ಮೂಡಬಿದೆರೆ: ಆಳ್ವಾಸ್ ಕಾಲೇಜಿನ ಎನ್‌ಸಿಸಿ ಭೂಸೇನೆಯು ತನ್ನ ವಾರ್ಷಿಕ ಕಾರ‍್ಯಕ್ರಮಗಳ ಉದ್ಘಾಟನೆ ಹಾಗೂ ಕಾರ್ಗಿಲ್ ವಿಜಯ ದಿನದ ಸಂಭ್ರಮಾಚರಣೆಯ ಅಂಗವಾಗಿ ಹಾನರಿಂಗ್ ಆವರ್ ನೇಶನ್ ಹೀರೋಸ್ ”ಕಾರ್ಗಿಲ್ ವಿಜಯ ದಿವಸ್” ಎಂಬ ಕಾರ‍್ಯಕ್ರಮವನ್ನು ಕಾಲೇಜಿನ ಕುವೆಂಪು ಸಭಾ ಭವನದಲ್ಲಿ, ಶನಿವಾರ ಹಮ್ಮಿಕೊಂಡಿತ್ತು.
ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಮಾಜಿ ಸುಬೇದಾರ್ ಮೇಜರ್ ರಾಜೇಂದ್ರ ಜಿ .ಕೆ ಕಾರ್ಗಿಲ್ ಯುದ್ದದ ಸನ್ನಿವೇಶವನ್ನು ವಿವರಿಸಿದರು. ಕಾರ್ಗಿಲ್ ಯುದ್ದದಲ್ಲಿ ಹೋರಾಡಿದ ಮಾಜಿ ವೀರ ಯೋಧ ಹವಾಲ್ದರ ಪ್ರಭಾಕರ ರೈ ಅವರನ್ನು ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಭಾಕರ, ದೇಶದ ರಕ್ಷಣೆಯ ಸೇವೆಗಿಂತ ದೊಡ್ಡ ಸೇವೆ ಜೀವನದಲ್ಲಿ ಬೇರೊಂದಿಲ್ಲ. ನಾವಿಂದು ಇಲ್ಲಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರೆ, ಅದು ಗಡಿಯಲ್ಲಿ ಗಾಳಿ,ಮಳೆ,ನೀರು ಯಾವುದನ್ನು ಲೆಕ್ಕಿಸದೆ, ಪ್ರಾಣದ ಹಂಗನ್ನು ತೊರೆದು ದೇಶವನ್ನು ಕಾಯುತ್ತಿರುವ ಸೈನಿಕರಿಂದಾಗಿ. ನಮ್ಮ ಸೈನಿಕರು ಸದಾ ಗೌರವಕ್ಕೆ ಅರ್ಹರು ಎಂದರು.
ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ‍್ಯ ಡಾ ಕುರಿಯನ್, ಎನ್‌ಸಿಸಿ ಸಶಕ್ತ ಹಾಗೂ ಸದೃಢ ಯುವ ಜನತೆಯನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಎನ್‌ಸಿಸಿ ಯುನಿಫಾರ್ಮ ತೊಟ್ಟಿರುವಾಗ ತೋರ್ಪಡಿಸುವ ಶಿಸ್ತು, ಬದ್ದತೆ, ಸಂಯಮ, ಯುನಿಫಾರ್ಮ ಧರಿಸದೆ ಇರುವಾಗಲೂ ಕಾಪಾಡಿಕೊಳ್ಳುವುದು ಅಗತ್ಯ. ಇಂದು ನಾವು ಪಕ್ಕದ ಪಾಕಿಸ್ತಾನ, ಚೀನಾ ದೇಶಗಳದೊಂದಿಗೆ ಹೋರಾಡುವ ಮೊದಲು, ನಮ್ಮನ್ನು ನಾಶಮಾಡುತ್ತಿರುವ ಡ್ರಗ್ಸ್, ಮಧ್ಯಪಾನ, ಕೋಮುವಾದ, ಪರಿಸರ ವಿರೋಧಿ ಚಟುವಟಿಕೆಗಳು, ಭ್ರಷ್ಟಾಚಾರ ವಿರುಧ್ಧ ಹೋರಾಡುವ ತುರ್ತು ನಮಗಿದೆ.
ದೇಶಕ್ಕಾಗಿ ದುಡಿಯುವ ಸೈನಿಕರು ನಮ್ಮ ದೇಶದ ಆಸ್ತಿ. ದೇಶಸೇವೆ ಸಲ್ಲಿಸುವುದು ಹಾಗೂ ನಮ್ಮ ಸೈನ್ಯದಲ್ಲಿ ಕಾರ‍್ಯನಿರ್ವಹಿಸುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಸಂಗತಿ ಎಂದರು.
ಕಾರ‍್ಯಕ್ರಮವನ್ನು ಕಾಲೇಜಿನ ಎನ್‌ಸಿಸಿ ಆಫೀಸರ್ ಕ್ಯಾಪ್ಟನ್ ಡಾ| ರಾಜೇಶ್ ಸ್ವಾಗತಿಸಿ, ಶ್ರೀಲಕ್ಮೀ ನಿರೂಪಿಸಿ, ಶ್ರೀನಿಧಿ ವಂದಿಸಿದರು.
ಕಾರ‍್ಯಕ್ರಮದಲ್ಲಿ ೧೮ ಕರ್ನಾಟಕ ಬ್ಯಾಟೇಲಿಯನ್ ಎನ್‌ಸಿಸಿ ಮಂಗಳೂರನ ಸುಬೇದಾರ್ ಪ್ರದ್ಯುಮ್ನ, ಎನ್‌ಸಿಸಿ ಆಫೀಸರ್ ಪರ್ವೆಜ್, ಸಿನೀಯರ್ ಕೆಡೆಟ್ ಪರೀಕ್ಷಿತ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English