ಯುವತಿಯ ನಗ್ನ ಫೋಟೋ ವೈರಲ್..ಮೂವರ ಆರೋಪಿಗಳ ಬಂಧನ!

10:16 AM, Saturday, July 14th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

arrestedಮಂಗಳೂರು: ಯುವತಿಯನ್ನು ಪರಿಚಯಿಸಿಕೊಂಡು ಬಳಿಕ ಆಕೆಯ ಜೊತೆ  ನಗ್ನ ಫೋಟೋ ತೆಗೆಸಿ ಕೊಂಡು ವೈರಲ್ ಮಾಡಿದ ಆರೋಪದಡಿ ಮೂವರು ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಪೊಲೀಸರು ಬಂಧಿಸಿದ್ದಾರೆ.

ಸಂದೇಶ್, ಜಗದೀಶ್ ಮತ್ತು ನವೀನ್ ಬಂಧಿತ ಆರೋಪಿಗಳು.

ಸಂದೇಶ್ ಮೊದಲು ಯುವತಿಯನ್ನು ಪರಿಚಯಿಸಿಕೊಂಡು ಬಳಿಕ ಆಕೆಯ ಜೊತೆಗೆ ಸಲಿಗೆ ಹೆಚ್ಚಿಸಿಕೊಂಡಿದ್ದನಂತೆ. ನಂತರ ಆಕೆಯನ್ನ ಪುಸಲಾಯಿಸಿ ನಗ್ನ ಚಿತ್ರಗಳನ್ನು ಪಡೆದು ತನ್ನ ಸ್ನೇಹಿತರಾದ ಜಗದೀಶ್ ಮತ್ತು ನವೀನ್ ಜೊತೆ ಶೇರ್ ಮಾಡಿದ್ದಲ್ಲದೇ ಸಾಮಾಜಿಕ ಜಾಲತಾಣಕ್ಕೂ ಅಪ್ಲೋಡ್ ಮಾಡಿದ್ದ ಎಂಬ ಆರೋಪ ಕೇಳಿಬಂದಿದೆ.

ಈತನ ನೀಚ ಕೃತ್ಯ ತಿಳಿದ ಬಳಿಕ ಯುವತಿ ಆತನಿಂದ ದೂರವಾಗಿದ್ದಳಂತೆ. ಫೋಟೋಗಳು ವೈರಲ್ ಆದ ಬಳಿಕ ಪೊಲೀಸರು ವಿಚಾರಣೆ ಮಾಡಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English