- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಣ್ಣೂರಿನಲ್ಲಿ ನಿಂತಿದ್ದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಓರ್ವ ಸಾವು, ನಾಲ್ವರು ಗಂಭೀರ

Kannaur Accident [1]
ಮಂಗಳೂರು:  ‌ಕಣ್ಣೂರಿನಲ್ಲಿ ಬುಧವಾರ  ಮುಂಜಾನೆ ನಡೆದ ಸರಣಿ‌ ಅಪಘಾತದಲ್ಲಿ ಓರ್ವ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ನಡೆದಿದೆ.

ಬಿಸಿ ರೋಡ್ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ನೋಂದಾವಣೆಯಾಗದ ಹೊಸ ಪೋಲೊ ಕಾರು. ಅಲ್ಲೇ ನಿಂತಿದ್ದ ಬಿಎಂಡಬ್ಲ್ಯೂ ಕಾರಿಗೆ ಡಿಕ್ಕಿ ಹೊಡೆದು ಒಬ್ಬ ಮೃತರಾಗಿದ್ದಾರೆ.

ಇದು ಕಣ್ಣೂರು ಮಸೀದಿ ಮುಂಭಾಗದಲ್ಲಿ ನಡೆದಿದ್ದು ಎರಡು ಕಾರು, ಬೈಕ್ , ರಿಕ್ಷಾ ಒಂದಕ್ಕೊಂದು ಬಡಿದುಕೊಂಡು ಈ ಘಟನೆ ನಡೆದಿದೆ.

ಘಟನೆಯಲ್ಲಿ ಕಾರು ಚಾಲಕ ಫಾರುಕ್ (26) ಎಂಬವರು ಮೃತಪಟ್ಟಿದ್ದು, ಜುನೈದ್, ಸರ್ಫಾರಾಜ್ ಹಾಗು ಪೋಲೊ ಕಾರಿನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.