- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಲಫಿ ಮೂವ್‌ಮೆಂಟ್ ಮುಖ್ಯಸ್ಥ ಇಸ್ಮಾಯಿಲ್ ಶಾಫಿ ನಿಧನ

Ismail Safi [1]ಮಂಗಳೂರು : ಸೌತ್ ಕೆನರಾ ಸಲಫಿ ಮೂವ್‌ಮೆಂಟ್ ಇದರ ಸಕ್ರಿಯ ಕಾರ್ಯಕರ್ತ ಇಸ್ಮಾಯಿಲ್ ಶಾಫಿ ( 58 )ಶುಕ್ರವಾರ ಬೆಳಗ್ಗೆ ತನ್ನ ಮನೆಯಲ್ಲಿ ನಿಧನರಾದರು.

ಇತ್ತೀಚೆಗೆ ಮೆದುಳು ರೋಗದಿಂದ ಪಡೀಲಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆ ಬಳಿಕ ಮನೆಯಲ್ಲಿಯೇ ಇದ್ದರು. ಅವರು ಮರೆಯು ರೋಗದಿಂದ ಖಿನ್ನರಾಗಿ ಬಳಲುತ್ತಿದ್ದರು.

ಮುಸ್ಲೀಂ ಯುವಕರು ದಾರಿ ತಪ್ಪುತ್ತಿರುವುದರ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುತ್ತಿದ್ದರು. ಅದನ್ನೇ ದುರುಪಯೋಗ ಪಡಿಸಿಕೊಂಡ ಕೆಲವು ಮತಾಂದರು ಅವರ ಹೇಳಿಕೆಗಳನ್ನು ತಿರುಚಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿ ಬಿಟ್ಟಿದ್ದರು. ಅವರ ಹೇಳಿಕೆಗಳು ಅವರಿಗೆ ಸಂಚಕಾರ ತಂದಿತ್ತು. ಆ ನಂತರ ಅವರು ಪತ್ರಿಕಾಗೋಷ್ಟಿ ನಡೆಸಿ ಇಸ್ಲಾಂ ಮತ್ತು ಕುರಾನ್ ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟೀಕರಣವನ್ನು ನೀಡಿದ್ದರು.

ಸೌತ್ ಕೆನರಾ ಸಲಫಿ ಮೂವ್‌ಮೆಂಟ್ ಇದರ ‘ದಾವಾ ವಿಂಗ್’ ಮುಖ್ಯಸ್ಥರಾಗಿದ್ದುಕೊಂಡು ನೈಜ ಇಸ್ಲಾಂ ಹೇಗಿರಬೇಕು, ಮತಾಂದತೆ, ಭಯೋತ್ಪಾದನೆ ಮತ್ತು ಗೋರಿ ಪೂಜೆಯನ್ನು ಕಡಾಖಂಡಿತವಾಗಿ ವಿರೋಧಿಸಿ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದರು.

ಅವರು ಮುಸ್ಲಿಮೇತರೊಂದಿಗೆ ಅನ್ಯೋನ್ಯವಾಗಿದ್ದರು ಜಿಲ್ಲೆ ಮತ್ತು ರಾಜ್ಯಾದ್ಯಂತ ಮುಸ್ಲಿಂಧರ್ಮದ ಬಗ್ಗೆ ಇತರರಿಗೆ ತಿಳಿಸುವ ಕಾರ್ಯದಲ್ಲಿ ತೊಡಗಿದ್ದರು. ದೇರಳಕಟ್ಟೆಯ ಬಿ.ಎ. ಅರಬಿಕ್ ಅಬಸಲುಲ್ ಉಲಾಮಾ ಅರಬಿಕ್ ಶಾಲೆಯ ಪ್ರಾಂಶುಪಾಲರಾಗಿದ್ದರು.

ಅವರ ಹುಟ್ಟೂರು ಪುತ್ತೂರಿನಲ್ಲಿ ‘ಇಶಾ’ ಎಂಬ ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿದ್ದ ಅವರು ತನ್ನ ತಾರ್ಕಿಕ ಬರಹಗಳಿಂದ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ಅವರು ಅಂತ್ಯಕ್ರಿಯೆ ಕಲ್ಲಾಪು ಸಮೀಪದ ಪಟ್ಲ ಖಬರಸ್ಥಾನದಲ್ಲಿ ಸಂಜೆ 4.00 ಗಂಟೆಗೆ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.