- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿಗೆ ಇಂದು 37ನೇ ವರ್ಷದ ಹುಟ್ಟುಹಬ್ಬ..!

m-s-dhoni [1]ಹೈದರಾಬಾದ್: ಭಾರತ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗ, ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಇಂದು 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಭಾರತೀಯ ಕ್ರಿಕೆಟ್ ಕಂಡಂತಹ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಧೋನಿ ಇಂದಿಗೆ ಸರಿಯಾಗಿ 37 ವರ್ಷಗಳ ಹಿಂದೆ ಅಂದರೆ ಜುಲೈ 7, 1981ರಲ್ಲಿ ರಾಂಚಿಯಲ್ಲಿ ಜನಿಸಿದವರು.

ಧೋನಿ ಡಿಸೆಂಬರ್ 23, 2004ರಂದು ಬಾಂಗ್ಲಾದೇಶದ ವಿರುದ್ಧ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡುತ್ತಾರೆ. ಅದಾದ ಒಂದು ವರ್ಷದ ನಂತರ ಅಂದರೆ, ಡಿಸೆಂಬರ್ 2, 2005ರಲ್ಲಿ ಧೋನಿ ಟೆಸ್ಟ್ ತಂಡದಲ್ಲೂ ಸ್ಥಾನ ಪಡೆಯುತ್ತಾರೆ.

m-s-dhoni-2 [2]ಅಂದಿನಿಂದ ಇಂದಿನವರೆಗೆ ಧೋನಿ ಕ್ರಿಕೆಟ್ಗೆ ನೀಡಿದ ಕೊಡುಗೆ ಒಂದಲ್ಲಾ.. ಎರಡಲ್ಲಾ… ಏಕದಿನ, ಟಿ-20ಕ್ರಿಕೆಟ್ನಲ್ಲಿ ಗ್ರೇಟ್ ಫಿನಿಶರ್ ಎಂಬ ಬಿರುದು ಧೋನಿಗಿದೆ. ಅದಕ್ಕೆ ಧೋನಿಯ ಆಟದ ವೈಖರಿ ಮತ್ತು ಆತನ ಪ್ರತಿಭೆ ಜೊತೆಗೆ ತಮ್ಮ ಅದ್ಭುತ ಬ್ಯಾಟಿಂಗ್ ಸಾಮರ್ಥ್ಯವೇ ಕಾರಣ ಎಂದರೆ ತಪ್ಪಾಗಲಾರದು. ಅದರ ಜೊತೆಗೆ ವಿಕೆಟ್ ಕೀಪಿಂಗ್ನ ವಿಚಾರದಲ್ಲಿ ವಿಶ್ವದ ಅಗ್ರಗಣ್ಯ ಕೀಪರ್ಗಳ ಸ್ಥಾನದಲ್ಲಿ ಧೋನಿ ನಿಲ್ಲುತ್ತಾರೆ.

2007ರಲ್ಲಿ ಏಕದಿನಕ್ಕೆ ನಾಯಕರಾಗಿದ್ದ ರಾಹುಲ್ ದ್ರಾವಿಡ್ ರಾಜೀನಾಮೆ ಕೊಟ್ಟ ಬಳಿಕ ಬಿಸಿಸಿಐ ಧೋನಿಗೆ ತಂಡದ ನಾಯಕತ್ವ ವಹಿಸುತ್ತದೆ. ಇದಾದ ಮರು ವರ್ಷ ಅಂದರೆ 2008ರಲ್ಲಿ ಟೆಸ್ಟ್ ತಂಡದ ನಾಯಕರಾಗಿಯೂ ಎಂಎಸ್ ಆಯ್ಕೆಯಾಗುತ್ತಾರೆ ಮತ್ತು ಅದೇ ವರ್ಷವೇ ನ್ಯೂಜಿಲ್ಯಾಂಡ್ ಮತ್ತು ವೆಸ್ಟ್ಇಂಡೀಸ್ನಲ್ಲಿ ಎರಡು ಸರಣಿ ಗೆದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಪಂದ್ಯ ಸೋಲುವ ಭೀತಿಯಲ್ಲಿದ್ದಾಗ ಯಾವ ಕ್ಷಣದಲ್ಲಾದರು ಪಂದ್ಯದ ಗತಿಯನ್ನೇ ಬದಲಿಸಬಲ್ಲಂತಹ ಸಾಮರ್ಥ್ಯ ಧೋನಿ ಅವರಲ್ಲಿದೆ. ಅದು ಹಲವಾರು ಪಂದ್ಯಗಳಲ್ಲಿ ಮನದಟ್ಟಾಗಿದೆ ಕೂಡ. ಎಂತಹ ಪರಿಸ್ಥಿತಿಯಲ್ಲೂ ಧೃತಿಗೆಡದೇ ಕೂಲ್ ಆಗಿಯೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಗುಣ ಇವರದು. ಅವರ ಈ ಶಾಂತ ಸ್ವಭಾವಕ್ಕಾಗಿಯೇ ಅವರನ್ನು ಇಷ್ಟಪಡುವವರ ಸಂಖ್ಯೆ ಸಾಕಷ್ಟಿದೆ.

m-s-dhoni-3 [3]ಧೋನಿಯ ವಿಶೇಷ ಸಾಧನೆ ಎಂದರೆ ಐಸಿಸಿಯ ಮೂರು ಟ್ರೋಫಿಗಳನ್ನು ಗೆದ್ದಂತಹ ವಿಶ್ವದ ಏಕೈಕ ನಾಯಕ. 2007ರಲ್ಲಿ ಟಿ-20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್ ಮತ್ತು 2013 ರಲ್ಲಿ ಚಾಂಪಿಯನ್ಸ್ ಟ್ರೋಫಿಗಳನ್ನು ಭಾರತಕ್ಕೆ ಧೋನಿ ತಂದು ಕೊಟ್ಟಿದ್ದಾರೆ. ಈ ಮೂಲಕ ಐಸಿಸಿಯ ಮೂರೂ ಪ್ರಶಸ್ತಿಗಳನ್ನು ಗೆದ್ದಂತಹ ವಿಶ್ವದ ಏಕೈಕ ಕ್ರಿಕೆಟಿಗ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಇವರ ಸಾಧನೆಗಳನ್ನು ಗುರುತಿಸಿ ಇವರನ್ನು ಹುಡುಕಿಕೊಂಡು ಹಲವಾರು ಪ್ರಶಸ್ತಿಗಳು ಬಂದಿವೆ. ಅದರಲ್ಲಿ ವಿಶೇಷವಾದುದೆಂದರೆ 2011ರಲ್ಲಿ ಇವರು ಪಡೆದ ಲೆಫ್ಟಿನೆಂಟ್ ಕರ್ನಲ್ ಗೌರವ. ವಿಶ್ವದೆಲ್ಲೆಡೆ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಧೋನಿ, ಇನ್ನೂ ನೂರ್ಕಾಲ ಚೆನ್ನಾಗಿ ಬಾಳಲಿ ಎಂಬ ಪ್ರಾರ್ಥನೆ ಅವರದು.