- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಧಾರವಾಡ : ಮಿಲಾನ್ ಗರ್ಲ್ ಐಕಾನ್ ಲೀಡರ್ಸ್ ಗೆ ಸನ್ಮಾನ

Milan [1]ಧಾರವಾಡ : ಹೆಣ್ಣು ಮಕ್ಕಳು ತಮ್ಮ ಗುರಿಗಳನ್ನು ತಲುಪಲು ನಿರ್ದಿಷ್ಟವಾದ ಯೋಜನೆಗಳನ್ನು ಹಮ್ಮಿಕೊಂಡು ಅದರ ಯಶಸ್ಸಿಗೆ ಶ್ರಮಿಸುತ್ತ ಸತತ ಪ್ರಯತ್ನ ಮಾಡಬೇಕೆಂದು ಧಾರವಾಡ ಜಿಲ್ಲಾ ಪಂಚಾಯತ ಸಿ.ಇ.ಓ ಸ್ನೇಹಲ್ ಆರ್ ಅವರು ಹೇಳಿದರು.

ಅವರು ಇತ್ತೀಚೆಗೆ ಧಾರವಾಡದ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜರುಗಿದ ಮಿಲಾನ್ ಗರ್ಲ್ ಐಕಾನ್ ಲೀಡರ್ಸ್ ಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಸಾಧನ ಸಂಸ್ಥೆ ಸಂಸ್ಥಾಪಕಿ ಇಸಾಬೆಲ್ ಮಾತನಾಡಿ, ಹೆಣ್ಣುಮಕ್ಕಳ ಇಂದಿನ ಚಿಂತಾಜನಕ ಪರಿಸ್ಥಿತಿ ಈಗಾಗಲೇ ಎಲ್ಲರಿಗೂ ಗೊತ್ತಿದೆ ಅವರ ಸಮಸ್ಯೆಗಳನ್ನು ಪರಿಹರಿಸಲು ಎಲ್ಲರೂ ಶ್ರಮಿಸಬೇಕು ಎಂದರು.

12 ರಿಂದ 18 ವಯಸ್ಸಿನ 25 ಗರ್ಲ್ ಐಕಾನ್ ಲೀಡರ್ ಗಳು ಪ್ರತಿಯೊಬ್ಬ ಹೆಣ್ಣುಮಗುವಿಗೂ ಮಾದರಿಯಾಗಿ, ಆದರ್ಶಪ್ರಾಯ ಕಾರ್ಯಕರ್ತರಾಗಿ, ತಮ್ಮ ಸಮಾಜದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ 25 ಗರ್ಲ್ ಐಕಾನ್ ಲೀಡರ್ ಗಳಿಗೆ ತಮ್ಮ ಸಮುದಾಯದಲ್ಲಿ ಅಸಾಧರಣ ಸಾಮಾಜಿಕ ಬದಲಾವಣೆಯ ಧ್ವನಿಯಾಗಿದ್ದಕ್ಕೆ ಮಿಲಾನ್ ಅಭಿನಂಧನಾ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

Milan [2]ಮಿಲಾನ್ ಪೌಂಡೇಶನ್ 2018 ಜನೇವರಿಯಲ್ಲಿ ಮೊದಲ ಬಾರಿಗೆ 25 ಗರ್ಲ್ ಐಕಾನ್ ಲೀಡರ್ಸ್ ನ್ನು ಧಾರವಾಡದ ವಿವಿಧ ತಾಲ್ಲೂಕಿನಿಂದ ಆಯ್ದುಕೊಳ್ಳಲಾಗಿತ್ತು. ಈ ಆರು ತಿಂಗಳ ಅವಧಿಯಲ್ಲಿ ಅವರು ಮಾಡಿದ ಸಾಮಾಜಿಕ ಬದಲಾವಣೆಗಳ ಮೇಲೆ 5 ನಿಮಿಷಗಳ ವಿಡಿಯೋವನ್ನು ಪ್ರದರ್ಶಿಸಲಾಯಿತು. ಇದೇ ತರಹ ಮಧ್ಯ ಪ್ರದೇಶ, ಉತ್ತರ ಪ್ರದೇಶ ಹಾಗೂ ಕನಾರ್ಟಕದಲ್ಲಿ ಒಟ್ಟಾರೇ 144 ಮಿಲಾನ್ ಗರ್ಲ್ ಐಕಾನ್ ಲೀಡರ್ಸ್ ತಮ್ಮ ಸಮಾಜದಲ್ಲಿ ಇಂತಹ ಅದೆಷ್ಟೋ ಸಮಸ್ಯೆಗಳಗೆ ಪರಿಹಾರವನ್ನು ಒದಗಿಸಿಕೊಟ್ಟ ಮಾದರಿಯಾಗಿದ್ದಾರೆ ಹಾಗೂ ಅವರುಗಳು 2280 ಹದಿಹರೆಯದ ಬಾಲಕಿಯರನ್ನು ತಮ್ಮ ಗುಂಪಿನಲ್ಲಿ ಸೇರಿಸಿಕೊಂಡು ನಾಯಕತ್ವದ ಹಾದಿಗೆ ನಾಂದಿ ಹಾಡಿದ್ದಾರೆ.

Milan [3]ಈ ಮಿಲಾನ್ ಗರ್ಲ್ ಐಕಾನ್ ಲೀಡರ್ಸ್ ಮುಂದಿನ ದಿನಮಾನಗಳಲ್ಲಿ ಸಮಾಜದಲ್ಲಿ ಕಂಡು ಬರುವಂತಹ ಸಮಸ್ಯೆಗಳ ವಿರುದ್ಧ ದ್ವನಿಯೆತ್ತುವಂತಹ ಕಾರ್ಯಕರ್ತರಾಗುತ್ತಾರೆ. ಈ ಸನ್ಮಾನ ಕಾರ್ಯಕ್ರಮವು ಸಕರಾತ್ಮಕ ಸಮಾಜಿಕ ಬದಲಾವಣೆಗಳ ಪ್ರಯತ್ನಗಳ ಗುರುತಿಸುವಿಕೆ ಹಾಗೂ ಪ್ರೋತ್ಸಾಹಿಸುವುದಕ್ಕೋಸ್ಕರ ಹಮ್ಮಿಕೊಳ್ಳಲಾಗಿದೆ ಎಂದರು.

ದೇಶಪಾಂಡೆ ಫೌಂಡೇಶನ ನ ಅಮೋಲ್, ನಾಗವೇಣಿ ಮಾ, ಪ್ರಿಯಾ ದಿಗ್ವಿಜಯ ಮತ್ತು 200 ಕ್ಕೂ ಹೆಚ್ಚು ಬಾಲಕಿಯರು, ಶಾಲೆ ಪ್ರಾಂಶುಪಾಲರು, ಶಿಕ್ಷಕರು, ಸಂಘ ಸಂಸ್ಥೆಗಳ ಕಾರ್ಯಕರ್ತರು ಭಾಗವಹಿಸಿದ್ದರು.