ಮಂಗಳೂರು : ಪೌರಾಣಿಕ, ಐತಿಹಾಸಿಕ, ಜಾನಪದ, ಸಾಮಾಜಿಕ, ಹಾಸ್ಯಮಯ ನಾಟಕಗಳಿಗೆ ಹೆಸರಾದ ಜಿಲ್ಲೆಯ ಏಕೈಕ ತಂಡವಾದ ವಿಧಾತ್ರೀ ಕಲಾವಿದೆರ್ ಕೈಕಂಬ, ಕುಡ್ಲ ಇವರ ಈ ವರ್ಷದ ಹೊಸ ನಾಟಕದ ಮುಹೂರ್ತ ಮಂಗಳೂರಿನ ಇತಿಹಾಸ ಪ್ರಸಿದ್ಧ ಮಂಳಾದೇವಿ ದೇವಸ್ಥಾನದಲ್ಲಿ ಜುಲೈ 8, ಶುಕ್ರವಾರ ರಂದು ನೆರವೇರಿತು. ದೇವಸ್ಥಾನದ ಪ್ರಧಾನ ಅರ್ಚಕರು ಆಶೀರ್ವದಿಸಿ, ಸದಾ ತಾಯಿಯ ಆಶೀರ್ವಾದ ತಂಡದ ಮೇಲಿರಲಿ ಎಂದರು.
ಆಡಳಿತ ಮೊಕ್ತೇಸರರಾದ ರಮಾನಾಥ ಹೆಗ್ಡೆ ರವರು ನಾಟಕವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಕ್ಯಾಡ್ಕ ದ ಕಾರ್ಯದರ್ಶಿ ರಾಜೇಶ್ ರವರು ಮಾತನಾಡುತ್ತಾ ಬಚ್ಚಂಕಾಯಿ ಹೆಸರೇ ವಿಭಿನ್ನವಾಗಿದ್ದು, ಹಾಸ್ಯ ನಾಟಕ ಪ್ರೇಮಿಗಳಿಗೆ “ತೆಲಿಕೆದ ಅಸರ್” ಆಗಲಿ ಎಂದರು. ಇನ್ನೋರ್ವ ಮುಖ್ಯ ಅಥಿತಿ ನ್ಯಾಯವಾದಿ ದೀನನಾಥ ಶೆಟ್ಟಿಯವರು ನಾಟಕಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವಂತಾಗಲಿ ಎಂದರು.
ವಿಧಾತ್ರೀ ತಂಡದ ಸಮಗ್ರ ನಿರ್ವಾಹಕರಾದ ರಮೇಶ್ ರೈ ಕುಕ್ಕುವಳ್ಳಿ, ನಿರ್ದೇಶಕ ಚಿದಾನಂದ ಅದ್ಯಪಾಡಿ, ನಾಟಕ ರಚನೆಕಾರ ಚೇತನ್ ಗೋಪಾಲ್ ಪಿಲಾರ್, ಭರತ್ ಎಸ್.ಕರ್ಕೇರ, ಬಾಚು ಅದ್ಯಪಾಡಿ, ಸುನೀತಾ ಎಕ್ಕೂರು, ಶ್ರೇಯಸ್ ಕಲ್ಲಡ್ಕ, ರವಿ ಕುಮಾರ್ ನಾಡಾಜೆ, ಬಾಲು ನಾಡಾಜೆ, ವರದರಾಜ್ , ಸಚಿನ್ ಅತ್ತಾಜೆ, ಸಚಿನ್ ಅಡ್ಯಾರ್, ದೀಪಿಕಾ ಮಂಗಳೂರು… ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English