[1]ಮೂಡುಬಿದಿರೆ: ಸಿಎ-ಸಿಪಿಟಿ ಪರೀಕ್ಷೆಯಲ್ಲಿ ಆಳ್ವಾಸ್ ಪಿಯು ಕಾಲೇಜಿನ 74 ಹಾಗೂ ಆಳ್ವಾಸ್ ಪದವಿ ಕಾಲೇಜಿನ 18 ವಿದ್ಯಾರ್ಥಿಗಳು ಸಹಿತ ಒಟ್ಟು 92 ಮಂದಿ ಗರಿಷ್ಠ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ದಾಖಲೆ ನಿರ್ಮಿಸಿದೆ.
ಆಳ್ವಾಸ್ ಪದವಿ ಕಾಲೇಜಿನ ಸುಷ್ಮಾ.ಎನ್, ಸುಮಂತ್, ಪವಿತ್ರಾ, ಭಾಗ್ಯಶ್ರೀ, ಲವಿಟಾ ಕ್ಯಾಸ್ತಲಿನೋ, ಸ್ವಾತಿ ಕಿಣಿ, ನಿಖಿಲ್, ನಿಶಾ ಎಸ್.ಶೆಟ್ಟಿ. ದಿನಿತಾ ಎಂ.ಎಚ್, ಬಿ.ನವೀನ್ ಪೈ, ಪ್ರಜ್ವಲ್ ಬಿ.ಶೆಟ್ಟಿ, ನಯನಾ ಜಿ., ವರ್ಷಿತಾ, ಚಂದನಾ ಸಿ., ದೀರಜ್ ಬಿ.ಎನ್, ಲಾವಣ್ಯ, ಪವಿತ್ರಾ.ಪಿ.ಎನ್, ಚೈತ್ರಾ ಸಿ.ಎಚ್ ಉತ್ತೀರ್ಣರಾದ ವಿದ್ಯಾರ್ಥಿಗಳು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಎರಡೂ ಕಾಲೇಜುಗಳ ಸಾಧಕ ವಿದ್ಯಾರ್ಥಿಗಳು, ತರಬೇತುದಾರರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.