ಕೇತುಗ್ರಸ್ಥ ಚಂದ್ರಗ್ರಹಣ ಶುಭ ಅಶುಭ ಫಲಗಳ ಬಗ್ಗೆ ಪಂಡಿತರಿಂದ ತಿಳ್ಕೊಳ್ಳಿ

7:41 PM, Wednesday, July 25th, 2018
Share
1 Star2 Stars3 Stars4 Stars5 Stars
(5 rating, 1 votes)
Loading...
lunar-eclipseಬೆಂಗಳೂರು : ಆಷಾಢ ಮಾಸದ ಗುರು ಪೌರ್ಣಮಿಯಂದು ಜರುಗಲಿರುವ ಕೇತುಗ್ರಸ್ಥ ಚಂದ್ರಗ್ರಹಣವು  ಉತ್ತರಾಷಾಢ ನಕ್ಷತ್ರದ 4 ನೇ ಚರಣ, ಮಕರ ರಾಶಿಯಲ್ಲಿ ಜು. 27 ಶುಕ್ರವಾರದ ರಾತ್ರಿ 11.57 ನಿಮಿಷಕ್ಕೆ ಸ್ಪರ್ಶವಾಗುವುದು, ರಾತ್ರಿ 1.54ಕ್ಕೆ ಮಧ್ಯಕಾಲವಾಗಿದ್ದು, ರಾತ್ರಿ 2-45 ಕ್ಕೆ ಮೋಕ್ಷವಾಗುವುದು. 125 ವರ್ಷಕ್ಕೊಮ್ಮೆ ಜರುಗುವ ಅತೀ ದೀರ್ಘ ಸಮಯದ (3 ಗಂಟೆ 51 ನಿಮಿಷ) ಚಂದ್ರಗ್ರಹಣವು ಇದಾಗಿದೆ ಎಂದು ಸಾತ್ವಿಕ ಸನಾತನ ಸಂಸ್ಥೆಯ ಪಂ. ಶ್ರೀನಿವಾಸ ಭಟ್ ತಿಳಿಸಿದ್ದಾರೆ.

ಚಂದ್ರಗ್ರಹಣ ದಂಗವಾಗಿ ಜುಲೈ 27 ಮತ್ತು 28 ರಂದು ಚಂದ್ರಗ್ರಹಣ ಶಾಂತಿಪೂಜೆ ಹಾಗೂ ಹೋಮ  ಶತಮಾನಗಳ ಇತಿಹಾಸ ಹೊಂದಿರುವ ಪ್ರಾಚೀನ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಭಟ್ ತಿಳಿಸಿದ್ದಾರೆ.

ಈ ಚಂದ್ರಗ್ರಹಣವು ಮಕರ, ತುಲಾ, ಮಿಥುನ, ಕುಂಭ ರಾಶಿಯವರಿಗೆ ಮತ್ತು ರೋಹಿಣಿ, ಆಶ್ಲೇಷ, ಕೃತ್ತಿಕಾ ಹಾಗೂ ಶ್ರವಣಾ ನಕ್ಷತ್ರದವರಿಗೆ ಈ ರಕ್ತಚಂದ್ರಗ್ರಹಣದಿಂದ 6 ತಿಂಗಳು ಅಶುಭ ಕಾಲವಿದೆ.

ಧನು, ಕನ್ಯಾ, ಕರ್ಕ, ವೃಷಭ ರಾಶಿಯವರಿಗೆ ಮಧ್ಯಮ ಫಲವಿದ್ದರೆ, ಮೇಷ, ಸಿಂಹ, ವೃಶ್ಚಿಕ ಹಾಗೂ ಮೀನ ರಾಶಿಯವರಿಗೆ 6 ತಿಂಗಳು ಶುಭ ಫಲವಿದೆ.

ಧನಿಷ್ಠಾ ನಕ್ಷತ್ರದ ಧನು ರಾಶಿಯವರು ಮತ್ತು ತುಲಾ ರಾಶಿಯವರು ಜಾಗೃತರಾಗಿರಬೇಕು. ಅಶುಭ ಫಲವಿರುವ ಕೆಲ ರಾಶಿಯವರ ಸಂತಾನಕ್ಕೆ ತೊಂದರೆದಾಯಕವಾಗಿರುವುದಲ್ಲದೇ ವಂಶಾಭಿವೃದ್ಧಿಗೂ ತೊಡಕುಂಟಾಗಲಿದೆ.

ಅಶುಭ ಮತ್ತು ಮಧ್ಯಮ ಫಲವಿರುವ ರಾಶಿ ಮತ್ತು ನಕ್ಷತ್ರದವರು ಚಂದ್ರಗ್ರಹಣದ ಸಮಯದಲ್ಲಿ ನಿದ್ರಿಸದೇ ದೇವರ ಧ್ಯಾನದಲ್ಲಿ ಅಥವಾ ಪೂಜೆ ಪುನಸ್ಕಾರ, ಪಾರಾಯಣಗಳಲ್ಲಿ ತೊಡಗಿಕೊಂಡಿರುವುದು ಸೂಕ್ತ. ಮತ್ತು ಚಂದ್ರಗ್ರಹಣದ ಆರಂಭದ ಮೊದಲು ಹಾಗೂ ನಂತರ ಸ್ನಾನ ಮಾಡುವುದು ಮುಖ್ಯ.

ಶುಕ್ರವಾರದ ಮಧ್ಯಾಹ್ನ 12 ಗಂಟೆಯೊಳಗೆ ಊಟ ಮಾಾಡಿಕೊಳ್ಳಬಹುದು.

ಅಶಕ್ತರು, ವೃದ್ಧರು ಮತ್ತು ಮಕ್ಕಳು ಮಧ್ಯಾಹ್ನದ 3 ಗಂಟೆಯೊಳಗೆ ಊಟ ಮುಗಿಸಿಕೊಳ್ಳಬೇಕು. ನಂತರ ಜು.28 ರ ಶನಿವಾರದಂದು ಹತ್ತಿರದ ಶಿವಾಲಯದಲ್ಲಿ ಮಹಾದೇವನ ದರ್ಶನ ಪಡೆದುಕೊಳ್ಳುವುದು ಒಳ್ಳೆಯದು.

ಜು.27 ಮತ್ತು 28 ರಂದು ಶತಮಾನಗಳ ಇತಿಹಾಸ ಹೊಂದಿರುವ ಪ್ರಾಚೀನ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿರುವ ಜರುಗಲಿರುವ ರಕ್ತಚಂದ್ರಗ್ರಹಣದ ಶಾಂತಿ ಮತ್ತು ಹೋಮಕ್ಕೆ ಹೆಸರು ನೋಂದಾಯಿಸುವವರು ಪಂ. ಶ್ರೀನಿವಾಸ ಭಟ್ (9148996056)  ಅವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English