ಜುಲೈ 18 ಹುಬ್ಬಳ್ಳಿಯಲ್ಲಿ ಭಾರತದ ಅತಿದೊಡ್ಡ ಇನ್ ಕ್ಯುಬೇಷನ್ ಕೇಂದ್ರದ ಉದ್ಘಾಟನೆ

6:52 PM, Tuesday, July 17th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Sandboxಹುಬ್ಬಳ್ಳಿ: ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ತಂತ್ರಜ್ಞಾನ ನವೋದ್ಯಮ ಇನ್ ಕ್ಯುಬೇಟರ್‍ ಸ್ಯಾಂಡ್ ಬಾಕ್ಸ್ ಸ್ಟಾರ್ಟ್‌ಅಪ್ ವು ನಗರದಲ್ಲಿ ನೂತನ ಮೂಲಸೌಕರ್ಯಗಳಿರುವ ದೇಶದ ಅತಿದೊಡ್ಡ ಇನ್ ಕ್ಯುಬೇಷನ್ ಕೇಂದ್ರಕ್ಕೆ ಸ್ಥಳಾಂತರಗೊಳ್ಳಲಿದೆ.

ನಿಗದಿತ ಸಮಯದಲ್ಲಿ ನೂರಕ್ಕೂ ಹೆಚ್ಚು ಸ್ಟಾರ್ಟ್‌ಅಪ್ ಗಳ ಇನ್ ಕ್ಯುಬೇಷನ್ ಗೆ ಸ್ಥಳಾವಕಾಶ ಇರುವ ಕೇಂದ್ರವನ್ನು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಅಮಿತಾಬ್ ಕಾಂತ್ ಅವರು ಜುಲೈ 18 ರಂದು ನಡೆಯಲಿರುವ ಸಮಾರಂಭದಲ್ಲಿಉದ್ಘಾಟಿಸಲಿದ್ದಾರೆ. ಸ್ಯಾಂಡ್ ಬ್ಯಾಕ್ಸ್ ಸ್ಟಾರ್ಟ್‌ಅಪ್ ನ ಮಾತೃಸಂಸ್ಥೆಯಾದ ದೇಶಪಾಂಡೆ ಪ್ರತಿಷ್ಠಾನದ ಸಂಸ್ಥಾಪಕರು ಹಾಗೂ ಪೋಷಕರಾದ ಡಾ. ದೇಶ್ ದೇಶಪಾಂಡೆ ಅವರು ಉಪಸ್ಥಿತ ಇರಲಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಮೀಪದ ಗೋಕುಲ ರಸ್ತೆಯ 6.09 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ನೂತನ ಸೌಲಭ್ಯಗಳೊಂದಿಗೆ ಇನ್ ಕ್ಯುಬೇಷನ್ ಕೇಂದ್ರವನ್ನು ನಿರ್ಮಿಸಲಾಗಿದೆ. ತಯಾರಕರ ಪ್ರಯೋಗಶಾಲೆ ಮತ್ತು ಇಎಸ್ ಡಿಎಂ ಕ್ಲಸ್ಟರ್‍ ಗಳೂ ಸೇರಿದಂತೆ ಪೂರ್ಣಪ್ರಮಾಣದ ಸೌಲಭ್ಯಗಳನ್ನು ಹೊಂದಿರುವ ಭಾರತದ ಏಕೈಕ ಇನ್ ಕ್ಯುಬೇಷನ್ ಕೇಂದ್ರ ಇದಾಗಿದೆ. ಸ್ಟಾರ್ಟ್‌ಅಪ್ ವ್ಯವಸ್ಥೆಯು ಪ್ರಫುಲ್ಲವಾಗಿ ಅರಳುವುದಕ್ಕೆ ಅವಕಾಶ ಇರುವ ಸೌಲಭ್ಯಗಳನ್ನು ಹೊಂದಿದೆ.
’ಭಾರತದಲ್ಲಿ ಸುಮಾರು 110 ಕೋಟಿ ಜನರು ಗ್ರಾಮೀಣ ಮತ್ತು ಅರೆನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಬೃಹತ್ ಮತ್ತು ಮೆಟ್ರೊ ನಗರಗಳಲ್ಲಿ ವಾಸಿಸುತ್ತಿರುವ ಜನರಿಗಿಂತ ಗ್ರಾಮೀಣ ಮತ್ತು ನಗರ ಪ್ರದೇಶದ ಜನರು ಎದುರಿಸುತ್ತಿರುವ ಸಮಸ್ಯೆಗಳು ತೀರಾ ಭಿನ್ನವಾಗಿವೆ. ಹಾಗೆಯೇ ಆ ಸಮಸ್ಯೆಗಳಿಗೆ ವಿಭಿನ್ನ ರೀತಿಯ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಸ್ಯಾಂಡ್ ಬಾಕ್ಸ್ ಸ್ಟಾರ್ಟ್‌ಅಪ್ ಕೇಂದ್ರವು ಮೆಟ್ರೊ-ಬೃಹತ್ ನಗರಗಳಲ್ಲದೇ ಬೇರೆ ಕಡೆಗಳಲ್ಲಿನ ಜನರ ಸಮಸ್ಯೆಗಳನ್ನು ಬಗೆ ಹರಿಸುವ ಉದ್ದೇಶಿಸಲಾಗಿದೆ ಎಂದು ದೇಶ್ ದೇಶಪಾಂಡೆ ಅವರು ವಿವರಿಸುತ್ತಾರೆ.

Sandboxಕಳೆದ ಎಂಟು ವರ್ಷಗಳಲ್ಲಿ ಸ್ಯಾಂಡ್ ಬಾಕ್ಸ್ ಸ್ಟಾರ್ಟ್‌ಅಪ್ ಕೇಂದ್ರವು 80ಕ್ಕೂ ಹೆಚ್ಚು ಸುಸ್ಥಿರ, ಗಣನೀಯ ಮತ್ತು ಚೇತರಿಸಿಕೊಳ್ಳುತ್ತಿರುವ ಉದ್ಯಮ ಮಾದರಿಗಳನ್ನು ಸೃಷ್ಟಿಸುವುದಕ್ಕೆ ಕಾರಣವಾಗಿದೆ. ಇದರಿಂದ ೭೦ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಸ್ಥಳೀಯ ಆರ್ಥಿಕತೆಗೆ ಸೇರಿಸುವುದು ಸಾಧ್ಯವಾಗಿದೆ. ಸಹಭಾಗಿತ್ವದಲ್ಲಿರುವ ಹಲವು ಸಂಸ್ಥೆಗಳ ಪೈಕಿ 50ಕ್ಕೂ ಹೆಚ್ಚು ತಂತ್ರಜ್ಞಾನ ವಲಯದ ಪೆಟೆಂಟ್ (ಹಕ್ಕು ಸ್ವಾಮ್ಯ) ಪಡೆಯಲು ಅರ್ಜಿ ಸಲ್ಲಿಸಿವೆ. ತಂತ್ರಜ್ಞಾನ ಕ್ಷೇತ್ರದ ವಿವಿಧ ವಲಯಗಳಾದ ಇಮೇಜ್ ಪ್ರೊಸೆಸಿಂಗ್, ಕೃಷಿ ತಂತ್ರಜ್ಞಾನ, ಇಂಟರ್‍ ನೆಟ್ ಆಫ್ ಥಿಂಗ್ಸ್, ಸಂಪರ್ಕ, ಇ-ವಾಣಿಜ್ಯ, ಆರೋಗ್ಯ ಮತ್ತು ಸೇವಾ ಕ್ಷೇತ್ರಗಳಲ್ಲಿ ಕಂಪೆನಿಗಳು ಕಾರ್ಯನಿರ್ವಹಿಸುತ್ತಿವೆ. ಲಾಭಾಪೇಕ್ಷೆಯಿಲ್ಲದ ಹಾಗೂ ಸಮಾಜದ ಮೇಲೆ ಹೆಚ್ಚು ಪರಿಣಾಮ ಬೀರುವ ಯೋಜನೆಗಳಿಗಾಗಿ ತಮ್ಮನ್ನೇ ತೊಡಗಿಸಿಕೊಂಡಿರುವ ’ಸ್ಯಾಂಡ್ ಬಾಕ್ಸ್ ಸಂವಿಧಾ’ ತಂಡ ಕಾರ್ಯನಿರ್ವಹಿಸುತ್ತಿದೆ.
ಇದರಿಂದಾಗಿ ಗ್ರಾಮೀಣ ಮತ್ತು ಅರೆನಗರ ಪ್ರದೇಶದಲ್ಲಿ ವಾಸಿಸುವ ಜನರ ಸಮಸ್ಯೆಗಳನ್ನು ಅರಿತ ಮತ್ತು ಹೊಸದಾಗಿ ಉದ್ಯಮದಲ್ಲಿ ತೊಡಗಿಸಿಕೊಳ್ಳಬಯಸುವ ಉದ್ಯಮಿಗಳಿಗೆ ಅವಕಾಶ ದೊರಕಿದೆ. ಎದುರಾಗುವ ಸಮಸ್ಯೆಗಳನ್ನು ಬಗೆ ಹರಿಸುವ, ಪ್ರಯೋಗಕ್ಕೆ ತೆರೆದುಕೊಳ್ಳುವ ಮತ್ತು ಹೊಸ ಸಾಹಸಗಳಿಗೆ ತೆರೆದುಕೊಳ್ಳುವವರಿಗೆ ’ಸ್ಯಾಂಡ್ ಬಾಕ್ಸ್ ಸ್ಟಾರ್ಟ್‌ ಅಪ್ ಉದ್ಯಮಿಗಳ ಜೀವಂತ ಪ್ರಯೋಗಶಾಲೆ’ಯಾಗಿದೆ.

ಉದ್ಘಾಟನಾ ಸಮಾರಂಭವು

• ಕಾರ್ಯಕ್ರಮದಲ್ಲಿ ಮಾರ್ಗದರ್ಶಕರು, ಹೂಡಿಕೆದಾರರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಮುಖ ಅಧಿಕಾರಿಗಳು, ಮತ್ತು ಈಗಾಗಲೇ ಸ್ಟಾರ್ಟ್‌ಅಪ್ ಆರಂಭಿಸಿರುವ ಸಂಸ್ಥೆಗಳ ಪಾಲುದಾರರು ಭಾಗವಹಿಸುವುದರಿಂದ ಸ್ಟಾರ್ಟ್‌ಅಪ್ ವ್ಯವಸ್ಥೆಯ ಕುರಿತಂತೆ ಪರಸ್ಪರ ವಿಚಾರ ವಿನಿಮಯಕ್ಕೆ ಅವಕಾಶ ದೊರೆಯಲಿದೆ.
• ಉದ್ಯಮದ ಪ್ರಮುಖರು ಮತ್ತು ವಿಷಯ ತಜ್ಞರ ನಡುವೆ ಆಸಕ್ತಿದಾಯಕ ಚರ್ಚೆ ನಡೆಯಲಿದೆ.
• ಸ್ಯಾಂಡ್ ಬಾಕ್ಸ್ ಸ್ಟಾರ್ಟ್ ಅಪ್ ಗಳಿಗೆ ಪೂರ್ಣ ಪ್ರಮಾಣದ ಜಾಗತಿಕ ಮಟ್ಟದ ವೇದಿಕೆ ದೊರಕಲಿದೆ.
• ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳ ಮಾರುಕಟ್ಟೆಯನ್ನು ಅರಿಯಲು ಸಹಾಯಕವಾಗಲಿದೆ.
• ಕಲಿತವರಿಂದಲೇ ಕಲಿಯುವುದಕ್ಕೆ ಅವಕಾಶ ದೊರಕಲಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English