- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಅಬ್ಬರ ನಿಲ್ಲಿಸಿದ ವರುಣ…ಮಂಗಳೂರಿಗರು ಸ್ವಲ್ಪ ನಿರಾಳ

mangaluru-rain [1]ಮಂಗಳೂರು: ನಿನ್ನೆ ಮಳೆ ಅಬ್ಬರದಿಂದ ನಲುಗಿದ್ದ ಕರಾವಳಿ ಜನರು ಇಂದು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ನಿನ್ನೆ ಧಾರಾಕಾರವಾಗಿ ಸುರಿದಿದ್ದ ತನ್ನ ರೌದ್ರಾವತಾರ ನಿಲ್ಲಿಸಿ ಶಾಂತವಾಗಿದೆ.

ನಿನ್ನೆ ಬೆಳಗ್ಗೆಯಿಂದ ರಾತ್ರಿಯವರೆಗೆ ಸುರಿದ ಮಹಾ ಮಳೆಯಿಂದ ಮಂಗಳೂರು ನಗರ ತತ್ತರಿಸಿ ಹೋಗಿತ್ತು. ಮಹಾಮಳೆಗೆ ಇಬ್ಬರು ಸಾವಿಗೀಡಾಗಿದ್ದರೆ ಹಲವು ಮನೆಗಳಿಗೆ ಹಾನಿಯಾಗಿದೆ. ಹಲವೆಡೆ ನೆರೆ ಹಾವಳಿ ಪರಿಸ್ಥಿತಿ ಕಾಣಿಸಿಕೊಂಡಿತ್ತು. ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ತೊಡಕಾಗಿತ್ತು. ಈ ನಡುವೆ ರಾತ್ರಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

ಆದರೆ ಮಳೆ ರಾತ್ರಿಯಿಂದ ನಿಂತಿದೆ. ಆದರೆ ನಿನ್ನೆ ‌ಮಳೆಗೆ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು ಅಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಶಾಲಾ ಕಾಲೇಜುಗಳಿಗೆ ಇಂದೂ ಸಹ ರಜೆ ಘೋಷಿಸಲಾಗಿದೆ. ನದಿ ತೀರ, ಸಮುದ್ರ ತೀರಗಳಿಗೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಇನ್ನೂ ಮಂಗಳೂರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಆಗಮಿಸಿ ಪರಿಹಾರ ಕಾರ್ಯದಲ್ಲಿ ನಿರತವಾಗಿದೆ. ಮಂಗಳೂರಿನ ಪ್ರಮುಖ ಚರಂಡಿಗಳ ಪರಿಶೀಲನೆಗೆ ಜಿಲ್ಲಾಧಿಕಾರಿ ಸೂಚಿಸಿದ್ದು, ಮಹಾನಗರ ಪಾಲಿಕೆಯ ಎಲ್ಲಾ ಇಂಜಿನಿಯರ್‌ಗಳು ಫೀಲ್ಡ್‌ಗೆ ಇಳಿಯಲು ಸೂಚಿಸಿದ್ದು ಚರಂಡಿ ಒತ್ತುವರಿ ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲು ಆದೇಶಿಸಲಾಗಿದೆ.