ಇಂಗ್ಲೆಂಡಿಗೆ ಸೋಲು..ಮೊದಲ ಬಾರಿ ಕ್ರೊವೇಷಿಯಾ ಫೈನಲ್​ಗೆ ಎಂಟ್ರಿ!

10:16 AM, Thursday, July 12th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

croatiaಮಾಸ್ಕೋ: ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ಕ್ರೊವೇಷಿಯಾ ತಂಡ ಫೈನಲ್ಗೆ ಎಂಟ್ರಿ ನೀಡಿದೆ. ಈ ಮೂಲಕ ಇದೇ ಮೊದಲ ಬಾರಿ ಫಿಫಾ ವಿಶ್ವಕಪ್ ಫೈನಲ್ಗೇರಿ ಇತಿಹಾಸ ನಿರ್ಮಿಸಿದೆ.

ರಷ್ಯಾದ ಲುಜ್ನಿಕ್ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಕ್ರೊವೇಷಿಯಾ 2-1 ಗೋಲುಗಳ ಅಂತರದಿಂದ ಸೋಲಿಸಿತು.

ಎರಡೂ ತಂಡಗಳು ಬಲಿಷ್ಠವಾಗಿದ್ದರಿಂದ ಪಂದ್ಯ ತೀವ್ರ ಹಣಾಹಣೆಗೆ ಸಾಕ್ಷಿಯಾಯಿತು. ಪಂದ್ಯದ ಮೊದಲಾರ್ಧದಲ್ಲೇ ಫ್ರೀಕಿಕ್ನಲ್ಲಿ ಕೀರನ್ ಟ್ರಿಪ್ಪಿರ್ ಗೋಲು ಗಳಿಸಿ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಮುನ್ನಡೆ ತಂದಿದ್ದರು. ಬಳಿಕ 68ನೇ ನಿಮಿಷದಲ್ಲಿ ಕ್ರೊವೇಷಿಯಾದ ಇವಾನ್ ಪೆರಿಸಿಕ್ ಗೋಲು ಗಳಿಸಿದರು. ಈ ಮೂಲಕ 1-1ರಿಂದ ಉಭಯ ತಂಡಗಳು ಸಮಬಲ ಸಾಧಿಸಿದವು.

ನಿಗದಿತ ಅವಧಿಯಲ್ಲಿ ಎರಡೂ ತಂಡಗಳು 1-1 ಗೋಲು ಗಳಿಸಿದ್ದರಿಂದ ನೀಡಲಾದ ಹೆಚ್ಚುವರಿ ಸಮಯದಲ್ಲಿ 109ನೇ ನಿಮಿಷದಲ್ಲಿ ಕ್ರೊವೇಷಿಯಾದ ಮಾರಿಯೋ ಮ್ಯಾಂಡುಚುಕಿಕ್ ಗೋಲು ಹೊಡೆದು ತಂಡಕ್ಕೆ ಮುನ್ನಡೆ ತಂದಿತ್ತರು. ಬಳಿಕ ಇಂಗ್ಲೆಂಡ್ ತಂಡ ಗೋಲು ಗಳಿಸುವ ತಂತ್ರಗಳನ್ನು ಕ್ರೊವೇಷಿಯಾ ವಿಫಲಗೊಳಿಸಿತು. ಅಂತಿಮವಾಗಿ 2-1ರಿಂದ ಕ್ರೊವೇಷಿಯಾ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿತು.

ಈಗಾಗಲೇ ಫ್ರಾನ್ಸ್ ತಂಡ ಕೂಡ ಫೈನಲ್ಗೆ ಬಂದಿದೆ. ಭಾನುವಾರ ನಡೆಯುವ ಫೈನಲ್ನಲ್ಲಿ ಫ್ರಾನ್ಸ್ ಹಾಗೂ ಕ್ರೊವೇಷಿಯಾ ಮುಖಾಮುಖಿಯಾಗಲಿವೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English