- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಇಂದಿನಿಂದ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್, ವಿದ್ಯುತ್ ದರ ಏರಿಕೆ!

petrol-deisel [1]ಬೆಂಗಳೂರು: ರಾಜ್ಯದ ಜನತೆಗೆ ಸರ್ಕಾರ ಶಾಕ್ ನೀಡಿದ್ದು, ಇಂದಿನಿಂದ ಬಜೆಟ್ ಬರೆ ತಟ್ಟಲಿದೆ. ರೈತರ ಸಾಲ ಮನ್ನಾದ ಹೊರೆಯನ್ನು ಸರಿದೂಗಿಸುವ ಸಲುವಾಗಿ ಸರ್ಕಾರ ಕೆಲ ವಸ್ತುಗಳ ತೆರಿಗೆ ಏರಿಕೆ ಮಾಡಿದೆ.

ಇಂದಿನಿಂದ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್, ವಿದ್ಯುತ್ ದರ ಏರಿಕೆಯಾಗಲಿದೆ. ರಾಜ್ಯದಲ್ಲಿ ಪೆಟ್ರೋಲ್ ಮೇಲಿನ ಸೆಸ್ ಶೇಕಡಾ 30 ರಿಂದ 32 ಕ್ಕೆ ಏರಿಸಿರುವುದರಿಂದ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 1.14 ರೂಪಾಯಿ ಹೆಚ್ಚಳವಾಗಿದೆ. ಡೀಸೆಲ್ ಬೆಲೆ ಲೀಟರ್ಗೆ 1.12 ರೂಪಾಯಿ ಹೆಚ್ಚಳವಾಗಿದೆ‌.

ಗೃಹ ಬಳಕೆ ವಿದ್ಯುತ್ ದರದಲ್ಲಿಯೂ ಏರಿಕೆಯಾಗಲಿದ್ದು, ಮದ್ಯದ ಮೇಲೆ ಶೇ.4 ರಷ್ಟು ತೆರಿಗೆ ಹೆಚ್ಚಳವಾಗಲಿದೆ. ಪರಿಷ್ಕೃತ ದರ ಆಗಸ್ಟ್ 1ರಿಂದ ಜಾರಿಗೆ ಬರಲಿದೆ. ರೈತರ 34 ಸಾವಿರ ಕೋಟಿ ಸಾಲ ಮನ್ನಾ ಮೊತ್ತಕ್ಕೆ ಸಂಪನ್ಮೂಲ ಕ್ರೋಡಿಕರಣ ಮಾಡಲು ಮೈತ್ರಿ ಸರ್ಕಾರ ತೆರಿಗೆ ಹೆಚ್ಚಳ ಮಾಡಿದ್ದು, ವಿದ್ಯುತ್ , ಇಂಧನ, ಮದ್ಯದ ಮೇಲೆ ಸೆಸ್ ಹಾಕುವುದರಿಂದ ಸುಮಾರು 3000 ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹ ಆಗುವ ನಿರೀಕ್ಷೆಯಲ್ಲಿ ಸರ್ಕಾರವಿದೆ.