- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮುಖ್ಯಮಂತ್ರಿ ಕುಮಾರಸ್ವಾಮಿ ಬಳಿ ಬರೋಬ್ಬರಿ ನಾಲ್ಕು ಖಾತೆಗಳು

Kumara Swamy [1]ಬೆಂಗಳೂರು : ಜೆಡಿಎಸ್ ಮತ್ತು ಬಿಎಸ್ಪಿಯ ಎಲ್ಲಾ ಸಚಿವರಿಗೂ ಖಾತೆ ಹಂಚಿಕೆ ಅಂತಿಮಗೊಂಡಿದೆ. ಎರಡು ಖಾತೆಗೆ ಪಟ್ಟುಹಿಡಿದಿದ್ದ ಹೆಚ್.ಡಿ. ರೇವಣ್ಣಗೆ ಲೋಕೋಪಯೋಗಿ ಖಾತೆ ಮಾತ್ರ ಸಿಕ್ಕಿದೆ. ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು ಅವರು ಇಚ್ಛೆ ಪಟ್ಟಂತೆ ಸಾರಿಗೆ ಖಾತೆ ಸಿಕ್ಕಿದೆ. ಕೊನೆಯ ಕ್ಷಣದಲ್ಲಿ ಸಂಪುಟಕ್ಕೆ ಸೇರ್ಪಡೆಯಾದ ಮೈಸೂರಿನ ಸಾರಾ ಮಹೇಶ್ ಅವರಿಗೆ ಸಹಕಾರ ಖಾತೆ ನೀಡಲಾಗಿದೆ. ಹೆಚ್.ಡಿ.ದೇವೇಗೌಡರ ಕಿರಿಯ ಪುತ್ರನ ಮಾವ ಡಿ.ಸಿ. ತಮ್ಮಣ್ಣ ಅವರಿಗೆ ಉನ್ನತ ಶಿಕ್ಷಣ ಖಾತೆ ಕೊಡಲಾಗಿದೆ. ಬಿಎಸ್ಪಿಯ ಶಾಸಕ ಎನ್. ಮಹೇಶ್ ಅವರನ್ನು ಪ್ರವಾಸೋದ್ಯಮ ಮಂತ್ರಿಯನ್ನಾಗಿ ಮಾಡಲಾಗಿದೆ. ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದ ಜಿ.ಟಿ. ದೇವೇಗೌಡ ಅವರಿಗೆ ಕಂದಾಯ ಖಾತೆ ಸಿಕ್ಕಿದೆ.

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಬಳಿ ಬರೋಬ್ಬರಿ ನಾಲ್ಕು ಖಾತೆಗಳಿದ್ದು ಹಣಕಾಸು, ಇಂಧನ ಮತ್ತು ಗುಪ್ತಚರ ಖಾತೆಗಳನ್ನು ವಾರ್ತಾ ಮತ್ತು ಪ್ರಸಾರ ಖಾತೆ ಕೂಡ ಅವರ ಕೈಲೇ ಇದೆ.

ಜೆಡಿಎಸ್ ಸಚಿವರ ಖಾತೆಗಳು:

ಸಿಎಂ ಹೆಚ್.ಡಿ. ಕುಮಾರಸ್ವಾಮಿ – ಹಣಕಾಸು, ಇಂಧನ, ಗುಪ್ತಚರ, ವಾರ್ತಾ ಮತ್ತು ಪ್ರಸಾರ ಇಲಾಖೆ
ಹೆಚ್.ಡಿ. ರೇವಣ್ಣ- ಲೋಕೋಪಯೋಗಿ,
ಜಿ.ಟಿ. ದೇವೇಗೌಡ- ಕಂದಾಯ
ಸಿ.ಎಸ್. ಪುಟ್ಟರಾಜು- ಸಾರಿಗೆ
ಸಾ.ರಾ. ಮಹೇಶ್ – ಸಹಕಾರ
ಎನ್ ಮಹೇಶ್ – ಪ್ರವಾಸೋದ್ಯಮ
ನಾಡಗೌಡ – ಸಣ್ಣನೀರಾವರಿ
ಎಂ.ಸಿ.ಮನಗೂಳಿ – ಸಣ್ಣ ಕೈಗಾರಿಕೆ
ಗುಬ್ಬಿ ಶ್ರೀನಿವಾಸ್- ತೋಟಗಾರಿಕೆ
ಡಿ.ಸಿ. ತಮ್ಮಣ್ಣ- ಉನ್ನತ ಶಿಕ್ಷಣ
ಬಂಡೆಪ್ಪ ಕಾಶೆಂಪೂರ್-