ಭಾರತದ ಸೇರಿದಂತೆ ವಿಶ್ವದಾದ್ಯಂತ ಸಹಸ್ರಾರು ಜನತೆ ಯೋಗಾಭಾಸ್ಯ!

10:34 AM, Thursday, June 21st, 2018
Share
1 Star2 Stars3 Stars4 Stars5 Stars
(No Ratings Yet)
Loading...

narendra-modiನವದೆಹಲಿ: ಇಡೀ ಜಗತ್ತು ಇಂದು ನಾಲ್ಕನೇ ವಿಶ್ವ ಯೋಗ ದಿನಾಚರಣೆಯಲ್ಲಿ ತೊಡಗಿದೆ. ಭಾರತದ ಸೇರಿದಂತೆ ವಿಶ್ವದಾದ್ಯಂತ ಸಹಸ್ರಾರು ಜನತೆ ಯೋಗಾಭಾಸ್ಯ ಮಾಡುತ್ತಿದ್ದಾರೆ.

ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ವಿಶ್ವ ಮಟ್ಟದಲ್ಲಿ ಯೋಗ ತರಬೇತಿ ಕಾರ್ಯಕ್ರಮಗಳು, ಕ್ಯಾಂಪ್‌‌ಗಳು, ಉಪನ್ಯಾಸಗಳು, ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡ್‌ನ ರಾಜಧಾನಿ ಡೆಹ್ರಾಡೂನ್‌ನಲ್ಲಿ ಸಾವಿರಾರು ಜನರ ಮುಂದೆ ಯೋಗ ದಿನ ಆಚರಿಸಿದರು.

ಡೆಹ್ರಾಡೂನ್‌ನ ಅರಣ್ಯ ಸಂಶೋಧನಾ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಯೋಗ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡರು. ಇಂದು ವಿಶ್ವ ಮಟ್ಟದಲ್ಲಿ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಯೋಗದಿಂದ ಜಗತ್ತಿನಲ್ಲಿ ಶಾಂತಿ ಮತ್ತು ಸೌಹಾರ್ದತೆ ಹೆಚ್ಚಲಿದೆ. ಯೋಗ ಅತಿದೊಡ್ಡ ಸಾಮೂಹಿಕ ಚಳವಳಿಯಾಗಿ ಪರಿವರ್ತನೆಯಾಗಿದೆ ಎಂದರು.

ಯೋಗದಿಂದ ಉತ್ತಮ ಆರೋಗ್ಯ ವೃದ್ಧಿಸಲಿದೆ. ಮನುಷ್ಯನ ದೇಹ, ಮೆದುಳು ಮತ್ತು ಆತ್ಮವನ್ನು ಒಟ್ಟಿಗೆ ಬಂಧಿಸಲಿದ್ದು, ಇದರಿಂದ ಮನದಲ್ಲಿ ಶಾಂತಿಯ ಭಾವನೆ ಮೂಡಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು. ನಂತರ ಜನರೊಂದಿಗೆ ಸೇರಿಕೊಂಡು ಪ್ರಧಾನಿ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು.

ಇತ್ತ, ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ಭಾಗಗಳಲ್ಲೂ ಯೋಗ ದಿನ ಆಚರಿಸಲಾಗುತ್ತಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ಇತರ ಕ್ಷೇತ್ರಗಳ ಗಣ್ಯರು ವಿಶ್ವ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English