- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೊಡಿಯಾಲ್ ಬೈಲ್ ನಲ್ಲಿ ಡೆಂಗ್ಯು ಜಾಗೃತಿ ಹಾಗೂ ಸೊಳ್ಳೆ ಪರದೆ ವಿತರಣೆ

prakash [1]ಮಂಗಳೂರು  :  ಕೊಡಿಯಾಲ್ ಬೈಲ್ 30ನೇ ವಾರ್ಡ್ ನ ವಿವೇಕನಗರ ಬಳ್ಳಾಲ್ ಬಾಗ್ ನಲ್ಲಿ, ವಿವೇಕಾನಂದ ಪಾರ್ಕ್ ಸಮಿತಿ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸತ್ಯಸಾರಮಾಣಿ ದೈವಸ್ಥಾನದ ವತಿಯಿಂದ ನಡೆದ ಸ್ವಚ್ಚತಾ ಕಾರ್ಯ ಹಾಗೂ ಮಲೇರಿಯಾ , ಡೆಂಗ್ಯು ಜಾಗೃತಿ ಹಾಗೂ ಸೊಳ್ಳೆ ಪರದೆ ವಿತರಣಾ ಕಾರ್ಯಕ್ರಮ ಸ್ಥಳೀಯ ಕಾರ್ಪೋರೇಟರ್ ಪ್ರಕಾಶ್ ಬಿ ಸಾಲ್ಯಾನ್‌ರವರ ನೇತ್ರತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾಗರಿಕರು ಸ್ವಚ್ಚ ಪರಿಸರ ನಮ್ಮೆಲ್ಲರ ಹೊಣೆ ಎಂದು ಭಾವಿಸಿ ಕೆಲಸ ನಿರ್ವಹಿಸಿದಾಗ ಮಾತ್ರ ಮಂಗಳೂರು ಸುಂದರ ನಗರವಾಗಲು ಸಾಧ್ಯ. ಸ್ವಚ್ಚತೆಯಲ್ಲಿ ರಾಮಕೃಷ್ಣ ಮಿಷನ್ ಕೈಗೊಂಡ ಕಾರ್ಯವು ನಮೆಗೆಲ್ಲರಿಗೂ ಮಾದರಿ. ಪ್ರಸ್ತುತ ನಗರದಲ್ಲಿ ಮಲೇರಿಯಾವು ಹೆಚ್ಚುತ್ತಿದ್ದು ಈ ಹಿನ್ನಲೆಯಲ್ಲಿ ಜನರಿಗೆ ಜಾಗೃತಿ ಕಾರ್ಯಕ್ರಮಗಳು ಅತ್ಯವಶ್ಯಕವಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್ ಪ್ರೇಮ್ ನಾಥ್ ಬಳ್ಳಾಲ್ ಬಾಗ್, ಕಾಂಗ್ರೆಸ್ ವಾರ್ಡ್ ಅಧ್ಯಕ್ಷರಾದ ರಘುರಾಜ್ ಕದ್ರಿ, ಪಾಲಿಕೆ ಆರೋಗ್ಯ ಅಧಿಕಾರಿ ಮಧು, ಸತ್ಯಸಾರಮಾಣಿ ದೈವಸ್ಥಾನದ ಅಧ್ಯಕ್ಷರಾದ ಸುನೀಲ್ ಕುಮಾರ್, ಶೇಕರ್ ಬಳ್ಳಾಲ್ ಬಾಗ್ , ದೇವಿಪ್ರಸಾದ್ ಕದ್ರಿ, ಸಿದ್ದಪ್ಪ, ಸಂಜೀವ , ಸಂತೋಷ್ , ರಾಧಕೃಷ್ಣ , ನವೀತ್, ಅಭಿಷೇಕ್, ದೀಪಿಕಾ ನೈಮಲ್ಯ ನಿರ್ದೇಶಕರು, ನಯನ್, ಶಿವಶಂಕರ್, ಶೋಭರಾಣಿ, ಗೋಪಾಲ್, ಸುರೇಶ್ ಯೋಗೀಶ್, ಮೊದಲಾದವರು ಉಪಸ್ಥಿತರಿದ್ದರು.