- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನಾನು ಕೊಡಗು, ದಕ್ಷಿಣ ಕನ್ನಡ, ಉತ್ತರ ಕರ್ನಾಟಕ ಎಲ್ಲಾ ಜಿಲ್ಲೆಗಳ ಮುಖ್ಯಮಂತ್ರಿ: ಕುಮಾರಸ್ವಾಮಿ

kumarswamy [1]ಬೆಂಗಳೂರು : ನಾನು ಜನರ ಮಧ್ಯೆ ಬದುಕುವ ಸಿಎಂ, ವಿಧಾನಸೌದದ ಮೂರನೇ ಮಹಡಿಯಲ್ಲಿ ಕೂರುವವನಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಕರ್ನಾಟಕ ರಾಜ್ಯ ವಿಕಲಚೇತನರ ಸೇವಾಸಂಸ್ಥೆಗಳ ಒಕ್ಕೂಟದಿಂದ ಆಯೋಜನೆಗೊಂಡಿರು ಮೈಸೂರು ಬ್ಯಾಂಕ್ ಸರ್ಕಲ್ನ ಕಾವೇರಿ ಭವನದಲ್ಲಿ ನಡೆಯುತ್ತಿರುವ ಸ್ಪಂದನ 2018 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನ್ನ ಹಾಗೂ ಜನರ ಮಧ್ಯೆ ಎತ್ತಿಕಟ್ಟಲು ನೋಡಬೇಡಿ ಯಾರು ಬೇಕಾದರೂ ಬಂದು ನನ್ನ ಬಳಿ ಸಮಸ್ಯೆ ಹೇಳಿಕೊಳ್ಳಬಹುದು.

ನನ್ನ ಶರ್ಟ್ ಹಿಡಿದು ಕೇಳಲಿ ಏನಾದರೂ ಅಗತ್ಯ ಇದ್ದರೆ. 86% ಅಂಕದೊಂದಿಗೆ ಎಮ್ಕಾಂ ಓದಿದ ಅಂಗವಿಕಲ ಹೆಣ್ಣುಮಗಳಿಗೆ ನಾನು ಹದಿನೈದು ಸಾವಿರ ರೂ. ಸಂಬಳದ ಕೆಲಸ ಕೊಡಿಸಿದೇನೆ. ಪೆಟ್ರೋಲ್ ಡೀಸೆಲ್ ಒಂದು ರೂಪಾಯಿ, ವಿದ್ಯುತ್ ಬೆಲೆ ತಿಂಗಳಿಗೆ ಹತ್ತು ರುಪಾಯಿ ಹೆಚ್ಚಾಗಬಹುದು ಇದು ಹೊರೆಯಾಗುತ್ತಾ, ನಾಡಿನ ಅಭಿವೃದ್ಧಿಗೆ ಜನ ಇಷ್ಟು ಸಪೋರ್ಟ್ ಮಾಡಲ್ವ ಎಂದರು.

ರಾಜ್ಯದ ಮೂವತ್ತು ಜಿಲ್ಲೆಯ ಮುಖ್ಯಮಂತ್ರಿ ನಾನು ಎರಡು ತಿಂಗಳಿಂದ ಟೀಕೆ ಮಾಡಿರುವುದು ಸಾಕು ನಾನು ಕೊಡಗು, ದಕ್ಷಿಣ ಕನ್ನಡ, ಉತ್ತರ ಕರ್ನಾಟಕ ಎಲ್ಲಾ ಜಿಲ್ಲೆಗಳ ಮುಖ್ಯಮಂತ್ರಿ ರೈತರ ಸಾಲಮನ್ನಾ ಹುಡುಗಾಟಿಕೆ ವಿಚಾರ ಅಲ್ಲ. ಸಾಲಮನ್ನಾ ಮಾಡಿ ನನ್ನ ಬದ್ಧತೆ ಪೂರೈಸಿದೇನೆ. ನನ್ನಲ್ಲಿ ದೋಷ ಇದ್ದರೆ ಬಂದು ತಿಳಿಸಿ ಮುಂದೊಂದು ದಿನ ಮಾಧ್ಯಮದವರೇ ನಗೆಪಾಟಲಿಗೆ ಈಡಾಗುತ್ತೀರಿ ಎಂದು ಮಾಧ್ಯಮಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.

ವಿಕಲಚೇತನ ಮಕ್ಕಳಿಗೆ ನೆಮ್ಮದಿ ಆತ್ಮಸ್ಥೈರ್ಯದ ಬದುಕನ್ನು ನೀಡಲಿ ಎಂದು ದೇವರಲ್ಲಿ ಬೇಡುತ್ತೇನೆ. ಇಪ್ಪತ್ತೊಂದು ರೀತಿಯ ವಿಕಲಚೇತನ ವ್ಯಕ್ತಿಗಳ ಅಭಿವೃದ್ಧಿಗಾಗಿ ಐದು ಕೋಟಿ ಅನುದಾನ ಮೀಸಲಿಟ್ಟಿದ್ದೇವೆ. ವಿಕಲಚೇತನರ ಸಾಲಮನ್ನಾ ಮಾಡಲು ನಾಲ್ಕು ಕೋಟಿ ಅನುದಾನ, ಇಪ್ಪತ್ತು ಎಕರೆ ಜಾಗದಲ್ಲಿ ವಿಕಲಚೇತನರ ಕ್ಯಾಂಪಸ್ ನಿರ್ಮಾಣಕ್ಕೂ ಆಯವ್ಯಯದಲ್ಲಿ ಮೀಸಲಿಡಲಾಗಿದೆ, ವಿದೇಶದಲ್ಲಿ ಪಿ ಹೆಚ್ ಡಿ ಪಡೆಯಲು ಹೋಗುವ ವಿಕಲಚೇತನ ಮಕ್ಕಳಿಗೆ ಒಂದು ಕೋಟಿ ತೆಗೆದಿರಿಸಲಾಗಿದೆ. ವಿಕಲಚೇತನ ಮಕ್ಕಳಿಗೆ ಆದ್ಯತೆ ನೀಡುವುದು ಸರ್ಕಾರದ ಜವಾಬ್ದಾರಿ ಎಂದರು.

ವಿಕಲಚೇತನರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯನ್ನ ಬೇರ್ಪಡಿಸಿ ಸ್ವಾತಂತ್ರ್ಯ ಇಲಾಖೆಯನ್ನಾಗಿ ಮಾಡುವುದು. ಹಿರಿಯ ನಾಗರಿಕ ಹಾಗೂ ಬುದ್ಧಿಮಾಂದ್ಯ ಮಕ್ಕಳಿಕೆ ಪ್ರತ್ಯೇಕ ಬಜೆಟ್ ನಿಗದಿ ಮಾಡಿ ಆರ್ಥಿಕ ಸೌಲಭ್ಯಗಳನ್ನು ನೀಡಬೇಕು. ಮತ್ತು ವಿಶೇಷ ಶಾಲೆಯಲ್ಲಿ ಬಯೋಮೆಟ್ರಿಕ್ ಸೇರಿದಂತೆ ಹಲವು ಬೇಡಿಕೆಗಳನ್ನು ಈ ಸಂದರ್ಭದಲ್ಲಿ ಮುಂಡಿಟ್ಟರು.

ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಮಾನಸಿಕ ಭಿನ್ನ ಸಾಮರ್ಥ್ಯದ ಹಾಗೂ ಬುದ್ಧಿಮಾಂದ್ಯ ಮಕ್ಕಳು ಭಾಗಿಯಾಗಿದ್ದು,ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಸಿಎಂಗೆ ಸಾಥ್ ಕೊಟ್ಟರು.