ಕುಕ್ಕೆ ಸುಬ್ರಹ್ಮಣ್ಯ ಭಕ್ತರ ಅನುಕೂಲಕ್ಕಾಗಿ ಇಂದಿನಿಂದ ಸಂಜೆಯೂ ಆಶ್ಲೇಷಾಬಲಿ ಸೇವೆ..!

5:09 PM, Thursday, July 5th, 2018
Share
1 Star2 Stars3 Stars4 Stars5 Stars
(No Ratings Yet)
Loading...

kukke-subramanyaಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಭಕ್ತರ ಅನುಕೂಲಕ್ಕಾಗಿ ಇಂದಿನಿಂದ ಆಶ್ಲೇಷಾ ಬಲಿ ಸೇವೆಯನ್ನು ಸಂಜೆ ವೇಳೆಯಲ್ಲೂ ಆರಂಭಿಸಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ದೇಗುಲಕ್ಕೆ ಹರಕೆ ಸೇವೆಗಳನ್ನು ಪೂರೈಸಲು ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಪ್ರತಿನಿತ್ಯ ಸುಮಾರು 400-500 ಮಂದಿ ಆಶ್ಲೇಷಾ ಬಲಿ ಸೇವೆ ಸಲ್ಲಿಸುತ್ತಾರೆ. ವಿಶೇಷ ದಿನ ಹಾಗೂ ಸಾರ್ವಜನಿಕ ರಜಾ ದಿನಗಳಲ್ಲಿ ಇದರ ಪ್ರಮಾಣ 1,200ರಿಂದ 1,400ರ ತನಕವೂ ಏರಿಕೆಯಾಗುತ್ತಿದೆ. ಹೀಗಾಗಿ ಸಂಜೆಯೂ ಸೇವೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ದೇವಸ್ಥಾನದ ಮಂಡಳಿ ವರ್ಗ ತಿಳಿಸಿದೆ.

ಮಧ್ಯಾಹ್ನ 12.30ರಿಂದ 4.30ರ ತನಕ ಆಯಾ ದಿನದ ಸೇವಾ ರಶೀದಿ ನೀಡಲಾಗುತ್ತಿದೆ.

ಸಂಜೆ ದೇಗುಲದ ವತಿಯಿಂದ ಆಶ್ಲೇಷಾ ಬಲಿ ಸೇವೆ ನಡೆಯಲಿದ್ದು ಮರುದಿನದಿಂದ ಭಕ್ತರಿಗೆ ಅವಕಾಶ ಕಲ್ಪಿಸಲಾಗುವುದು. ಬೆಳಗ್ಗೆ ನಡೆಯುವ ಆಶ್ಲೇಷಾ ಬಲಿ ಸೇವೆ ಎಂದಿನಂತೆ ಮುಂದುವರಿಯಲಿದೆ.

ಮಧ್ಯಾಹ್ನ 12.30ರಿಂದ 4.30ರ ತನಕ ಆಯಾ ದಿನದ ಸೇವಾ ರಶೀದಿ ನೀಡಲಾಗುತ್ತಿದ್ದು 5 ಗಂಟೆಗೆ ಸೇವೆ ಆರಂಭಗೊಳ್ಳುತ್ತದೆ. ಪ್ರತಿ ತಿಂಗಳ ಶುದ್ಧ ಷಷ್ಠಿ, ಏಕಾದಶಿ ಇತ್ಯಾದಿ ಉಪವಾಸ ದಿನಗಳಂದು ಸೇವೆಯನ್ನು ಮಾಡಲಾಗುವುದಿಲ್ಲ. ಜೊತೆಗೆ ವಾರ್ಷಿಕ ಜಾತ್ರೆ ಸಮಯದಂದು ಕೊಪ್ಪರಿಗೆ ಏರಿದ ದಿನದಿಂದ ಮಹಾಸಂಪ್ರೋಕ್ಷಣೆ ವರೆಗಿನ ದಿನಗಳನ್ನು ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿ ಈ ಸೇವೆ ನಡೆಯುತ್ತದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English