- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನಾವು ಬದುಕಿರುವವರೆಗೂ ರಾಜ್ಯವನ್ನು ಇಬ್ಭಾಗ ಮಾಡಲು ಬಿಡಲ್ಲ: ಬಿ.ಎಸ್.ಯಡಿಯೂರಪ್ಪ

yedyurappa [1]ಹುಬ್ಬಳ್ಳಿ: ಕರ್ನಾಟಕ ಏಕೀಕರಣ ಆದ ಮೇಲೆ ಈ ರೀತಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಅಂತ ಯಾವ ಮುಖ್ಯಮಂತ್ರಿಯೂ ಮತನಾಡಿರಲಿಲ್ಲ. ಆದರೆ,ಸಿಎಂ ಕುಮಾರಸ್ವಾಮಿ ಒಡೆದಾಳುವ ನೀತಿಯನ್ನ ಅನುಸರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಿಎಂ ಮಾಧ್ಯಮದ ಮಿತ್ರರ ಮೇಲೆ ಹಗುರವಾಗಿ ಮಾತನಾಡುತ್ತಿದ್ದಾರೆ. ದೇವೇಗೌಡರು ಕುಮಾರಸ್ವಾಮಿ ಹೇಳಿಕೆ ಬಗ್ಗೆ ಒಂದು ಶಬ್ದ ಮಾತನಾಡುವುದಿಲ್ಲ. ಅವರ ತಂದೆಯ ಒಪ್ಪಿಗೆ ಇಲ್ಲದೆ ಇವರು ಈ ಮಾತು ಆಡುವುದಿಲ್ಲ ಎಂದರು.

ಬೆಳಗಾವಿಯಲ್ಲಿ ನೂರಾರು ಜನ ಸ್ವಾಮಿಗಳು ಪ್ರತ್ಯೇಕ ರಾಜ್ಯಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆ ಸ್ಥಳಕ್ಕೆ ಬಂದು ಅವರ ಮನವೊಲಿಸಲು ಪ್ರಯತ್ನ ಮಾಡಬೇಕು. ಇಡೀ ರಾಜ್ಯಕ್ಕೆ ಅನ್ನ ಕೊಡುತ್ತಿರುವುದು ಉತ್ತರ ಕರ್ನಾಟಕ. ಇಡೀ ಕರ್ನಾಟಕಕ್ಕೆ ಬೆಳಕು ನೀಡುವುದು ಕಾರವಾರ. ಬಜೆಟ್ನಲ್ಲಿ ಆಲಮಟ್ಟಿ ನೀರಾವರಿ ಯೋಜನೆ ಬಗ್ಗೆ ನಯಾ ಪೈಸೆ ತೆಗೆದು ಇಟ್ಟಿಲ್ಲಾ ಎಂದು ಹರಿಹಾಯ್ದರು.

ಈ ಹಿಂದೆ ನೀರಾವರಿ ಯೋಜನೆಗೆ ಸಿದ್ದರಾಮಯ್ಯ ಅನ್ಯಾಯ ಮಾಡಿದ್ದಾರೆ. ಹೈದರಾಬಾದ್ ಕರ್ನಾಟಕದಲ್ಲಿ ಸಾಕಷ್ಟು ಹುದ್ದೆ ಖಾಲಿ ಇವೆ. ಅವುಗಳನ್ನು ಭರ್ತಿ ಮಾಡಲು ಇವರು ಮನಸ್ಸು ಮಾಡಿಲ್ಲ. ಆಲಮಟ್ಟಿ ಉದ್ಯಾನವನವನ್ನ ಅಭಿವೃದ್ಧಿ ಮಾಡಿಲ್ಲ. ಕೆಆರ್‌ಎಸ್ ಅಭಿವೃದ್ಧಿ ಮಾಡಿದ್ದಾರೆ.

ನಾನು ಬೆಳಗಾವಿ ಸುವರ್ಣಸೌಧ ಮುಂದೆ ನಡೆಯುತ್ತಿರುವ ಪ್ರತಿಭಟನಾಕಾರರಲ್ಲಿ ಮನವಿ ಮಾಡುತ್ತೇನೆ. ಹೋರಾಟ ಮಾಡುವುದು ತಪ್ಪಲ್ಲ. ನಾವು ಬದುಕಿರುವವರೆಗೂ ರಾಜ್ಯವನ್ನ ಇಬ್ಭಾಗ ಮಾಡಲು ಬಿಡುವುದಿಲ್ಲ ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.