆ ಕೈಗೆತ್ತಿಕೊಂಡಿದ್ದರು. ಅರಿವಳಿಕೆ ತಜ್ಞ ಡಾ. ಸುನಿಲ್ ಸಹಕಾರ ನೀಡಿದ್ದರು.

ಪರಿಸ್ಥಿತಿ ಗಂಭೀರವಾಗಿದ್ದು ಮ್ಯಾಗ್ನೆಟ್‌‌ಅನ್ನು ಎಂಡೋಸ್ಕೋಪಿಕ್ ರೀತಿಯಲ್ಲಿ ಹೊರತೆಗೆಯುವ ಅಗತ್ಯ ಮತ್ತು ವೈಫಲ್ಯದ ಸಾಧ್ಯತೆಗಳ ಬಗ್ಗೆ ಮಗುವಿನ ಪೋಷಕರಿಗೆ ವಿವರವಾಗಿ ತಿಳಿಸಲಾಗಿತ್ತು. ಬಳಿಕ ಯಶಸ್ವಿಯಾಗಿ ಮ್ಯಾಗ್ನೆಟ್‌ನ್ನು ಹೊರತೆಗೆಯಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಆನಂದ ವೇಣುಗೋಪಾಲ್ ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English