- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಗಣೇಶ ಹಬ್ಬ ಪರಿಸರ ಸ್ನೇಹಿಯಾಗಿ ಆಚರಿಸಲು ಕರೆ

Ganesha [1]

ಮಂಗಳೂರು : ಗಣೇಶ ಹಬ್ಬದ ಸಮಯದಲ್ಲಿ ಪ್ಲಾಸ್ಟರ್ ಅಫ್ ಪ್ಯಾರಿಸ್ ನ ಗಣೇಶ ವಿಗ್ರಹವನ್ನು ಕೊಂಡುಕೊಳ್ಳದೇ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡದೇ ಪಟಾಕಿ ಹಾಗೂ ಸಿಡಿಮದ್ದುಗಳನ್ನು ಉಪಯೋಗಿಸದೇ ಆಚರಿಸಲು ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸಲು ಕೋರಲಾಗಿದೆ.

ವಿಷಕಾರಿ ರಾಸಾಯನಿಕ ಲೋಹ ಲೇಪದ ಮೂರ್ತಿ ಬಳಕೆ ಮಾಡಬೇಡಿ. ಮಣ್ಣಿನ ನೈಸರ್ಗಿಕ ಬಣ್ಣದ ಗಣೇಶ ವಿಗ್ರಹವನ್ನು ಬಳಸಿ, ಸಾಮೂಹಿಕವಾಗಿ ನಡೆಸುವ ಗಣೇಶನ ಚಪ್ಪರಕ್ಕೆ  ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ. ಬಾವಿ, ಕೆರೆ, ನದಿಗಳಲ್ಲಿ ವಿಸರ್ಜನೆ ಮಾಡಬೇಡಿ, ನಗರಸಭೆ, ಮಹಾನಗರಪಾಲಿಕೆ ಹಾಗೂ ಪುರಸಭೆ ನಿಗಧಿ ಪಡಿಸಿರುವ ಕೆರೆಗಳಲ್ಲಿ ವಿಸರ್ಜಿಸಿ, ವಿಸರ್ಜಿಸುವ ಮೊದಲು ಹೂವು, ವಸ್ತ್ರ, ಹಾರಗಳನ್ನು ತೆಗೆಯಿರಿ. ಇದನ್ನು ಎಲ್ಲೆಂದರಲ್ಲಿ ಚರಂಡಿಯಲ್ಲಿ ಎಸೆಯಬೇಡಿ. ಕಸ ವಿಲೇವಾರಿ ವಾಹನಕ್ಕೆ ನೀಡಿ. ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ