- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಜೆ.ಆರ್.ಲೋಬೋಯಿಂದ ಡೆಬಿಟ್ ಕಾರ್ಡ್ ಮಾಹಿತಿ… ಖಾತೆಯಿಂದಲೇ 49,000 ರೂ. ಲಪಟಾ!

j-r-lobo [1]ಮಂಗಳೂರು: ಮಾಜಿ ಶಾಸಕ ಜೆ.ಆರ್.ಲೋಬೋ ಅವರ ಡೆಬಿಟ್ ಕಾರ್ಡ್ ಮಾಹಿತಿ ಪಡೆದ ಖದೀಮನೋರ್ವ, ಅವರ ಬ್ಯಾಂಕ್ ಖಾತೆಯಿಂದಲೇ 49,000 ರೂ. ಲಪಟಾಯಿಸಿದ್ದಾನೆ.

ಲೋಬೋ ಅವರ ಮೊಬೈಲ್ಗೆ ವ್ಯಕ್ತಿಯೋರ್ವ ಕರೆ ಮಾಡಿ ಸ್ಟೇಟ್ ಬ್ಯಾಂಕಿನಿಂದ ಮಾತನಾಡುವುದಾಗಿ ಸುಳ್ಳು ಹೇಳಿದ್ದಾನೆ. ನಿಮ್ಮ ಖಾತೆಯನ್ನು ಅಪ್ಡೇಟ್ ಮಾಡುತ್ತೇನೆಂದು ನಂಬಿಸಿದ್ದ ಆತ ಬಳಿಕ ಮಾಜಿ ಶಾಸಕರ ಎಟಿಎಂ ಕಾರ್ಡ್ನ ಒಟಿಪಿ ನಂಬರ್ ಪಡೆದು ಒಟ್ಟು 49,000 ರೂ. ಹಣವನ್ನು ಮೂರು ಕಂತುಗಳಾಗಿ ಡ್ರಾ ಮಾಡಿಕೊಂಡಿದ್ದಾನೆ.

ವಂಚಕನ ಮಾತನ್ನು ನಂಬಿದ ಲೋಬೋ ಅವರು ಪಿನ್ ನಂಬರ್ ನೀಡಿದ್ದು, ಹಣ ಡ್ರಾ ಆದಾಗಲೇ ವಂಚನೆಗೆ ಒಳಗಾಗಿದ್ದು ಗೊತ್ತಾಗಿದೆ. ಬಳಿಕ ಮಾಹಿತಿ ತಂತ್ರಜ್ಞಾನದಡಿ ದೂರು ದಾಖಲಿಸಿರುವ ಕದ್ರಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.