ಶಿಕ್ಷಕರಿಗೆ ಸುಲಭ ಪ್ರಾತ್ಯಕ್ಷಿಕೆಗಳ ತರಬೇತಿ

5:50 PM, Saturday, July 28th, 2018
Share
1 Star2 Stars3 Stars4 Stars5 Stars
(No Ratings Yet)
Loading...

pilukulaಮಂಗಳೂರು: ಸರಕಾರಿ ಶಾಲೆಗಳಲ್ಲಿ ವಿಜ್ಞಾನ ಕಲಿಕೆಯಲ್ಲಿ ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಅನುಸಾರವಾಗಿ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಜಿಲ್ಲೆಯ ಆಯ್ದ ಸರ್ಕಾರಿ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ಸುಲಭ ಪ್ರಾತ್ಯಕ್ಷಿಕೆಗಳ ತರಬೇತಿ ಕಾರ್ಯಕ್ರಮವನ್ನು ಜುಲೈ 25 ರಂದು ಏರ್ಪಡಿಸಲಾಗಿತ್ತು. ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾದ ಈ ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದ ಕೊಲ್ಕತ್ತಾದ ಬಿರ್ಲಾ ಇಂಡಸ್ಟ್ರಿ ಮತ್ತು ಟೆಕ್ನಾಲಜಿ ಮ್ಯೂಜಿಯಂನ ನಿವೃತ್ತ ನಿರ್ದೇಶಕ ಹಾಗೂ ಇಂತಹ ತರಬೇತಿ ಕಾರ್ಯಕ್ರಮಗಳನ್ನು ನಡೆಸಿ ಖ್ಯಾತರಾದ ಸಮರ್ ಕುಮಾರ್ ಬಾಗ್ಚಿ ಉದ್ಘಾಟಿಸಿದರು.

ವಿಜ್ಞಾನ ವಿಷಯದಲ್ಲಿ ಆಸಕ್ತಿ ಮೂಡಿಸಲು ಶಿಕ್ಷಕರು ಮಾಡಬಹುದಾದ ಕಡಿಮೆ ವೆಚ್ಚದ ಬೋಧನಾ ಸಾಧನಗಳನ್ನು ತಯಾರಿಸಿ ಅವುಗಳ ಮೂಲಕ ವಿಜ್ಞಾನ ವಿಷಯವನ್ನು ವಿದ್ಯಾರ್ಥಿಗಳಲ್ಲಿ ಹೇಗೆ ಗಟ್ಟಿಗೊಳಿಸಬೇಕು ಎಂಬುದರ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು , ಮಾದರಿ ಪಾಠವನ್ನು ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ಸಮ್ಮುಖದಲ್ಲಿ ಮಾಡಿ ತೋರಿಸಿ, ಹೇಗೆ ವಿಜ್ಞಾನವನ್ನು ಆಸಕ್ತಿದಾಯಕವಾಗಿ ಮಾಡಬಹುದೆಂದು ವಿವರಿಸಿದರು. ಅತಿಥಿಗಳಾಗಿ ಬಂದಿದ್ದ ಜಯಪ್ರಕಾಶ ನಾಯಕ್ ವೈಜ್ಞಾನಿಕ ಅಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೆ. ಜೆ. ಕುಮಾರ್ ನಿವೃತ್ತ ನಿರ್ದೇಶಕರು, ವಿ.ಐ.ಟಿ. ಯಂ ಬೆಂಗಳೂರು ಇವರು ಶಿಕ್ಷಕರು ಕೈಗೊಳ್ಳಬಹುದಾದ ಪರಿಸರ ಸಂಬಂಧಿ ಶೈಕ್ಷಣಿಕ ಕಾರ್ಯಕ್ರಮಗಳು, ಅನುದಾನ ಪಡೆಯುವ ಬಗೆಗಳ ಬಗ್ಗೆ ವಿವರಿಸಿದರು.

ಬಸು ಅವರು ಅತಿಥಿಗಳನ್ನು ಪರಿಚಯಿಸಿದರು. ರಾಧಾಕೃಷ್ಣ ಭಟ್ ತರಬೇತಿಯ ಉಪಯೋಗಗಳನ್ನು ತರಗತಿಯಲ್ಲಿ ಅನುಸರಿಸಲು ಕರೆಯಿತ್ತರು. ಕಾರ್ಯಕ್ರಮದ ಕೊನೆಯಲ್ಲಿ ನಡೆದ ಸಂವಾದದಲ್ಲಿ ಈ ಬಾರಿಯ ಹತ್ತನೇ ತರಗತಿಯ ಫಲಿತಾಂಶ ಉತ್ತಮಪಡಿಸಲು ವಿಜ್ಞಾನ ಬೋಧನೆಗೆ ಸಹಕಾರಿಯಾಗಲು ಯಾವ ಪ್ರಯತ್ನಗಳನ್ನು ಮಾಡಬಹುದು ಎಂಬುದರ ಬಗ್ಗೆ ಡಾ| ಕೆ. ವಿ ರಾವ್ ಅಧ್ಯಾಪಕರೊಂದಿಗೆ ಚರ್ಚಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English