- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

26 ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ

Incharge [1]ಬೆಂಗಳೂರು :  ಕಾಂಗ್ರೆಸ್ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳ ನಂತರ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿದ್ದಾರೆ.

ಖಾತೆ ಹಂಚಿಕೆ ಬಳಿಕ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಮತ್ತು ಸಚಿವ ಸ್ಥಾನ ಪಡೆದುಕೊಂಡ ಸಚಿವರಲ್ಲೂ ಹಲವರು ಗೊಂದಲ ಹೊಂದಿದ್ದರಿಂದ ಸಿಎಂ ಕುಮಾರಸ್ವಾಮಿ ಅವರು ಜಿಲ್ಲಾ ಉಸ್ತುವಾರಿ ಸಚಿವರ ನೇಮಕವನ್ನು ಮುಂದೂಡುತ್ತಾ ಬಂದಿದ್ದರು. ಇಂದು ಸಂಜೆ ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿ, ಪಟ್ಟಿ ಬಿಡುಗಡೆ ಮಾಡಿದ್ದಾರೆ.

26 ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಲಾಗಿದ್ದು, ಕೆಲವರಿಗೆ ಎರಡೆರಡು ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ. ಕೆಲವು ಕಾಂಗ್ರೆಸ್ ಸಚಿವರಿಗೆ ಕಳೆದ ಬಾರಿ ಇದ್ದ ಜಿಲ್ಲೆಗಳ ಉಸ್ತುವಾರಿಯೇ ಈ ಬಾರಿಯೂ ಸಿಕ್ಕಿದೆ.

ಜಿಲ್ಲಾ ಉಸ್ತುವಾರಿ ಸಚಿವರಗಳ ವಿವರ ಇಲ್ಲಿದೆ

ಡಾ. ಜಿ ಪರಮೇಶ್ವರ್‌ – ಬೆಂಗಳೂರು ನಗರ ಮತ್ತು ತುಮಕೂರು.
ಆರ್‌. ವಿ ದೇಶಪಾಂಡೆ – ಉತ್ತರ ಕನ್ನಡ ಮತ್ತು ಧಾರವಾಡ
ಡಿ.ಕೆ ಶಿವಕುಮಾರ್‌ – ರಾಮನಗರ ಮತ್ತು ಬಳ್ಳಾರಿ
ಕೆ.ಜೆ ಜಾರ್ಜ್ – ಚಿಕ್ಕಮಗಳೂರು
ರಮೇಶ್‌ ಜಾರಕೀಹೊಳಿ – ಬೆಳಗಾವಿ
ಶಿವಾನಂದ ಪಾಟೀಲ್ – ಬಾಗಲಕೋಟೆ
ಪ್ರಿಯಾಂಕ್‌ ಖರ್ಗೆ – ಕಲಬುರಗಿ
ರಾಜಶೇಖರ ಬ. ಪಾಟೀಲ್ – ಯಾದಗಿರಿ
ವೆಂಕಟರಮಣಪ್ಪ – ಚಿತ್ರದುರ್ಗ
ಎನ್.ಎಚ್‌ ಶಿವಶಂಕರರೆಡ್ಡಿ – ಚಿಕ್ಕಬಳ್ಳಾಪುರ
ಕೃಷ್ಣೇಭೈರೇಗೌಡ – ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ
ಯು.ಟಿ ಖಾದರ್‌ – ದಕ್ಷಿಣ ಕನ್ನಡ
ಸಿ. ಪುಟ್ಟರಂಗಶೆಟ್ಟಿ – ಚಾಮರಾಜನಗರ
ಜಮೀರ್‌ ಅಹ್ಮದ್‌ – ಹಾವೇರಿ
ಜಯಮಾಲ – ಉಡುಪಿ
ಆರ್‌. ಶಂಕರ್‌ – ಕೊಪ್ಪಳ
ಎನ್‌. ಮಹೇಶ್‌ – ಗದಗ
ವೆಂಕಟರಾವ್‌ ನಾಡಗೌಡ – ರಾಯಚೂರು
ವಾಸು ಶ್ರೀನಿವಾಸ್‌ – ದಾವಣಗೆರೆ
ಸಿ.ಎಸ್‌ ಪುಟ್ಟರಾಜು – ಮಂಡ್ಯ
ಸಾ.ರಾ ಮಹೇಶ್ – ಕೊಡಗು
ಬಂಡೆಪ್ಪ ಕಾಶೆಂಪುರ್‌- ಬೀದರ್‌
ಎಚ್‌.ಡಿ ರೇವಣ್ಣ – ಹಾಸನ
ಡಿ.ಸಿ ತಮ್ಮಣ್ಣ – ಶಿವಮೊಗ್ಗ
ಎಂ.ಸಿ ಮನಗೂಳಿ – ಬಿಜಾಪುರ
ಜಿ.ಟಿ ದೇವೇಗೌಡ – ಮೈಸೂರು