- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬಜ್ಪೆಯಲ್ಲಿ 623 ಲೋಡ್ ಅಕ್ರಮ ಮರಳು ಪತ್ತೆ, ದಂದೆಯಲ್ಲಿ ಪೊಲೀಸರು ಶಾಮೀಲು

Sand [1]ಮಂಗಳೂರು  : ಬಜಪೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಎಸ್ ಪರಶಿವಮೂರ್ತಿ ರವರಿಗೆ ಕಂದಾವರ ಗ್ರಾಮ,, ಬಡಗುಳಿಫಾಡಿ ಗ್ರಾಮ, ಮೂಡುಪೆರಾರ ಎಂಬಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿರುವ ಬಗ್ಗೆ ಬೀಟ್ ಸಿಬ್ಬಂದಿಗಳ ಖಚಿತ ಮಾಹಿತಿಯಂತೆ ಪೊಲೀಸ್ ನಿರೀಕ್ಷಕರು ಸಿಬ್ಬಂದಿಯವರೊಂದಿಗೆ ಕಂದಾವರ ಗ್ರಾಮ, ಬಡಗುಳಿಫಾಡಿ ಗ್ರಾಮ, ಮೂಡುಪೆರಾರ ಎಂಬಲ್ಲಿಗೆ ಗುರುವಾರ ದಾಳಿ ನಡೆಸಿದಾಗ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರು ಕಡೆ ಸುಮಾರು 623 ಲೋಡ್ ಗಳಷ್ಟು ಮರಳನ್ನು ಅಕ್ರಮವಾಗಿ ಸಂಗ್ರಹಿಸಿರುವುದು ಕಂಡು ಬಂದಿದ್ದು ,ಸದ್ರಿ ಮರಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿರುತ್ತದೆ. ಸದ್ರಿ ಮರಳನ್ನು ಅಮಾನತ್ತು ಪಡಿಸಿ ಮುಂದಿನ ಕ್ರಮದ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಿರುವುದಾಗಿದೆ.

ಈ  ಕಾರ್ಯಾಚರಣೆಯನ್ನು ಶ್ರೀ ರಾಜೇಂದ್ರ ಡಿ.ಎಸ್. ಕೆ.ಎಸ್.ಪಿ.ಎಸ್. ಸಹಾಯಕ ಪೊಲೀಸ್ ಆಯುಕ್ತರು ಪಣಂಬೂರು ರವರ ಮಾರ್ಗದರ್ಶನದಲ್ಲಿ ಬಜಪೆ ಪೊಲೀಸ್ ಠಾಣಾ ನಿರೀಕ್ಷಕರಾದ ಶ್ರೀ ಎಸ್. ಪರಶಿವಮೂರ್ತಿ ಮತ್ತು ಸಿಬ್ಬಂದಿಯರಾದ .ಎಎಸ್.ಐ ಪೂವಪ್ಪ, ಹೆಚ್,ಸಿ 2215 ಜಗದಿಶ್, ಹೆಚ್,ಸಿ 510 ರಾಜೇಶ್, ಪಿ.ಸಿ 654 ಕಿಷ್ಟಪ್ಪ ರಾಥೋಡ್, ಪಿ.ಸಿ 661 ಅಬ್ಬುಸಾಲಿ, ಪಿ.ಸಿ 383 ಕುಮಾರ್ ಸ್ವಾಮಿ,. ಪಿ.ಸಿ 590 ಚಂದ್ರಶೇಖರ್, ಹೆಚ್.ಜಿ ಬಾಷಾ ಹಾಗೂ ಕಂದಾಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಭಾಗಹಿಸಿರುತ್ತಾರೆ.

ಅಕ್ರಮ ಮರಳು ದಾಸ್ತಾನು ಬಹಳ ಸಮಯದಿಂದ ನಡೆಯುತ್ತಿದ್ದು ಈ ಕುರಿತ ಮಾಹಿತಿ ಮುಚ್ಚಿಟ್ಟ ಆರೋಪ ಮೇರೆಗೆ ಬಜ್ಪೆ ಠಾಣೆಯ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ಬಜ್ಪೆ ಠಾಣೆಯ ಸಿಬ್ಬಂದಿಗಳಾದ ಕಾನ್ಸ್ ಟೇಬಲ್ ಮಂಜುನಾಥ್, ಲಕ್ಷ್ಮಣ್, ಹೆಡ್ ಕಾನ್ಸ್ ಟೇಬಲ್ ಚಂದ್ರಮೋಹನ್ ಅವರನ್ನು ಅಮಾನತುಗೊಳಿಸಿ ಮಂಗಳೂರು ಪೊಲೀಸ್ ಕಮಿಷನರ್ ವಿಪುಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

Sand [2]