- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ರೆಬೆಲ್ ಸ್ಟಾರ್ ಅಂಬರೀಶ್@ 66…ಅಭಿಮಾನಿಗಳಿಂದ ಅಂಬಿ ಅದ್ಧೂರಿ ಹುಟ್ಟುಹಬ್ಬ ಆಚರಣೆ

ambareesh [1]ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಇಂದು 66ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಿನ್ನೆ ತಾನೇ ಪುತ್ರ ಅಭಿಷೇಕ್‌ ಮೊದಲ ಚಿತ್ರ ‘ಅಮರ್‌‌‌‌‌’ ಮುಹೂರ್ತ ನೆರವೇರಿದ್ದರಿಂದ ಡಬಲ್ ಖುಷಿಯಲ್ಲಿದ್ದಾರೆ ಅಂಬಿ.

ನಿನ್ನೆ ರಾತ್ರಿಯಿಂದಲೇ ಅಭಿಮಾನಿಗಳು ಮೆಚ್ಚಿನ ನಟನಿಗೆ ಶುಭಾಶಯ ಕೋರಲು ಅಂಬರೀಶ್ ಅವರ ಜೆಪಿ ನಗರ ನಿವಾಸದ ಮುಂದೆ ಕೇಕ್‌‌‌‌, ಹೂವಿನ ಹಾರ, ಸೇಬಿನ ಹಾರದೊಂದಿಗೆ ಜಮಾಯಿಸಿದ್ದರು.

ಯಾರಿಗೂ ನಿರಾಸೆ ಮಾಡದೆ ಮಂಡ್ಯದ ಗಂಡು ಅಭಿಮಾನಿಗಳೊಂದಿಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಮಹಿಳಾ ಅಭಿಮಾನಿಗಳು ಕೂಡಾ ನಿನ್ನೆ ಅಂಬಿಗೆ ಶುಭ ಕೋರಲು ಆಗಮಿಸಿದ್ದರು. ಅಭಿಮಾನಿಗಳು ನೂರು ಕೆ.ಜಿ ತೂಕದ ಸೇಬಿನ ಹಾರವನ್ನು ರೆಬಲ್‌ಸ್ಟಾರ್‌‌ ಹಾಕಿ ಹಾಕಿ ಸಂಭ್ರಮಿಸಿದರು.

ಕೇಕ್ ಕತ್ತರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅಂಬರೀಶ್‌‌, ‘ಅಭಿಮಾನಗಳ ಹಾರೈಕೆ, ಪ್ರೀತಿಯಿಂದಲೇ ನಾವು ಇಷ್ಟು ಎತ್ತರಕ್ಕೆ ಬೆಳೆದಿದ್ದೇವೆ. 49 ವರ್ಷಗಳ ಕಾಲ ಚಿತ್ರರಂಗದಲ್ಲಿ ನನ್ನನ್ನು ಬೆಳೆಸಿದ್ದಾರೆ. ಇಷ್ಟು ವರ್ಷ ಅವರಿಗೆ ಮನರಂಜನೆ ನೀಡಿದ್ದೇನೆ. ಇದೀಗ ನನ್ನ ಮಗನನ್ನೂ ಅವರಿಗೆ ಒಪ್ಪಿಸಿದ್ದೇನೆ’ ಎಂದು ಹೇಳಿದರು.