- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಶಿರೂರು ಶ್ರೀಗಳ ಲ್ಯಾಪ್‌ಟಾಪ್, 12 ಪೆನ್ ಡ್ರೈವ್, ಹಾರ್ಡ್ ಡಿಸ್ಕ್ ನಿಗೂಢ ಸ್ಥಳದಲ್ಲಿ!

shiroor swamy [1]ಉಡುಪಿ : ತೀವ್ರ ಚರ್ಚೆಯಲ್ಲಿರುವ ಶಿರೂರು ಲಕ್ಷ್ಮೀವರ ಶ್ರೀಗಳ ಭೂವ್ಯವಹಾರಗಳ ಮತ್ತು ಹೆಂಗಸರ ಸಹವಾಸ ಮಾಡಿದ ದಾಖಲೆಗಳಿರುವ ಆಪಲ್ ಕಂಪನಿಯ ಲ್ಯಾಪ್ ಟಾಪ್, 12 ಪೆನ್ ಡ್ರೈವ್ ಗಳು ಮತ್ತು ಎರಡು ಹಾರ್ಡ್ ಡಿಸ್ಕ್ ಗಳನ್ನು ಯಾರಿಗೂ ಸಿಗದಂತೆ ಅಜ್ಞಾತ ಸ್ಥಳದಲ್ಲಿಡಲಾಗಿದೆ ಎಂಬ ಸ್ಫೋಟಕ ಮಾಹಿತಿಯೊಂದು ಮಠದ ಮೂಲವೊಂದರಿಂದ ಹೊರಬಿದ್ದಿದೆ.

ಚಿನ್ನಾಭರಣ ಮತ್ತು ಶಿರೂರು ಮಠದ ಇತರ ದಾಖಲೆಗಳು ಸೋದೆ ಮಠಕ್ಕೆ ಸೇರುವ ಮುನ್ನ ಶಿರೂರು ಶ್ರೀಗಳ ಖಾಸಗಿ ಚಟುವಟಿಕೆಗಳಿದ್ದ ಅಮೂಲ್ಯ ದಾಖಲೆಗಳು, ಲ್ಯಾಪ್ ಟಾಪ್, ಪೆನ್ ಡ್ರೈವ್ ಮತ್ತು ಹಾರ್ಡ್ ಡಿಸ್ಕ್ ಗಳನ್ನು ನಾಪತ್ತೆ ಮಾಡಲಾಗಿದೆ .

ಸ್ವಾಮಿಗಳಿಗೆ ಸಂಗೀತದ ಹುಚ್ಚು ಇತ್ತು ಅದಕ್ಕಾಗಿ ಹಾಡುಗಳನ್ನು ಮತ್ತು ಮೂವೀಗಳನ್ನು ತರಿಸಿ ನೋಡುತ್ತಿದ್ದರು ಅದನ್ನು ತನ್ನ ಲ್ಯಾಪ್ ಟಾಪ್ ನಲ್ಲಿ ಹಾಕುತ್ತಿದ್ದರು. ಅವರು ಮುಂಬಯಿ ಬಿಲ್ಡರ್ ಗಳ ಜೊತೆ ಮಾಡಿದ್ದಾರೆ ಎನ್ನಲಾದ ವ್ಯವಹಾರ, ಕನಕ ಮಹಲ್, ಶಿರೂರು ಶ್ರೀ ಲಕ್ಷ್ಮೀವರ ಕಾಂಪ್ಲೆಕ್ಸ್ ಮತ್ತು ಇವರ ಸಹಬಾಗಿತ್ವದಲ್ಲಿ ಮಾಡಿರುವ ಭೂ ವ್ಯವಹಾರಗಳ ದಾಖಲೆಗಳು ಅದರಲ್ಲಿ ನಕಲು ಮಾಡಿಟ್ಟಿದ್ದರೆನ್ನಲಾಗಿದೆ.

ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ, ವಿಶ್ವ ಸಂತೋಷ ಭಾರತೀ ಸ್ವಾಮೀಜಿ ಗಳು ಸೇರಿ ಶಿರೂರು ಸ್ವಾಮಿ ಮುಂಬಯಿ ಉದ್ಯಮಿಗಳ ಜೊತೆ ಭೂ ವ್ಯವಹಾರ ನಡೆಸಿದ್ದರು ಎನ್ನುವ ಮಹತ್ವದ ಮಾಹಿತಿಯೊಂದು ಸಿಕ್ಕಿದೆ. ಶಿರೂರು ಶ್ರೀಗಳ ಭೂವ್ಯವಹಾರಗಳೆಲ್ಲು ಕೇಮಾರು ಸ್ವಾಮಿಗಳಿಗೆ ತಿಳಿದಿದೆ ಎಂಬುದನ್ನು ಖಚಿತವಾಗಿ ಬಲ್ಲ ಶಿರೂರು ಸ್ವಾಮಿಗಳ ಸಹಾಯಕರು ಹೇಳಿದ್ದಾರೆ.

ಸ್ವಾಮಿಗಳ ಮರಣಾನಂತರ ಶಿರೂರು ಮಠವನ್ನು ಸೋದೆ ಮಠ ವಹಿಸಿಕೊಂಡಿದ್ದು. ಸೋಮವಾರದಿಂದ ಸುಬ್ರಹ್ಮಣ್ಯ ಭಟ್ ಎಂಬವರು ಮಠವನ್ನು ನೋಡಿಕೊಳ್ಳುತ್ತಿದ್ದಾರೆ. ಮಠದಲ್ಲಿರುವ ಸುಮಾರು ನೂರು ಹಸುಗಳನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಅವರ ಮೇಲಿದೆ. ದನಗಳನ್ನು ಸಾಕಲು ಬೇಕಾಗುವ ಆರ್ಥಿಕ ನೆರವನ್ನು ಅವರು ಮಠದ ಭಕ್ತರಲ್ಲಿ ಕೇಳಿಕೊಂಡಿದ್ದಾರೆ.

shiroor swamy [2]