- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಫಿಫಾ ವಿಶ್ವಕಪ್ ಸೆಮಿಫೈನಲ್..ಫ್ರಾನ್ಸ್​​ ಹಾಗೂ ಬೆಲ್ಜಿಯಂ ತಂಡಗಳ ನಡುವೆ ಜಿದ್ದಾ ಜಿದ್ದಿನ ಹೋರಾಟ!

belgium [1]ಫ್ರಾನ್ಸ್: 21ನೇ ಫಿಫಾ ವಿಶ್ವಕಪ್ ಫುಟ್ಬಾಲ್ ಕಿರೀಟ ಮುಡಿಗೇರಿಸಿಕೊಳ್ಳಲು ಜಿದ್ದಾ ಜಿದ್ದಿನ ಹೋರಾಟಗಳು ನಡೆಯುತ್ತಿದ್ದು, ಫೈನಲ್ ಪ್ರವೇಶ ಪಡೆದುಕೊಳ್ಳಲು ನಾಲ್ಕು ತಂಡಗಳು ಕಸರತ್ತು ನಡೆಸಿವೆ. ಮೊದಲ ಸೆಮೀಸ್ನಲ್ಲಿ ಇಂದು ಫ್ರಾನ್ಸ್ ಹಾಗೂ ಬೆಲ್ಜಿಯಂ ತಂಡಗಳು ಕಾದಾಡಲಿವೆ.

ಪ್ರಸಕ್ತ ಸಾಲಿನ ಟೂರ್ನಿಯಲ್ಲಿ ಕೆಲವೊಂದು ಆಶ್ಚರ್ಯಕರ ಸಂಗತಿಗಳು ನಡೆದಿದ್ದು, ಯಾರೂ ಊಹೆ ಮಾಡದ ರೀತಿಯಲ್ಲಿ ಬಲಿಷ್ಠ ತಂಡಗಳು ಟೂರ್ನಿಯಿಂದ ಹೊರ ಬಿದ್ದಿವೆ. ಇದರ ಮಧ್ಯೆ ಇಂದಿನ ಪಂದ್ಯದಲ್ಲಿ ಫ್ರಾನ್ಸ್ ಮತ್ತು ಬೆಲ್ಜಿಯಂ ತಂಡಗಳು ಸೆಣೆಸಲಿವೆ. ಟೂರ್ನಿಯಲ್ಲಿ ಬೆಲ್ಜಿಯಂ ಇಲ್ಲಿಯವರೆಗೆ 14 ಗೋಲು ಹೊಡೆದಿದ್ದು, ಕ್ವಾರ್ಟರ್ಫೈನಲ್ನಲ್ಲಿ ಉರುಗ್ವೆ ವಿರುದ್ಧ 2-0 ಅಂತರದ ಗೆಲುವು ದಾಖಲಿಸಿ ಸೆಮೀಸ್ಗೆ ಕಾಲಿಟ್ಟಿದೆ. ಇತ್ತ ಬ್ರೇಜಿಲ್ ಸೆದೆಬಡಿದ ಫ್ರಾನ್ಸ್ ಸೆಮೀಸ್ಗೆ ಕಾಲಿಟ್ಟಿದೆ.

ಇಲ್ಲಿಯವರೆಗೆ ಉಭಯ ತಂಡಗಳು 73 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಬೆಲ್ಜಿಯಂ 30 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದು, ಫ್ರಾನ್ಸ್ 24 ಪಂದ್ಯಗಳಲ್ಲಿ ಗೆದ್ದಿದೆ. ಇತ್ತ 19 ಪಂದ್ಯಗಳು ಡ್ರಾದಲ್ಲಿ ಮುಕ್ತಾಯಗೊಂಡಿವೆ.

ಫ್ರಾನ್ಸ್ ತಂಡದಲ್ಲಿ ಕೈಲ್ಯಾನ್ ಬಾಪೆ ಮತ್ತು ಆಂಟೊಯಿನ್‌ ಗ್ರೀಜ್ಮನ್‌ ಉತ್ತಮ ಫಾರ್ಮ್ನಲ್ಲಿದ್ದರೆ ಅತ್ತ ಬೆಲ್ಜಿಯಂನಲ್ಲಿ ಈಡೆನ್ ಹಜಾರ್ಡ್ ಅವರ ಬಲವಿದೆ. ಫ್ರಾನ್ಸ್ ಈ ಬಾರಿ ಬೆಲ್ಜಿಯಂ ತಂಡವನ್ನು ಮಣಿಸುವ ಮೂಲಕ ಮೊದಲ ಬಾರಿಗೆ ಫೈನಲ್ ಪ್ರವೇಶಿಸುವ ಕನಸು ಕಾಣುತ್ತಿದೆ.

ಇನ್ನು ಬೆಲ್ಜಿಯಂ ಸಹ ಇಲ್ಲಿಯವರೆಗೂ ಒಂದು ಬಾರಿಯೂ ಫಿಫಾ ವಿಶ್ವಕಪ್ ಫೈನಲ್ ಪ್ರವೇಶಿಸಿಲ್ಲ. 1986ರ ಫಿಫಾ ವಿಶ್ವಕಪ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತು ಅಷ್ಟೆ. ಹೀಗಾಗಿ ಫೈನಲ್ ಪ್ರವೇಶಿಸಲು ಉಭಯ ತಂಡಗಳು ಪ್ರಯತ್ನಿಸಲಿದ್ದು, ಇದಕ್ಕಾಗಿ ಭರ್ಜರಿ ಕಸರತ್ತು ನಡೆಸುತ್ತಿವೆ.