ಜುಲೈ 31ರಂದು ಶ್ರೀ ಧಾಮ ಮಾಣಿಲದಲ್ಲಿ ಮೂಡಪ್ಪ ಸೇವೆ

2:04 PM, Friday, July 27th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Manila Dhamaಬಂಟ್ವಾಳ: ಧರ್ಮವೇ ನಶಸಿ ಹೋಗುತ್ತಿರುದೆಂದು ಭ್ರಮೆಯ ಈ ಕಾಲದಲ್ಲಿ ಧರ್ಮೋನ್ನತಿಯ ಕಾರ್ಯಗಳ ಸಾಧು ಸಂತರಿಂದ ಬ್ರಾಹ್ಮಣ್ಯೇತರರಿಂದ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಪರಮ ಪೂಜ್ಯ ಸಂತ ನಿತ್ಯಾನಂದ ಸ್ವಾಮಿ ಗಳವರ ಬಾಲ ಭೋಜನದಂತಹ ಕಾರ್ಯಗಳು, ಮಕ್ಕಳಿಗೆ ಸಂಸ್ಕಾರಯುತ ಬದುಕು ಕಲ್ಪಿಸಲು ಸಾಕ್ಷಿ ಭೂತ ಕಾರ್ಯಕ್ರಮವಾಗಿದೆ.

ಶಿಕ್ಷಕರು, ಮಾತೆಯರು, ಹೆತ್ತವರು ವಿದ್ಯಾರ್ಥಿ ಜೀವನ ಕ್ರಮದಲ್ಲಿ ಸತ್ಕ್ರಮಗಳನು ಬೆಳೆಸುವ ಪ್ರಯತ್ನ ಪಡಬೇಕು. ಮುಂಬರುವ ಚಂದ್ರ ಗ್ರಹಣವು ಬಂಡವಾಳ ಶಾಹಿಗಳಿಗೆ ಸಾಧು ಸಂತರಿಗೆ, ಉದ್ಯಮಿಗಳಿಗೆ, ಜನ ಪ್ರತಿನಿಧಿಗಳ ಜೀವನಕ್ರಮದ ಮೇಲೆ ದುಷ್ಪಲಗಳನ್ನು ನೀಡಬಹುದಾದ ಸಾಧ್ಯತೆಗಳಿದ್ದು, ಪರಿಹಾರಾರ್ಥವಾಗಿ ಜೂಲೈ 31 ರಂದು ಶ್ರೀ ಧಾಮ ಮಾಣಿಲ ಕ್ಷೇತ್ರದಲ್ಲಿ ಧನ ಧ್ಯಾನ ದಾನಕ್ರಮವಾಗಿ ನೀಡುವ ಮತ್ತು ರಂಗ ಪೂಜೆ ಮತ್ತು ಮಾಡಪ್ಪ ಸೇವೆ ಕಾರ್ಯಗಳು ನೆಡೆಯಲಿದೆ ಎಂದು48 ದಿನಗಳ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದ 15 ನೇ ದಿನದ ಕಾರ್ಯಕ್ರಮದ ಧಾರ್ಮಿಕ ಆಶೀರ್ವಚನದಲ್ಲಿ ಪರಮಪೂಜ್ಯ ಮೋಹನ್ ದಾಸ್ ಪರಮಹಂಸ ಸ್ವಾಮೀಜಿಗಳು ಮಾಣಿಲದಲ್ಲಿ ಹೇಳಿದರು.

ಚಿತ್ರ ಕಲಾವಿದ ಸತೀಶ್ ಸಂಪಾಂಜೆಯವರು ತಮ್ಮ ಕೈ ಚಳಕದಲ್ಲಿ ರಚಿಸಿದ ಭಾವಚಿತ್ರ ಪರಮಪೂಜ್ಯ ಸ್ವಾಮೀಜಿಗಳವರು ಅನಾವರಣಗೊಳಿಸಿ ಧಾಮದಲ್ಲೂ ಚಿತ್ರಕಲಾ ಅಭ್ಯಾಸಕ್ಕೆ ಅವಕಾಶ ನೀಡಲಾಗುವುದು ಇದು ಕಲಾಪೋಷಣೆಗೊಂದು ಅವಕಾಶವಾಗುತ್ತದೆ ಎಂದು ಕಲಾವಿದರನ್ನು ಆಶೀರ್ವದಿಸಿದರು.

ಧಾರ್ಮಿಕ ಕಾರ್ಯಕ್ರಮದಲ್ಲಿ ಉದ್ಯಮಿ ತಿಮಪ್ಪ ಬಿಡದಿ ಬೆಂಗಳೂರು , ಉದ್ಯಮಿ ಜಗದೀಶ್ ಬೆಂಗಳೂರು , ಟ್ರಸ್ಟಿ ಚಂದ್ರಶೇಖರ್ ತುಂಬೆ, ಹರೀಶ್ ಪುತ್ತೂರು ಉಪಸ್ಥಿತರಿದ್ದರು. ಗೀತಾ ಪುರುಷೋತ್ತಮ್ ರವರು ಸ್ವಾಗತಿಸಿ ಶ್ರೀಮತಿ ವನಿತಾ ವಿಠಲ ಶೆಟ್ಟಿ ಪಸ್ತಾಪನೆಗೈದು ಕುಮಾರಿ ಮೀನಾರವರು ವಂದಿಸಿದ ಈ ಕಾರ್ಯಕ್ರಮವನ್ನು ಮಂಜು ವಿಟ್ಲ ರವರು ನಿರೂಪಿಸಿದರು.

Manila Dhama

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English