- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರಿನಲ್ಲಿ ಅಕ್ರಮ ಮರಳು ಮಾಫಿಯಾಕ್ಕೆ ಬಲಿಯಾಗುತ್ತಿರುವ ಅಧಿಕಾರಿಗಳು

VipulKumar [1]ಮಂಗಳೂರು  : ದಕ್ಷಿಣ ಕರಾವಳಿಯ ನದೀ ತೀರಗಳಲ್ಲಿ ನಡೆಯುವ ಅಕ್ರಮ ಮರುಳುಗಾಗಿಕೆ ಗೆ ಪೊಲೀಸ್ ಅಧಿಕಾರಿಗಳು ಬಲಿಯಾಗುತ್ತಿರುವುದಕ್ಕೆ ರಾಜಕೀಯ ಪ್ರೇರಿತ ಶಕ್ತಿಗಳು ಕಾರಣ ಎಂಬುದನ್ನು ಸ್ವತಃ ಅಧಿಕಾರಿಗಳೇ ಹೇಳುತ್ತಿದ್ದಾರೆ.

ವಿಪುಲ್ ಕುಮಾರ್  ಆಕ್ರಮ ಮರಳುಗಾರಿಕೆ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು ಮಾತ್ರವಲ್ಲ, ವಿಶೇಷ ಕಾರ್ಯಪಡೆ ತಂಡ ಒಂದನ್ನು ರಚಿಸಿ ಅಕ್ರಮ ಮರಳು ದಾಸ್ತಾನು ಅಡ್ಡೆಗಳ ಮೇಲೆ ದಾಳಿ ನಡೆಸಿದ್ದರು. 1400ಕ್ಕೂ ಅಧಿಕ ಲೋಡ್ ಮರಳನ್ನು ವಶಪಡಿಸಿಕೊಂಡಿದ್ದರು.

ವಿಪುಲ್ ಕುಮಾರ್ ಅವರ ದಿಢೀರ್ ವರ್ಗಾವಣೆಗೆ ಅಕ್ರಮ ಮರಳುಗಾರಿಕೆಗೆ ತಡೆಯೊಡ್ಡಿದ್ದೇ ಕಾರಣ ಎಂದು ಹೇಳಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪೊಲೀಸ್ ಹಾಗು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ತಂಡ ಭಾರೀ ಪ್ರಮಾಣದಲ್ಲಿ ಅಕ್ರಮ ಮರಳು ದಾಸ್ತಾನು ಅಡ್ಡೆಗಳ ಮೇಲೆ ದಾಳಿ ಆರಂಭಿಸಿತ್ತು. ಇದು ಅಕ್ರಮ ಮರಳು ದಂಧೆಕೋರರ ನಿದ್ದೇಗೆಡಿಸಿತ್ತು.

ಅಕ್ರಮ ಮರಳುಗಾರಿಕೆ ಹಾಗೂ ಅಕ್ರಮ ಮರಳು ದಾಸ್ತಾನುಗಳ ಕುರಿತು ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟ ಪೊಲೀಸ್ ಸಿಬ್ಬಂದಿ ಮೇಲೂ ವಿಪುಲ್ ಕುಮಾರ್ ಶಿಸ್ತು ಕ್ರಮ ಜರುಗಿಸಿ, ಅಮಾನತು ಮಾಡಿದ್ದರು. ಈ ರೀತಿ ಕಠಿಣ ಕ್ರಮ ಕೈಗೊಂಡಿದ್ದೇ ವಿಪುಲ್ ಕುಮಾರ್ ಅವರಿಗೆ ಮುಳುವಾಯಿತು ಎಂಬ ಮಾತು ಕೇಳಿಬರುತ್ತಿದೆ