- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮನೆ ಮೇಲೆ ಬಿದ್ದ ಕಾರು… ಮನೆ, ಕಾರು ಜಖಂ!

car-fell-down [1]ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಓಮಿನಿ ಕಾರೊಂದು ರಸ್ತೆಯ ಕೆಲಭಾಗದಲ್ಲಿದ್ದ ಮನೆ ಮೇಲೆ ಬಿದ್ದಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸದ ಹಳುವಳ್ಳಿ ಗ್ರಾಮದ ಬಳಿ ನಡೆದಿದೆ.

ಕಾರಿನಲ್ಲಿ ಪ್ರವಾಸಿಗರಿದ್ದು ಮಾರುತಿ ಕಾರು ಸಂಪೂರ್ಣ ಜಖಂ ಆಗಿದೆ. ಕಾರು ಹೊರನಾಡು ದೇವಸ್ಥಾನದಿಂದ ಬರುವ ವೇಳೆಯಲ್ಲಿ ಈ ಅವಘಡ ಜರುಗಿದೆ.

ಕಾರಿನಲ್ಲಿದ್ದ ಪ್ರವಾಸಿಗರಿಗೆ ಸಣ್ಣ ಪುಟ್ಟ ಗಾಯಾಳಾಗಿದ್ದು, ಗಾಯಾಳುಗಳಿಗೆ ಕಳಸ ಸರ್ಕಾರಿ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಸ್ಥಳೀಯರ ಸಹಾಯದಿಂದ ಕಾರನ್ನು ಮೇಲೆತ್ತಲಾಗಿದ್ದು, ಕಳಸ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.