- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರಲ್ಲಿ ಇಂದಿನಿಂದ ಆಳಸಮುದ್ರ ಮೀನುಗಾರಿಕೆ ಸ್ಥಗಿತ

deep-sea-fishing [1]ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವಹಿವಾಟು ಮೀನುಗಾರಿಕೆ ಇಂದಿನಿಂದ ಸ್ಥಗಿತಗೊಂಡಿದೆ.

ಮೀನುಗಳ ಸಂತಾನೋತ್ಪತ್ತಿ ಸಮಯ ಹಾಗೂ ಸಮುದ್ರದಲ್ಲಿ ಭಾರಿ ಏರಿಳಿತ ಉಂಟಾಗುವುದರಿಂದ ಇಂದಿನಿಂದ ಜುಲೈ 31 ರವರೆಗೆ ಆಳಸಮುದ್ರ ಮೀನುಗಾರಿಕೆ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ಮೀನುಗಾರರು ಮೀನುಗಾರಿಕೆಗೆ ತೆರಳದೆ‌ ಮಂಗಳೂರಿನ ಬಂದರಿನಲ್ಲಿ ಬೋಟುಗಳನ್ನು ಲಂಗರು ಹಾಕಿದ್ದಾರೆ.

ಇಂದಿನಿಂದ ಎರಡು ತಿಂಗಳು ಆಳಸಮುದ್ರ ಮೀನುಗಾರಿಕೆ ಸ್ಥಗಿತಗೊಂಡಿರುವುದರಿಂದ ಮಂಗಳೂರು ಬಂದರಲ್ಲಿ ಸಾವಿರಾರು ಬೋಟ್‌ಗಳು ಲಂಗರು ಹಾಕಿವೆ.

ಮೀನುಗಾರಿಕೆ ಸ್ಥಗಿತವಾದ ಹಿನ್ನೆಲೆಯಲ್ಲಿ ಸದಾ ಗಿಜಿಗುಡುತ್ತಿದ್ದ ಬಂದರು ಪ್ರದೇಶದಲ್ಲಿ ಯಾವುದೇ ವಹಿವಾಟು ನಡೆಯುತ್ತಿಲ್ಲ. ಇನ್ನು ಆಳಸಮುದ್ರ ಮೀನುಗಾರಿಕೆ ತೆರಳುವ ಮೀನುಗಾರರು ಸಮುದ್ರ ತೀರದಲ್ಲಿ ನಡೆಸುವ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಮಾಡಲು ಸಜ್ಜಾಗಿದ್ದಾರೆ.