- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ವಸತಿ, ನಗರಾಭಿವೃದ್ಧಿ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾಗಿ ಯು.ಟಿ ಖಾದರ್ ಪ್ರಮಾಣ ವಚನ

UT Khader [1]ಮಂಗಳೂರು : ಕಳೆದ ಕಾಂಗ್ರೆಸ್ ಸರಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು  ಸಚಿವರಾಗಿದ್ದ ಯು.ಟಿ ಖಾದರ್ ಈಗ ಜೆ.ಡಿ.ಎಸ್  ಹಾಗೂ ಕಾಂಗ್ರೆಸ್ ಸರಕಾರದಲ್ಲಿ ವಸತಿ, ನಗರಾಭಿವೃದ್ಧಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವಾರಗಳ ನಂತರ ಮೊದಲ ಬಾರಿಗೆ ಸಂಪುಟ ವಿಸ್ತರಣೆಯ ಶಾಸ್ತ್ರ ಮುಗಿದಿದೆ. ಮೈತ್ರಿ ಸರ್ಕಾರ ಸಂಪುಟ ವಿಸ್ತರಣೆಯಲ್ಲಿ ಒಕ್ಕಲಿಗರಿಗೆ ಹೆಚ್ಚಿನ ಪ್ರಾತಿನಿಧ್ಯ, ತಮ್ಮ ಕುಟುಂಬ ವರ್ಗ, ತಮ್ಮ ಜಿಲ್ಲೆಗೆ ಹೆಚ್ಚಿನ ಬಲ ನೀಡುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ.

ಲಿಂಗಾಯತರಿಗೆ ನಾಲ್ಕು, ಕುರುಬರಿಗೆ ಎರಡು, ಉಪ್ಪಾರ, ಈಡಿಗ, ಪರಿಶಿಷ್ಟ ಪಂಗಡ ತಲಾ ಒಂದು, ಪರಿಶಿಷ್ಟ ಜಾತಿ ಹಾಗೂ ಅಲ್ಪಸಂಖ್ಯಾತರಿಗೆ ತಲಾ ಮೂರು, ಬ್ರಾಹ್ಮಣ ಒಂದು, ಒಕ್ಕಲಿಗರಿಗೆ ಒಂಭತ್ತು ಸಚಿವ ಸ್ಥಾನ ನೀಡಲಾಗಿದೆ.

ಉಡುಪಿಯಲ್ಲಿ ಕಾಂಗ್ರೆಸ್ ಗಾಗಲಿ ಜೆಡಿಎಸ್ ಗಾಗಲಿ ಒಂದೇ ಒಂದು ಶಾಸಕರಿಲ್ಲ. ದಕ್ಷಿಣ ಕನ್ನಡ ಎಂಟು ಕ್ಷೇತ್ರಗಳ ಪೈಕಿ ಮುಸ್ಲಿಂ ಪ್ರಾಬಲ್ಯ ವಿರುವ ಮಂಗಳೂರು ಕ್ಷೇತ್ರದಲ್ಲಿ  ಮಾತ್ರ  ಕಾಂಗ್ರೆಸ್ ಜಯಗಳಿಸಿ ಯು.ಟಿ ಖಾದರ್ ಅವರಿಗೆ ಮತ್ತೆ ಮಂತ್ರಿಯಾಗುವ ಅವಕಾಶ ಸಿಕ್ಕಿದೆ.

ಸರಕಾರದ ನೂತನ ಸಂಪುಟ:

ಮುಖ್ಯಮಂತ್ರಿ: ಹೆಚ್.ಡಿ. ಕುಮಾರಸ್ವಾಮಿ (ಜೆಡಿಎಸ್)
ಉಪಮುಖ್ಯಮಂತ್ರಿ: ಡಾ| ಜಿ. ಪರಮೇಶ್ವರ್ (ಕಾಂಗ್ರೆಸ್)

ಕಾಂಗ್ರೆಸ್ನ ಸಚಿವರು:

ಆರ್.ವಿ. ದೇಶಪಾಂಡೆ
ಡಿ.ಕೆ. ಶಿವಕುಮಾರ್
ಕೆ.ಜೆ. ಜಾರ್ಜ್
ಕೃಷ್ಣ ಭೈರೇಗೌಡ
ಶಿವಶಂಕರ್ ರೆಡ್ಡಿ
ರಮೇಶ್ ಜಾರಕಿಹೊಳಿ
ಪ್ರಿಯಾಂಕ್ ಖರ್ಗೆ
ಯು.ಟಿ. ಖಾದರ್
ಜಮೀರ್ ಅಹ್ಮದ್
ಶಿವಾನಂದ ಪಾಟೀಲ್
ವೆಂಕಟರಮಣಪ್ಪ
ರಾಜಶೇಖರ್ ಪಾಟೀಲ್
ಸಿ. ಪುಟ್ಟರಂಗ ಶೆಟ್ಟಿ
ಜಯಮಾಲಾ
——
ಜೆಡಿಎಸ್ನ ಸಚಿವರು:

ಹೆಚ್.ಡಿ. ರೇವಣ್ಣ
ಬಂಡೆಪ್ಪ ಕಾಶೆಂಪೂರ,
ಜಿ.ಟಿ. ದೇವೇಗೌಡ
ಡಿ.ಸಿ. ತಮ್ಮಣ್ಣ
ಎಂ.ಸಿ. ಮನಗೂಳಿ
ಎಸ್.ಆರ್. ಶ್ರೀನಿವಾಸ್
ವೆಂಕಟರಾವ್ ನಾಡಗೌಡ
ಸಿ.ಎಸ್. ಪುಟ್ಟರಾಜು
ಸಾರಾ ಮಹೇಶ್

ಎನ್. ಮಹೇಶ್ (ಬಿಎಸ್ಪಿ)
ಆರ್. ಶಂಕರ್ (ಕೆಪಿಜೆಪಿ)