ಫಿಫಾ ವಿಶ್ವಕಪ್​ 2ನೇ ಸೆಮೀಸ್..ಇಂಗ್ಲೆಂಡ್ ಮತ್ತು ಕ್ರೊವೇಷಿಯಾ ನಡುವೆ ಹಣಾಹಣಿ!

1:52 PM, Wednesday, July 11th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

englandಮಾಸ್ಕೋ: ಒಂದು ತಂಡ 28 ವರ್ಷಗಳ ಬಳಿಕ ಮತ್ತೊಂದು ತಂಡ ಅರ್ಧಶತಕ ವರ್ಷಗಳ ಬಳಿಕ ಫೈನಲ್ಗೇರುವ ಕನಸು ಕಾಣುತ್ತಿವೆ. ಅವು ಬೇರಾರು ಅಲ್ಲ ಇಂಗ್ಲೆಂಡ್ ಮತ್ತು ಕ್ರೊವೇಷಿಯಾ ತಂಡಗಳು. ಅದರಲ್ಲೂ 21 ನೇ ವಿಶ್ವಕಪ್ ಪಂದ್ಯಾವಳಿಯಲ್ಲಂತೂ ಅತಿರಥ ಮಹಾರಥರೇ ಮಣ್ಣುಮುಕ್ಕಿದ್ದಾರೆ. ಅಂದುಕೊಂಡ ಎಲ್ಲ ತಂಡಗಳು ಮನೆಗೆ ಹೋಗಿವೆ.

ಅಂತಹದ್ದರಲ್ಲಿ ಇವತ್ತಿನ ಮತ್ತೊಂದು ಸೆಮಿಫೈನಲ್ ಹಣಾಹಣಿ ತೀವ್ರ ಕುತೂಹಲಕ್ಕೆ ಕಾರಣವಾಗಿವೆ. 1966ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಇಂಗ್ಲೆಂಡ್ ಆ ಬಳಿಕ ಪ್ರಶಸ್ತಿಯ ಸನಿಹಕ್ಕೂ ಸುಳಿದಿಲ್ಲ. ಈ ವಿಶ್ವಕಪ್ನಲ್ಲಿ ಗೆದ್ದು ಮತ್ತೆ ಬ್ರಿಟಿಷ್ ವಿಜಯ ಪತಾಕೆ ಹಾರಿಸಬೇಕು ಎಂಬುದು ಇಂಗ್ಲೆಂಡ್ ತಂಡದ ಮಹಾದಾಸೆ. ಇಂದು ನಡೆಯಲಿರುವ 2ನೇ ಸೆಮಿಫೈನಲ್ನಲ್ಲಿ ಕ್ರೊವೇಷಿಯಾ ವಿರುದ್ಧ ಗೆದ್ದು ಫೈನಲ್ಗೆ ಏರಬೇಕು ಎನ್ನುವುದು ತಂಡದ ಹೆಬ್ಬಯಕೆ.

ಇತ್ತ, ಕ್ರೊವೇಷಿಯಾದ್ದೂ ಪರಿಸ್ಥಿತಿ ಇಂಗ್ಲೆಂಡ್ಗಿಂತ ಭಿನ್ನವಾಗೇನೂ ಇಲ್ಲ. 1998ರಲ್ಲಿ ಕೊನೆ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿದ್ದ ಕ್ರೊವೇಷಿಯಾ ಆ ಬಳಿಕ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ ದಾಖಲೆ ಬರೆಯುವ ಹುಮ್ಮಸ್ಸಿನಲ್ಲಿದೆ.

ಕ್ರೊವೇಷಿಯಾ ಮಿತಿ ಏನು..? ಇಂಗ್ಲೆಂಡ್ನ ಬಲವೇನು…?

ವಿಶೇಷ ಎಂದರೆ, ಈ ಬಾರಿ ವಿಶ್ವಕಪ್ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿರುವ ಕ್ರೊವೇಷಿಯಾ, ನಾಕೌಟ್ ಹಂತದ ಎರಡೂ ಪಂದ್ಯಗಳನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದುಕೊಂಡಿದೆ. ಇನ್ನು ಪ್ರಬಲ ಡೆನ್ಮಾರ್ಕ್ ಹಾಗೂ ರಷ್ಯಾ ವಿರುದ್ಧದ ಪಂದ್ಯಗಳನ್ನು ಕೂದಲೆಳೆ ಅಂತರದಲ್ಲಿ ಗೆದ್ದು ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ಆದರೆ ಇಂಗ್ಲೆಂಡ್‌ ಹ್ಯಾರಿ ಕೇನ್, ಆಶ್ಲೆ ಯಂಗ್, ಜಾನ್ ಸ್ಟೋನ್ಸ್, ಜೆಸ್ಸಿ ಲಂಗಾರ್ಡ್, ಎರಿಕ್ ಡೈಯರ್, ಡೆಲೆ ಅಲಿ ಹೀಗೆ ಘಟಾನುಘಟಿ ಆಟಗಾರರ ಪಡೆ ಹೊಂದಿದೆ. ಎರಡೂ ತಂಡಗಳ ಅಂಕಿ-ಅಂಶ ಒಂದೇ ರೀತಿ ಇದ್ದು, ಸಮಬಲದ ಪೈಪೋಟಿ ನಡೆಯುವ ಎಲ್ಲ ಲಕ್ಷಣಗಳು ಇವೆ.

ಇಂಗ್ಲೆಂಡ್ ಗೆಲ್ಲುವ ಹಾಟ್ ಫೆವರೀಟ್…? ವಿಶೇಷ ಎಂದರೆ ಇಂದಿನ ಹೈಟೆನ್ಷೆನ್ 2ನೇ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ಬುಕ್ಕಿಗಳ ಪ್ರಕಾರ ಗೆಲ್ಲುವ ಹಾಟ್ ಫೇವರೀಟ್ ಎಂದು ಹೇಳಲಾಗುತ್ತಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English